Home Article ಯಕ್ಷದಿಗ್ಗಜ ಚಿಟ್ಟಾಣಿಗೆ ಕಾವ್ಯ ನಮನ

ಯಕ್ಷದಿಗ್ಗಜ ಚಿಟ್ಟಾಣಿಗೆ ಕಾವ್ಯ ನಮನ

SHARE
ನೆನಪಿನಂಗಳದಿ ನೆಲೆನಿಂತ
ಚಿಟ್ಟಾಣಿಯ ಸರದಾರ
ಯಕ್ಷರಂಗದ ಹರಿಕಾರ
ಯಕ್ಷ ಅಂಬರದ
ಪೂರ್ಣ ಚಂದ್ರ
ಚಿಟ್ಟಾಣಿಯ ರಾಮಚಂದ್ರ
ಓದಿಗೂ ಮೀರಿದ ಗದ್ದುಗೆ ಏರಿ
ಯಕ್ಷಲೋಕದ ಹಿರಿಯಣ್ಣನಾದ
ಬಡಗುತಿಟ್ಟಿನ ದಿಗ್ಗಜ
ಕೃಷ್ಣ ಪಾರಿಜಾತದಿ ಅಗ್ನಿ
ವಿರಾಟ ಪರ್ವದಿ ಕೀಚಕ.
ಜನಮಾನಸದಿ ನಿಂತ  ಬಸ್ಮಾಸುರ
ಸರಳ ಸಜ್ಜನಿಕೆಯ ಅಜ್ಜ
ರಂಗಸ್ಥಳದಿ ಮಹಾರಾಜ
ದಿಗಂತದಲ್ಲಿ ಲೀನವಾದ ಕೌರವ
ಬಿರುದು ಸನ್ಮಾನಕ್ಕೆ ಲೆಕ್ಕವಿಲ್ಲ
ಯಕ್ಷರಂಗಕ್ಕೆ ನೀನೆ ಮೊದಲು
ಪದ್ಮಶ್ರೀ ತಂದಿಟ್ಟೆಯಲ್ಲ.
ಯಕ್ಷರಂಗದಿ ಮರೆಯಾಗಿ
ಅಭಿಮಾನಿಗಳ ಎದೆಯಲ್ಲಿ
ನೆಲೆಯಾದ ಯಕ್ಷದಿಗ್ಗಜ
✍ಉಮೇಶ ಮುಂಡಳ್ಳಿ ಭಟ್ಕಳ