Home Local ಸಿದ್ದಾಪುರದಲ್ಲಿ ನಡೆಯಿತು ಗಣ ವೇಷಧಾರಿಗಳಿಂದ ಆಕರ್ಷಕ ಪಥಸಂಚಲನ

ಸಿದ್ದಾಪುರದಲ್ಲಿ ನಡೆಯಿತು ಗಣ ವೇಷಧಾರಿಗಳಿಂದ ಆಕರ್ಷಕ ಪಥಸಂಚಲನ

SHARE

ಸಿದ್ದಾಪುರ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರ್.ಎಸ್.ಎಸ್.ನ 225ಕ್ಕೂ ಹೆಚ್ಚು ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.

ಇಲ್ಲಿಯ ಪ್ರಶಾಂತಿ ಶಿಕ್ಷಣ ಸಂಸ್ಥೆಯಿಂದ ಭಗತ್ ಸಿಂಗ್ ವೃತ್ತದ ಮೂಲಕ ತಿಮ್ಮಪ್ಪ ನಾಯಕ, ರಾಜಮಾರ್ಗ, ದೇವಸ್ಥಾನ ರಸ್ತೆಯ ಮೂಲಕ ಪುನಃ ಪ್ರಶಾಂತಿ ಶಿಕ್ಷಣ ಸಂಸ್ಥೆಯವರೆಗೆ ಪಥ ಸಂಚಲನ ನಡೆಯಿತು.

ಈ ಸಂದರ್ಭದಲ್ಲಿ ಪಟ್ಟಣದ ಎಲ್ಲ ಮನೆಯ ಎದುರು ಮಾತೆಯರು ರಂಗೋಲಿಯನ್ನಿಟ್ಟು ತಳಿರು ತೋರಣಗಳಿಂದ ಶೃಂಗರಿಸಿದ್ದರು.