Home Local ಕಾರವಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕಾರವಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

SHARE

ಕಾರವಾರ: ಅಕ್ಟೋಬರ್ 21 ರಂದು ಕಾರವಾರದ ಆಝಾದ್ ಯುಥ್ ಕ್ಲಬ್ ಹಾಗೂ ಸಾರ್ವಜನಿಕ ಶ್ರೀ ಮಹಾ ಕಾಳಿಮಾತಾ ಪೂಜಾ ಕಮಿಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಶಿಬಿರವನ್ನು ಬೆಳಿಗ್ಗೆ 9.30 ಕ್ಕೆ ಕಾರವಾರದ ಕೆ.ಎಚ್.ಬಿ.ಕಾಲನಿಯ ಹರಿಓಮ್ ಸರ್ಕಲ್ ಹತ್ತಿರ ಹಮ್ಮಿಕೊಳ್ಳಲಾಗಿದೆ. ರಕ್ತದಾನಿಗಳಿಗೆ ರಕ್ತದಾನದ ಸಂದೇಶ ಸಾರುವ ಟಿ-ಶರ್ಟಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರಪ್ರಶಸ್ತಿ ವಿಜೇತರು ಮತ್ತು ರಕ್ತದಾನಿಗಳು ಆಗಿರುವ ನಜೀರ್ ಅಹಮ್ಮದ್ ಯು ಶೇಖ್ (9448787765) ಗೆ ಸಂಪರ್ಕಿಸಬೇಕಾಗಿ ಆಝಾದ್ ಯುಥ್ ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್‍ರವರು ತಿಳಿಸಿದ್ದಾರೆ.