Home Local ವಿತರಣೆಯಾಯ್ತು ಉಚಿತ ಗ್ಯಾಸ್ ಕಿಟ್ : ಬಡವರ ಮೊಗದಲ್ಲಿ ಮಂದಹಾಸ

ವಿತರಣೆಯಾಯ್ತು ಉಚಿತ ಗ್ಯಾಸ್ ಕಿಟ್ : ಬಡವರ ಮೊಗದಲ್ಲಿ ಮಂದಹಾಸ

SHARE

ಕುಮಟಾ: ಬಾಡದ ಜ್ಯೇಷ್ಠಪುರದ ಸಮಾಜಮಂದಿರದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 15 ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸೂರಜನಾಯ್ಕ ಸೋನಿಯವರು ಮಾತನಾಡಿ ಗ್ಯಾಸನ್ನು ಸುರಕ್ಷಿತವಾಗಿ ಉಪಯೋಗಿಸುವಂತೆ ತಿಳಿಸಿ ಸುರಕ್ಷತೆಯ ಬಗ್ಗೆ ವಿವರಣೆ ನೀಡುತ್ತಾ ಈ ಕುರಿತಾಗಿ ಶ್ರಮಿಸಿದವರನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಕೇವಲ ಬಿಜೆಪಿ ಪಕ್ಷದಿಂದ, ಬಿಜೆಪಿ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಯಾವುದೇ ರೀತಿಯ ಹಣ ವ್ಯಯಿಸದೇ ಮನೆ ಬಾಗಿಲಿಗೆ ಸಿಲಿಂಡರಗಳನ್ನು ತಲುಪಿಸುವುದು ಸಾಧ್ಯವಾಗಿದೆ. ಇದೇ ಕೆಲಸವನ್ನು ಕಾಂಗ್ರೆಸ್ / ಜೆಡಿಎಸ್ ನವರು ಮಾಡಿದಲ್ಲಿ ನೀವು ಹಣ ವ್ಯಯಿಸುವುದು ಅನಿವಾರ್ಯವಾಗಿತ್ತು. ಮತ್ತು ಈ ಕುರಿತಾಗಿ ನಾಗರಾಜ ನಾಯಕ ತೊರ್ಕೆಯವರು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮೂಲಕ ಫಲಾನುಭವಿಗಳಿಗೆ ಉಚಿತ ಲೈಟರಗಳನ್ನು ಕೂಡಾ ನೀಡಿ ಮೋದಿಯವರ ಈ ಕಾರ್ಯದಲ್ಲಿ ಅಳಿಲು ಸೇವೆ ಸಲ್ಲಿಸಿದ್ದಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಈ 15 ಮಂದಿ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ಗಳನ್ನು ತಲುಪಿಸುವಲ್ಲಿ ಶ್ರಮಿಸಿದ ಪ್ರಮುಖ ಕಾರ್ಯಕರ್ತರಾದ ಸುಮನಾ ಪಟಗಾರ, ಕೇಶವ ಪಟಗಾರ, & ಈ ಭಾಗದ ಬಿಜೆಪಿ ಧಿರೀಣರು ಅತ್ಯಂತ ಮುತುವರ್ಜಿಯಿಂದ ಈ ಯೋಜನೆಯನ್ನು ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು. ಮತ್ತು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆ ಬಡವರಿಗೇ ಸಿಗುವ ಸೌಲಭ್ಯವಾಗಿದ್ದು, ಹೊಗೆಯಿಂದ ತಾಯಂದಿರ ಶ್ವಾಸಕೋಶ & ಕಣ್ಣಿನ ಮೇಲಾಗುವ ದುಷ್ಪರಿಣಾಮವನ್ನು ತಡೆಗಟ್ಟಿ ಸ್ವಾಸ್ಥ್ಯ ಕಾಪಾಡಲು ಹಾಗೂ ಉರುವಲದಿಂದಾಗಿ ಪರಿಸರ ನಾಶವಾಗುವುದನ್ನು ತಡೆಗಟ್ಟಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಯಾವುದೇ ಅವಗಢದ ಸಂದರ್ಭದಲ್ಲಿ 6 ಲಕ್ಷ ರೂ. ವಿಮಾ ಸೌಲಭ್ಯ, ಆಸ್ತಿ ನಾಶವಾದಲ್ಲಿ 2 ಲಕ್ಷ ರೂ. ಪರಿಹಾರ ನೀಡುವುದು ಕೂಡಾ ಈ ಯೋಜನೆಯಲ್ಲಿದೆ.

ಫಲಾನುಭವಿಗಳಾದ ಶಾಂತಿ ಶ್ರೀಧರ ಪಟಗಾರ, ಬೀರು ಜಟ್ಟಿ ಪಟಗಾರ, ಭಾಗೀರಥಿ ಎಸ್. ಪಟಗಾರ, ಮುಕ್ತಾ ಎಸ್. ಕೊಡಿಯ, ಚಂದ್ರಕಲಾ ಎನ್. ಪಟಗಾರ, ಗಂಗಾ ಹುಲಸ್ವಾರ, ಲಕ್ಷ್ಮಿ ಮಂಜುನಾಥ ಹಳ್ಳೇರ, ಚಂದ್ರಕಲಾ ರಾಮು ಹಳ್ಳೇರ, ದೇವಕಿ ಬಿ. ನಾಯ್ಕ, ಕುಸುಮಾ ಎಮ್.ನಾಯ್ಕ, ಮಾದೇವಿ ಶಾಂತಾರಾಮ ಗುನಗ, ಲಕ್ಷ್ಮಿ ಬಿ. ಪಟಗಾರ, ಗಿರಿಜಾ ಶಾಂತಾರಾಮ ಗುನಗ, ಕಮಲ ಪಿ. ನಾಯ್ಕ, ದೇವಿ ನಾಗು ಹಳ್ಳೇರ ಇವರುಗಳು ಉಚಿತ ಗ್ಯಾಸ್ ಕಿಟ್ ಗಳನ್ನು ಪಡೆದು ಸಂತಸಪಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರ ಮಾರ್ಕಂಡೇಯ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ.ಎಸ್.ಗುನಗ ಬಿ.ಡಿ.ಪಟಗಾರ, ನಾಗರಾಜ ನಾಯ್ಕ, ಸುಮನಾ ಪಟಗಾರ, ಕೇಶವ ಪಟಗಾರ, ಸಂತೋಷ, ಬಾಡ ಪಂಚಾಯತದ ಸದಸ್ಯರುಗಳಾದ ಹರೀಶ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.