Home Local ಬೈಕ್ ಅಪಘಾತ ಗಂಭೀರ ಸ್ಥಿತಿಯಲ್ಲಿ ಕಾರವಾರದ ಯುವಕ!

ಬೈಕ್ ಅಪಘಾತ ಗಂಭೀರ ಸ್ಥಿತಿಯಲ್ಲಿ ಕಾರವಾರದ ಯುವಕ!

SHARE

ಕಾರವಾರ : ಬೈಕ್‌ ಡಿಕ್ಕಿ ಸಂಭವಿಸಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಆರ್ ಟಿ ಓ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡವನನ್ನು ಕಾರವಾರ ತಾಲೂಕಿನ ಸರ್ವೋದಯ ನಗರದ ರೋಶನ್ ಬಾನಾವಳಿಕರ್ (21) ಎಂದು ಗುರುತಿಸಲಾಗಿದೆ.

ಯುವಕ ಕೋಡಿಬಾಗದಿಂದ ಕಾರವಾರ ಕಡೆ ಪ್ರಯಾಣಿಸುತ್ತಿರುವ ಸಮಯದಲ್ಲಿ ಎದುರಿನಿಂದ ವೇಗವಾಗಿ ಬಂದ ಉಸುಕು ತುಂಬಿದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದೆ ಇದರಿಂದಾಗಿ ಆತ ಸ್ಥಳದಲ್ಲೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿರುವ ಯುವಕ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಗೋವಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ವರದಿ:S ರಾಜೀವ,ಕಾರವಾರ