Home Article ಮಗುವಿನ ಚಿಂತನೆ..

ಮಗುವಿನ ಚಿಂತನೆ..

SHARE

ಲೇಖಕರು:- ಗಣೇಶ ಕೆ.ಎಸ್

ಜೀವನದಲ್ಲಿ ಆಕಸ್ಮಿಕವಾಗಿ ನಮಗೆ ಬಂದೊದಗುವುದು ನಮ್ಮ ಜನನ ಮತ್ತು ಮರಣ. ಒಂದು ಸಂಭ್ರಮಕ್ಕೆ ಕಾರಣವಾದರೆ ಮತ್ತೊಂದು ದುಃಖಕ್ಕೆ ದಾರಿ. ಭಗವದ್ಗೀತೆಯಲ್ಲಿ  ಹೇಳಿದಂತೆ ಒಂದು ಮರಣವು ಇನ್ನೊಂದು ಜನ್ಮಕ್ಕೆ ಮುನ್ನುಡಿ.. ಒಮ್ಮೊಮ್ಮೆ ಗಮನಿಸಿದಾಗ ವ್ರುಧ್ಧಪ್ಯದಲ್ಲಿರುವ ವ್ಯಕ್ತಿಯ ಮನಸ್ಸು ಮಗುವಿನಂತೆಯೇ ಇರುತ್ತದೆ.. ಯಾವುದರ ಮೇಲೂ ಗಮನ ಇರುವುದಿಲ್ಲ. ಕಳೆದ ಜೀವನವನ್ನೆಲ್ಲ ಮರೆತಿರುತ್ತಾನೆ. ಮುಗ್ಧವಾಗಿ ಏನೇನೋ ಕೇಳುತ್ತಾನೆ. ಮೈಮೇಲೆ ಜ್ನಾನವಿರುವುದಿಲ್ಲ.  . ನಾವೂ ಎಷ್ಟೋ ಸಲ ಹೇಳುವುದುಂಟು.. ಯಾಕೋ “ನಮ್ಮಜ್ಜ ಮಕ್ಕಳಂತೆ ಆಡುತ್ತಿದ್ದಾನೆ” ಅಂತ. ನಿಜ ಅನ್ನಿಸುತ್ತಿದೆ..ಅಜ್ಜ ಮುಂದಿನ ಜನ್ಮಕ್ಕೆ ತಯರಾಗಿದ್ದಾನಾ ಅಂತ.

ನಿಜ, ಮಕ್ಕಳ ಮನಸ್ಸು ಮುಗ್ಧ, ಮ್ರದು, ನಿಷ್ಕಲ್ಮಷ, ಪರಿಶುಧ್ಧ. ಅದಕ್ಕಗಿಯೇ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಮಕ್ಕಳಿಗೆ ಏನು ತಿಳಿಯುತ್ತದೆ..? ನಿಜ ಆಗತಾನೆ ಹುಟ್ಟಿದ ಮಗುವಿಗೆ ಹಸಿವು ಬಿಟ್ಟರೆ ಬೇರೇನೂ ತಿಳಿದಿರುವುದಿಲ್ಲ. ಆ ಮಗು ತಾಯಿಯ ಗರ್ಭದಲ್ಲಿದ್ದಾಗ ತಾಯಿಗ ಕರುಳಬಳ್ಳಿಯ ಮೂಲಕ ಆಹಾರ ಪಡೆದು ಬೇಳೆಯುತ್ತದೆ.. ತಾಯಿ ಅತ್ತರೆ ಮಗವೂ ಅಳುತ್ತದಂತೆ.. ತಾಯಿ ಖುಷಿಯಾಗಿದ್ದರೆ ಮಗುವೂ ಖುಷಿಲ್ಲಿರುತ್ತದೆಯಂತೆ.. ತಾಯಿಯ ಆಹಾರವೇ ಮಗುವಿನ ಆಹಾರ, ತಾಯಿಯ ಉಸಿರೇ ಮಗುವಿನ ಉಸಿರು. ಜನನದ ವರೆಗೂ ತಾಯಿಯ ಒಂದು ಭಾಗ, ತಾಯಿಯ ಭಾವನೆಗಳೇ ಮಗುವಿನ ಭಾವನೆ.

