Home Important ಒಮ್ಮೆ ಹಳೆಯ ನೆನಪು ಮಾಡಿತ್ತೇ ಇಂದಿನ ಬರ್ಗಿ ಟ್ಯಾಂಕರ್ ಪಲ್ಟಿ?

ಒಮ್ಮೆ ಹಳೆಯ ನೆನಪು ಮಾಡಿತ್ತೇ ಇಂದಿನ ಬರ್ಗಿ ಟ್ಯಾಂಕರ್ ಪಲ್ಟಿ?

SHARE

ಕುಮಟ: ಅನಿಲ ತುಂಬಿದ ಟ್ಯಾಂಕರ್ ಅಪಘಾತವಾಗಿ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಬರ್ಗಿ ರಾಷ್ಟ್ರೀಯ ಹೆದ್ದಾರಿ 66 ಯಲ್ಲಿ ನಡೆದಿದೆ.

ಮಂಗಳೂರಿನಿಂದ ಗೋವಾಕಡೆಗೆ ಸಾಗುತ್ತಿದ್ದ ಭಾರತ್ ಗ್ಯಾಸ್ ಕಂಪನಿಯ ಟ್ಯಾಂಕರ್ ಬರ್ಗಿ ಗ್ರಾಮ ಪಂಚಾಯತ್ ಸಮೀಪದ ಅಪಘಾತಕ್ಕೆ ಒಳಗಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಆತಂಕ ಒಳಗಾಗಿದ್ದಾರೆ. ಅದೃಷ್ಟವಶಾತ್ ಗ್ಯಾಸ್ ಸೋರಿಕೆ ಯಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಅನಿಲ ಟ್ಯಾಂಕರ್ ಪಲ್ಟಿಯಿಂದ ಜನ ಒಮ್ಮೆ ಭಯಭೀತರಾದರು. ಹಳೆಯ ಅನಿಲ ದುರಂತ ನೆನೆದುಕೊಂಡು ತಲ್ಲಣಗೊಂಡರು . ಆದರೆ ಯಾವುದೇ ಅಪಾಯ ಆಗದ ಸುದ್ದಿ ತಿಳಿದು ನಿರಾಳರಾದರು.