Home Local KSOU ನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣವೇ ಕೈ ಬಿಡಬೇಕು: ಎಬಿವಿಪಿ ಭಟ್ಕಳ ಆಗ್ರಹ

KSOU ನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣವೇ ಕೈ ಬಿಡಬೇಕು: ಎಬಿವಿಪಿ ಭಟ್ಕಳ ಆಗ್ರಹ

SHARE

ಭಟ್ಕಳ: ಬಡತನದ ಕಾರಣಗಳಿಂದ ಜೀವನದ ನಿರ್ವಹಣೆಗೆ ಉದ್ಯೋಗ ಮಾಡಬೇಕಾದ ಅನಿವಾರ್ಯತೆಗಳಿಂದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೇರವಾಗಿ ಸಾಮಾನ್ಯ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಸಾಧ್ಯವಾಗುತ್ತಿಲ್ಲ. ಅಂತಹವರ ಕನಸನ್ನು ನನಸು ಮಾಡುತ್ತ ಬಂದಿದ್ದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ. ಆದರೆ ಇಂದು ರಾಜ್ಯ ಸರ್ಕಾರ KSOU ನ್ನು ಮುಚ್ಚಲು ಮುಂದಾಗಿದೆ. ರಾಜ್ಯ ಸರ್ಕಾರ ಈ ಮೊಂಡುತನವನ್ನು ಬಿಟ್ಟು KSOU ನ್ನುಪುನಃ ಪ್ರಾರಂಭಿಸಬೇಕು ಹಾಗೂ KSOU ಗೆ UGC ಮಾನ್ಯತೆಯನ್ನು ತಕ್ಷಣ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ಭಟ್ಕಳ ಶಾಖೆಯ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

ಸಹಾಯಕ ಕಮಿಷನರ್ ಅವರ ಅನುಪಸ್ಥಿಯಲ್ಲಿ ಕಛೇರಿ ವ್ಯವಸ್ಥಾಪಕ ಎಲ್.ಎ. ಭಟ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖರಾದ ಪುರಂದರ ನಾಯ್ಕ,ದಿವಾಕರ ನಾಯ್ಕ,ರಾಘು ನಾಯ್ಕ,ತಿರುಮಲ ನಾಯ್ಕ,ಆನಂದ ನಾಯ್ಕ,ಪ್ರಸನ್ನ ನಾಯ್ಕ,ಯಶೋಧರ ಜೈನ್,ರವಿ ನಾಯ್ಕ,ರಮೇಶ್ ನಾಯ್ಕ,ನಾಗರಾಜ್ ನಾಯ್ಕ,ಅರುಣ್ ನಾಯ್ಕ,ಚೇತನ್ ನಾಯ್ಕ,ಪ್ರದೀಪ್ ನಾಯ್ಕ,ಕೇಶವ ನಾಯ್ಕ, ಪ್ರಶಾಂತ್ ನಾಯ್ಕ ಹಾಗೂ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.