ಒಮ್ಮೆ ಜನಿಸಿದ ನಂತರ ಮಗುವು ಮೊದಲ ಉಸಿರಿನೊಂದಿಗೆ ಜೋರಾಗಿ ಅಳುತ್ತದೆ. ಅಲ್ಲಿಂದ ಆ ಮಗುವಿನ ಜೀವನ ಪ್ರಾರಂಭವಾಗುತ್ತದೆ. ಮೊದಲಾಗಿ ಹಸಿವು ಮಾತ್ರ ಆ ಮಗುವಿಗೆ ತಿಳಿಯುತ್ತದೆ.. ಅಳುತ್ತದೆ. ಇಲ್ಲ್ಯವರೆಗೆ ತಾಯಿಯ ಕರುಳಬಳ್ಳಿಯಿಂದ ಆಹಾರ ಸಿಗುತ್ತಿದ್ದ ಕಾರಣ ತಾಯಿಗ ಮಗುವಿನ ಅಳುವಿಗೆ ಕಾರಣ ತಿಳಿದು ತಾಯಿಗೆ ಹಾಲುಣಿಸಬೇಕೆನ್ನುವ ಪ್ರೇರಣೆಯಾಗುತ್ತದೆ. ಅಲ್ಲಿಂದ ಮಗುವಿನ ಕಲಿಕೆ ಪ್ರಾರಂಭ. ಮೊದಲಾಗಿ ಕಲಿಯುದು ಸ್ತನ್ಯಪಾನ.  ಆ ತಾಯಿಯ ಬೆಚ್ಚುಗೆಯ ಅಪ್ಪುಗೆಯಲ್ಲಿ ಮಗು ತಾನು ಅತ್ಯಂತ ಸುರಕ್ಷಿತ ಅಂತ ಭಾವನೆ ಹೊಂದುತ್ತದೆ. ನೆಮ್ಮದಿಯಾಗಿ ಹಾಲು ಕುಡಿಯುತ್ತದೆ. ಕೆಲವು ವಾರ ಕಳೆದ ಮೇಲೆ ಆ ಮಗುವಿಗೆ ಈಕೆಯೇ ತನಗೆ ಆಹಾರ ಕೊಡುವವಳು ತನಗೆ ಇವಳೇ ಬೇಕು ಇವಳ ಜೊತೆ ಇದ್ದರೆ ಮಾತ್ರ ತಾನು ಸುರಕ್ಷಿತ ಎಂಬ ಭಾವನೆ ಮೂಡುತ್ತದೆ. ಆ ಕಾರಣದಿಂದಲೇ ಆ ಮಗು ಇನ್ನೊಬ್ಬರ ಕೈಗೆ ಹೋಗಲು ಒಪ್ಪುವುದಿಲ್ಲ. ಬರುಬರುತ್ತಾ ಆ ಮಗುವಿಗೆ ತನ್ನ ಮನೆಯವರ್ಯರು ಅಂತ ತಿಳಿಯುತ್ತದೆ. ಆವರು ಪ್ರೀತಿಯಿಂದ ಮಾತನಾಡಿಸುತ್ತ ಹೋದಂತೆ ಅವರ ಜೊತೆ ತನ್ನ ಸಲುಗೆಯನ್ನು ಬೆಳೆಸಿಕೊಳ್ಳುತ್ತದೆ.

