Home Local “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ ಪೂ ಶ್ರೀ ಶ್ರೀ ಸದಾನಂದ...

“ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ ಪೂ ಶ್ರೀ ಶ್ರೀ ಸದಾನಂದ ಸ್ವಾಮಿಗಳು

SHARE
ಪ ಪೂ  ಶ್ರೀ ಶ್ರೀ  ಸದಾನಂದ ಸ್ವಾಮಿಗಳು , ಶ್ರೀ ಶಿವಾನಂದಮಠ , ಮುಧೋಳ  ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
 ವೇ ಲಕ್ಷ್ಮೀನಾರಾಯಣ ಜಂಭೆ ಇವರು  ದೇವಾಲಯದ   ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು .  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .