Home Local ಕುಮಟಾದಲ್ಲಿ ಸಾಮಾಜಿಕ ಜಾಲತಾಣಗಳ ಕಾರ್ಯಾಗಾರ ಯಶಸ್ವಿ

ಕುಮಟಾದಲ್ಲಿ ಸಾಮಾಜಿಕ ಜಾಲತಾಣಗಳ ಕಾರ್ಯಾಗಾರ ಯಶಸ್ವಿ

SHARE

ಕುಮಟಾ : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸಹಯೋಗದಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ಪ್ರಕೋಷ್ಠ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ ಇವರಿಂದ ಸಾಮಾಜಿಕ ಜಾಲತಾಣಗಳ ಕಾರ್ಯಾಗಾರ ಇಂದು ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ನಡಯಿತು.

ಕಾರ್ಯಕ್ರಮದಲ್ಲಿ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಹೇಮಂತ್ ಕುಮಾರ ಗಾವಂಕರ್ ,ನಾಗರಾಜ್ ನಾಯಕ ತೊರ್ಕೆ, ಸೂರಜ್ ನಾಯ್ಕ ಸೋನಿ, ,ಕುಮಾರ್ ಮಾರ್ಕಂಡೇಯ ಡಾ. ಜಿ ಜಿ ಹೆಗಡೆ ಹಾಗು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣ ಬಳಕೆ, ಪ್ರಯೋಜನಗಳು ,ಪೂರಕ ಮತ್ತು ಮಾರಕ ಪ್ರಕ್ರಿಯೆಯ ಬಗ್ಗೆ ಚರ್ಚೆ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಅಗತ್ಯ ಮಾಹಿತಿ ನೀಡಲಾಯಿತು.