ಮೊದಮೊದಲು ಮಗು ತಾಯಿಯ ಗರ್ಭದಲ್ಲಿರುವಂತೆ ಬೆಚ್ಚನೆಯ ವಾತಾವರಣ ಬಯಸುತ್ತದೆ. ಕ್ರಮೇಣ ಅದು ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಹಸಿವಾದಾಗ ಅಳುತ್ತದೆ.. ಆಗ ಹಾಲು ಸಿಗುತ್ತದೆ ಅಂತ ಅದಕ್ಕೆ ತಿಳಿಯಲು ಶುರುವಾಗುತ್ತದೆ. ಒಂದಿಷ್ಟು ಹಾಲು ನಿದ್ರೆ ಇದು ಬಿಟ್ಟರೆ ಆ ಮಗುವಿಗೆ ಬೇರೇನೂ ಅರ್ಥವಾಗುವುದಿಲ್ಲ.. ಬರುಬರುತ್ತ ನಿಧಾನವಾಗಿ ಅದು ಆ ಕಡೆ ಈಕಡೆ ಕಣ್ಣೂ ಹೊರಳಿಸಲು ಶುರು ಮಾಡುತ್ತದೆ.. ಅಕ್ಕ ಪಕ್ಕದ ವಸ್ತುಗಳ ಬಗ್ಗೆ ಗಮನ ಹರಿಸುತ್ತದೆ. ಅದನ್ನೇ ಆಸಕ್ತಿಯಿಂದ ನೋಡುತ್ತದೆ. ಸಿಕ್ಕ ವಸ್ತುಗಳನ್ನು ಮುಟ್ಟಿ ನೋಡಲು ಶುರು ಮಾಡುತ್ತದೆ. ಅದರ ಜೊತೆ ಆಟವಾಡಲು ಶುರು ಮಾಡುತ್ತದೆ. ಮಗುವಿನ ಆಸಕ್ತಿಗನುಗುಣವಾಗಿ ಮಗು ಶಬ್ದವನ್ನು ಗ್ರಹಿಸಲು ಶುರು ಮಾಡುತ್ತದೆ. ಅದಕ್ಕಾಗಿಯೇ ನಾವು ಮೊದಲು ಮಗುವಿಗೆ ಶಬ್ದ ಮಾಡುವ ಆಟಿಕೆಯನ್ನು ತಂದು ಕೊಡುವುದು. ಶಬ್ಧ ಗ್ರಹಿಕೆಯನ್ನು ಅನುಕರಿಸಲು ಹೋಗಿ ತಾನೂ ಶಬ್ದ ಮಾಡಿ ತಾಯಿಯನು ರಂಜಿಸುತ್ತದೆ. ಆಗ ಮಗುವಿಗೆ ಒಂದಿಷ್ಟು ಮನರಂಜನೆ ಸಿಕ್ಕು ನಗಲು ಶುರು ಮಾಡುತ್ತದೆ. ಈ ನಗುವಿಗಾಗಿಯೆ ಮನೆಯವರು ಕಾಯುತ್ತಿರುತ್ತಾರೆ. ಅದು ಹೆಚ್ಚು ನಗುವಂತೆ ಮಾಲಕು ಮಾಡಿದಂತೆ ಮಗುವೂ ಅದಕ್ಕೆ ತಕ್ಕ ಹಾಗೆ ಸ್ಪಂದಿಸಲು ಶುರು ಮಾಡುತ್ತದೆ.

ತಾಯಿಯೇ ಮಗುವಿನ ಮೊದಲ ಗುರು. ತಾಯಿ ನಿಧಾನವಾಗಿ ಮಗುವಿಗೆ “ಅಮ್ಮಾ “ ಅಂತ ಹೇಳಿ ಹೇಳಿ ಮಗುವಿನ ಬಾಯಿಯಲ್ಲಿ ಒಮ್ಮೆ ಅಮ್ಮಾ ಅಂತ ಅನ್ನಿಸಿ ಜೀವನದ ಸಾರ್ಥಕ ಭಾವ ಅನುಭವಿಸುತ್ತಾಳೆ. ಅಲ್ಲಇಗೆ ಮಗುವು ದೈಹಿಕವಾಗಿ ಸ್ವಲ್ಪ ಬೆಳೆದು ಹೊಟ್ತೆ ಅಡಿಯಾಗಿ ಮಲಗಲು ಶುರು ಮಾಡುತ್ತದೆ. ನಿಧಾನವಾಗಿ ಹೊಟ್ಟೆ ಹೊಸೆದುಕೊಂಡು ಮುಂದೆ ಹೋಗಲು ಪ್ರಯತ್ನಿಸುತ್ತದೆ.  ಒಮ್ಮೆ ಅಮ್ಮಾ ಅಂದ ಮಗು ನಂತರ ತಾಯಿ ಅಥವಾ ಮನೆಯವರು ಹೇಳಿಕೊಟ್ಟಂತೆ ಹೇಳಲು ಹವಣಿಸುತ್ತದೆ. ಅಲ್ಲಿಂದ ಆ ಮಗುವು ತನ್ನ ತೊದಲು ಮಾತುಗಳಿಂದ ಮನೆಯವರನ್ನು ರಂಜಿಸಲು ಪ್ರಾರಂಭಿಸಿವುದು. ಅದರ ಜೊತೆ ಜೊತೆಗೆ ದೈಹಿಕ ಬೆಳವಣಿಗೆಗಳು ಶುರು.. ನಿಧಾನವಾಗಿ ಅಂಬೆಗಾಲಿಟ್ಟು ಮುಂದೆ ಬರುತ್ತದೆ. ಕಾಲು ಗಟ್ಟಿಯಾದಂತೆ ನಿಧಾನವಾಗಿ ಯಾವುದಾದರೂ ಆಧಾರ ತೆಗೆದುಕೊಂಡು ನಿಲ್ಲಲು ಶುರು ಮಾಡುವ ಮಗು ಒಮ್ಮೆಮ್ಮೆ ಆಧಾರ ವಿಲ್ಲದೆ ನಡೆಯಲು ಶುರು ಮಾಡುತ್ತದೆ. ಕ್ರಮೇಣ ಕೆಲವೇ ದಿನಗಳಲ್ಲಿ ನಡೆಯಲು ಶುರು. ಅಲ್ಲಿಗೆ ಮಗುವಿಗೆ ಹಾಲಿನ ಜೊತೆ ಇತರೆ ಆಹಾರಗಳನ್ನು ತಾಯಿ ತಿನ್ನಿಸಲು ಶುರು ಮಾಡಿರುತ್ತಾಳೆ. ಅದು ಮಗುವಿನ ಬೆಳವಣಿಗೆಗೆ ಸಹಾಯಕವಾದ ಹೆಚ್ಚು ಪೌಷ್ಟಿಕಾಂಶ ವಿರುವ ಆಹಾರವನ್ನು ಕೊಡುತ್ತಾಳೆ. ಮಗು ಆ ವಯಸ್ಸಿಗೆ ತನ್ನವರಾರು ಪರಕೀಯರ್ಯಾರು ಅಂತ ಗುರುತಿಸುವ ಸಾಮರ್ಥ್ಯ ಹೊಂದುತ್ತದೆ.

