Home Local ಅಕ್ರಮ ಜಾನುವಾರು ಸಾಗಾಟ ಯಲ್ಲಾಪುರದಲ್ಲಿ ನಾಲ್ವರ ಬಂಧನ

ಅಕ್ರಮ ಜಾನುವಾರು ಸಾಗಾಟ ಯಲ್ಲಾಪುರದಲ್ಲಿ ನಾಲ್ವರ ಬಂಧನ

SHARE

ಯಲ್ಲಾಪುರ: ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳದ ಕಾಸರಗೋಡಿನ ವಧಾಗ್ರಹಕ್ಕೆ ಮಾಂಸಕ್ಕಾಗಿ ಕಡಿಯಲು ಹಿಂಸಾತ್ಮಕ ಹಾಗೂ ಕಾನೂನು ಬಾಹಿರವಾಗಿ ಸಾಗಿಸುತ್ತಿ 18 ದಷ್ಟ ಪುಷ್ಟ ಕೋಣಗಳನ್ನು ರಕ್ಷಣೆ ಮಾಡಿರುವ ಯಲ್ಲಾಪುರದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಬುಧವಾರ ನಸೂಕು ಹರಿಯುವ ಮುನ್ನ ನಡೆದ ಘಟನೆಯಾಗಿದ್ದು, ಲಾರಿಯನ್ನು ರಾತ್ರಿ ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಿಸಿ 4 ಜನ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.

ಕಾನಂಗಾಡ ಕಾಸರಗೋಡು ಕೇರಳ ನಿವಾಸಿ ಲಾರಿ ಚಾಲಕ ಜಲೀಲ್ ಎಂ ಹಮೀದ್ (49), ಇನ್ನೋರ್ವ ಚಾಲಕ ಚೆರ್ಕಳ ಕಾಸರಗೋಡು ಕೇರಳ ನಿವಾಸಿ ಕೆ ಬಾಲ ಅಂಬು(48), ಕಾಸರಗೋಡು ನಿವಾಸಿ ಅಹ್ಮದ್ ಕಬೀರ್ ಅಬ್ದುಲ್ಲಾ (30) ಹಾಗೂ ಕಾಸರಗೋಡು ನಿವಾಸಿ ಸಮೀರ್ ಮಹ್ಮದ್ (32) ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸ್ ನಿರೀಕ್ಷಕ ಡಾ.ಮಂಜುನಾಥ ನಾಯಕ, ಪಿಎಸ್ಐ ಶ್ರೀಧರ ಎಸ್ ಆರ್ ದಾಳಿಯ ನೇತೃತ್ವ ವಹಿಸಿದ್ದರು. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದ್ದು, ಜಾನುವಾರುಗಳನ್ನು ಗೋಶಾಲೆಗೆ ಕಳಿಸುವ ಕಾರ್ಯ ಮುಂದುವರೆದಿದೆ.