Home Local ಅರ್ಥಪೂರ್ಣವಾಗಿ ಆಚರಿಸಿದ ಸಮಾಜಕಾರ್ಯ ತರಬೇತಿ ಶಿಬಿರ

ಅರ್ಥಪೂರ್ಣವಾಗಿ ಆಚರಿಸಿದ ಸಮಾಜಕಾರ್ಯ ತರಬೇತಿ ಶಿಬಿರ

SHARE

ಹೊನ್ನಾವರ; ತಾಲೂಕಿನ ಅರೇಅಂಗಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿಗಾರ, ಕವಲಕ್ಕಿ ಇವರ ಆಶ್ರಯದಲ್ಲಿ ಸಿರಿ ಬಿ. ಎಸ್. ಡಬ್ಲ್ಯು. ಕಾಲೇಜು ಅರೇಅಂಗಡಿ, ಹೊನ್ನಾವರ ಇವರು ನಡೆಸಿರುವ -ಗ್ರಾಮೀಣ ಅಭ್ಯುದಯದೆಡೆಗೆ ಸಮಾಜ ಕಾರ್ಯಕರ್ತನ ನಡಿಗೆ- ಈ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡುತ್ತಾ ಸಿರಿ ಬಿ. ಎಸ್. ಡಬ್ಲ್ಯು. ವಿದ್ಯಾರ್ಥಿಗಳ ಗ್ರಾಮೀಣ ಸಮಾಜಸೇವೆಯ ತರಬೇತಿ ಕುರಿತು ಮಾತನಾಡುತ್ತಾ ಗ್ರಾಮೀಣ ಸಮಾಜ ಮುಂದುವರಿಯಲು ಸರಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದನ್ನು ಪಡೆಯುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರು ಸಂಘಟಿತರಾಗಿ ತಿಳಿವಳಿಕೆ ನೀಡುವುದರೊಂದಿಗೆ ಅಗತ್ಯವಿದ್ದಲ್ಲಿ ಹೋರಾಡುವ ಮನೋಭಾವನೆ ಹುಟ್ಟಿಸುವ ಅವಶ್ಯಕತೆ ಇದೆ. ಇಂದಿನ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ. ಈ ಕುಗ್ರಾಮದಲ್ಲಿ ಜನರನ್ನು ಸಂಘಟಿಸಿ ಕಳೆದ ಏಳು ದಿನಗಳ ಕಾಲಾವಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ತಾವು ಅಭ್ಯಸಿಸುವುದರೊಂದಿಗೆ ಜನರನ್ನು ಸಂಘಟಿಸುವಲ್ಲಿ ಕೂಡಾ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಅನೇಕ ಸಾಧಕರನ್ನು ಸನ್ಮಾನಿಸಿ ಪುರಸ್ಕರಿಸಿರುವುದು ನಿಜಕ್ಕೂ ಅರ್ಥಪೂರ್ಣ. ಸಮಾಜದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಲ್ಲಿ ಪ್ರತಿಭೆಗಳು ಹೊರಹೊಮ್ಮುವಲ್ಲಿ ಸಹಾಯಕಾರಿಯಾಗುತ್ತದೆ. ಅಂತೆಯೇ ಈ ಸಮಾರಂಭದಲ್ಲಿ ಮಹಿಳೆಯರೇ ಜಾಸ್ತಿ ಇರುವುದನ್ನು ನೋಡಿ ಪ್ರಧಾನಿ ಮೋದಿಯವರ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಅರ್ಥಪೂರ್ಣ ಅನಿಸುತ್ತಿದೆ. ಸಮಾಜದಲ್ಲಿ ಹೆಣ್ಣು ಭ್ರೂಣವನ್ನು ಕಾಪಾಡುವ, ಪೋಷಿಸುವ ಮತ್ತು ಗಂಡುಮಕ್ಕಳಿಗೆ ಸಿಗುವ ಎಲ್ಲಾ ಅವಕಾಶಗಳನ್ನೂ ಹೆಣ್ಣು ಮಕ್ಕಳಿಗೂ ಕೊಡುವ ಅಗತ್ಯತೆ ಇದೆ. ಕಳೆದ ಒಲಿಂಪಿಕ್ಸ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕಗಳು ದೊರೆತು ಭಾರತದ ಕೀರ್ತಿ ಪತಾಕೆ ಹಾರಿದ್ದು ಹೆಣ್ಣು ಮಕ್ಕಳಿಂದಲೇ. ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಪ್ರಸ್ತಾಪಿಸಿ ನಾವು ಶಾಲೆ, ಊರು, ತಾಲೂಕು, ರಾಜ್ಯ, ದೇಶ, ನದಿಗಳು ಇವುಗಳನ್ನು ಸ್ವಚ್ಚವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಇದರಿಂದ ನಮ್ಮ ಮತ್ತು ಸಮಾಜದ ಗುಣಮಟ್ಟ ಉತ್ತಮವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಸ್ವಚ್ಛಭಾರತ ಅಭಿಯಾನದಂತಹ ಮಹತ್ಕಾರ್ಯವನ್ನು ಆರಂಭಿಸಿರುವುದು ಪ್ರಶಂಸನೀಯ ಎಂದು ನುಡಿದು ಎಲ್ಲ ವಿದ್ಯಾರ್ಥಿಗಳಿಗೂ ಶುಭ ಕೋರಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯೆ ಶ್ರೀಮತಿ ಶ್ರೀಕಲಾ ಶಾಸ್ತ್ರಿಯವರು ವಹಿಸಿದ್ದರು. ಇವರು ಮಾತನಾಡಿ ಇಂತಹ ಕಾರ್ಯಕ್ರಮಗಳು ತೀರಾ ಅಗತ್ಯವೂ ಆಗಿದೆ ಎಂದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಅರುಣ ನಾಯ್ಕ, ಕೃಷ್ಣಾ ಆಚಾರಿ, ನಾಗಪ್ಪ ಭಟ್, ಛಾಯಾ ನಾಯ್ಕ, ಶ್ರೀರಾಮ ಭಟ್ ಉಪಸ್ಥಿತರಿದ್ದರು.