Home Local ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಕಾರವಾರದಲ್ಲಿ ಟ್ಯಾಕ್ಸಿ ಘಟಕ

ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಕಾರವಾರದಲ್ಲಿ ಟ್ಯಾಕ್ಸಿ ಘಟಕ

SHARE

ಕಾರವಾರ: ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ಇದರ ಕಾರವಾರ ತಾಲ್ಲೂಕಿನ ಟ್ಯಾಕ್ಸಿ ಘಟಕವನ್ನು ಇಂದು ಚೆಂಡಿಯಾದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ದೀಪಕ ಉಗಾ ನಾಯ್ಕ,ಕಾರ್ಯದರ್ಶಿ ಗುರುಪ್ರಸಾದ ಜಿ ನಾಯ್ಕ ರವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು, ಸಮಾರಂಭದ ಉದ್ಘಾಟನೆಯನ್ನು ಚೆಂಡಿಯಾ ಗ್ರಾಮ ಪಂಚಾಯತಿ ಸದಸ್ಯ ರವಿರಾಜ ಉಗಾ ನಾಯ್ಕ ರವರು ನೇರವೇರಿಸಿದರು,ಈ ಸಂದರ್ಭದಲ್ಲಿ ಅಂಕೋಲಾ ತಾಲೂಕಿನ ಕರವೇ ಅಧ್ಯಕ್ಷ ಸುನೀಲ್ ನಾಯ್ಕ ಹೊನ್ನಿಕೇರಿ,ಕಾರ್ಯದರ್ಶಿ ಅಮರ ನಾಯ್ಕ ಕೇಣಿ, ಉದಯ ನಾಯ್ಕ ಅಮದಳ್ಳಿ, ದೀಪಕ ದಿನ್ನಾ ನಾಯ್ಕ,ಗಜಾನನ ನಾಯ್ಕ,ಮುಂತಾದ ಗಣ್ಯರು ಟ್ಯಾಕ್ಸಿ ಚಾಲಕರು,ಮಾಲಕರು ಉಪಸ್ಥಿತರಿದ್ದರು.

ಈ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ಟ್ಯಾಕ್ಸಿ ಘಟಕದ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗಿ ಅಧ್ಯಕ್ಷರಾಗಿ ರವಿರಾಜ ಉಗಾ ನಾಯ್ಕ,ಉಪಾಧ್ಯಕ್ಷ ಶಶಿಕಾಂತ ಗೌಡ,ಪ್ರ.ಕಾರ್ಯದರ್ಶಿ ಗಣೇಶ್ ಪೂಜಾರಿ,ಸಹಕಾರ್ಯದರ್ಶಿ ಅಜೀತ ಜಿ ನಾಯ್ಕ,ಖಜಾಂಚಿ ಲಕ್ಷ್ಮಿಕಾಂತ ಗೌಡ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.