 

ಹುಟ್ಟಿದಾಗ ಮಗುವಿಗೆ ವಾಸನೆಯನ್ನು ಗ್ರಹಿಸುವ ಶಕ್ತಿ ಕಡಿಮೆ. ಬರುಬರುತ್ತ ಅದು ಅದಕ್ಕೆ ಹಿತವಾದ ವಾಸನೆಯಾನ್ನಉ ಗ್ರಹಿಸುತ್ತದೆ. ತನ್ನದೇ ಮಲಮೂತ್ರಗಳೂ ಅದಕ್ಕೆ ಶುರುವಿನಲ್ಲಿ ಅಸಹ್ಯ ಹುಟ್ಟಿಸುವುದಿಲ್ಲ. ನಾಲಿಗೆಯ ರುಚಿಯೂ ಇರುವುದಿಲ್ಲ.. ತಿನ್ನುವ ಆಹಾರ ಅದರಕ್ಕೆ ಉರಿದರೆ ಮಗು ಅಳಲು ಶುರು ಮಾಡುತ್ತದೆ.ಬರುಬರುತ್ತ ಆ ಮಗುವಿಗೆ ತಾಯಿ ಕೆಟ್ಟದ್ದು ಯಾವುದು ಒಳ್ಳೆಯದು ಯಾವುದು ಎನ್ನುವ ಪಾಠ ಶುರು ಮಾಡುತ್ತಾಳೆ. ಅಲ್ಲಿಯವರೆಗೆ ಮಗುವಿನ ಮನಸ್ಸು ಅತ್ಯಂತ ಪರಿಶುಧ್ಧವಾಗಿರುತ್ತದೆ. ನಿಧಾನವಾಗಿ ಮಗುವಿಗೆ ವಿಷಯಗಳನ್ನು ಗ್ರಹಿಸುವ ಶಕ್ತಿ ಬಂದಂತೆ ಒಂದಿಷ್ತ್ಟು ಕಿತಾಪತಿ ಮಾಡಲು ಶುರು ಮಾಡುತ್ತದೆ.. ಅಮ್ಮ ಹೊಡೆಯುತ್ತಾರೆ ಅಂತ ತಿಳಿಯುತ್ತಿದ್ದಂತೆ ಅದಕ್ಕೆ ಸಣ್ಣದೊಂದು ಸುಳ್ಳು ಹೇಳುತ್ತದೆ.. ಹೀಗೆ ಮಗು ನಿಧಾನವಾಗಿ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ.  ಮನೆಯವರಲ್ಲಿ ನಾನೂ ಒಬ್ಬ ಅನ್ನುವ ಭಾವನೆ ಅದಕ್ಕೆ ಬರುತ್ತದೆ..