Home Local ಸಂಪನ್ನವಾಯ್ತು ದೀಪಾವಳಿ : ಬೆಳಕಿನ ಹಬ್ಬದ ಜೊತೆ ಆಟಗಳ ರಂಗು!

ಸಂಪನ್ನವಾಯ್ತು ದೀಪಾವಳಿ : ಬೆಳಕಿನ ಹಬ್ಬದ ಜೊತೆ ಆಟಗಳ ರಂಗು!

SHARE

ಅಂಕೋಲಾ: ಜಿಲ್ಲೆಯ ಐತಿಹಾಸಿಕ ಆಚರಣೆಗಳಲ್ಲಿ ಒಂದಾದ ಪಾರಂಪರಿಕ ‘ಹೊಂಡೆ ಹಬ್ಬ’ದ ಆಚರಣೆಯು ಅಂಕೋಲಾದಲ್ಲಿ ಶುಕ್ರವಾರ ಯಶಸ್ವಿಯಾಗಿ ಜರುಗಿತು.

ದೀಪಾವಳಿಯ ಬಲಿಪಾಡ್ಯಮಿಯಂದು ಕ್ಷತ್ರಿಯ ಕೋಮಾರಪಂಥ ಸಮುದಾಯದವರು ಆಚರಿಸುವ ಈ ಹಬ್ಬವು ಬಹಳ ಪುರಾತನವಾದದ್ದು. ಹಿಂಡ್ಲಿ ಕಾಯಿಂದ ಪರಸ್ಪರ ಹೊಡೆದಾಡುವ ಈ ದೃಶ್ಯ ಮೈನವಿರೇಳಿಸಿತು. ಇದು ಅಂಕೋಲಾದ ಗ್ರಾಮ ದೇವಿ ಶ್ರೀಶಾಂತಾದುರ್ಗಾ ದೇವಸ್ಥಾನದ ಎದುರಿನಿಂದ ಪ್ರಾರಂಭಗೊಂಡು ಶ್ರೀವೆಂಕಟರಮಣ ದೇವಸ್ಥಾನದವರೆಗೆ ಸಾಗಿ ಕೊನೆಗೊಂಡಿತು. ಇದನ್ನು ನೋಡಲು ಸಾವಿರಾರು ಜನ ಮುಗಿಬಿದ್ದರು.

ಏನಿದು ಹೊಂಡೆ ಹಬ್ಬ?:

ಕ್ಷತ್ರಿಯ ವರ್ಗಕ್ಕೆ ಸೇರಿದ ಕೋಮಾರಪಂಥ ಸಮಾಜದವರು ಯುದ್ಧದ ಸಂದರ್ಭದಲ್ಲಿ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ ಹಿನ್ನೆಲೆಗಳಿವೆ. ನಾಡಿನ ರಕ್ಷಣೆಗೆ ಅಂದು ಯುದ್ಧದಲ್ಲಿ ತೋರಿದ ಸಾಹಸದ ಸಂಕೇತವಾಗಿ ಹಿಂಡ್ಲಿ ಕಾಯಿಂದ ಪರಸ್ಪರ ಹೊಡೆದಾಡುವುದರ ಮೂಲಕ ತಮ್ಮ ಸಂಪ್ರದಾಯವನ್ನು ಅನಾವರಣಗೊಳಿಸಲಾಗುತ್ತದೆ.

ಅದೇ ತರ ಕೋಮಾರಪಂಥ ಸಮಾಜದರಾದ ಬುಧವಂತ ಮತ್ತು ಕೂಲಕಾರ್ ಅವರಿಗೆ ಸನ್ಮಾನ ಪಡೆದವರು ಗಣಪತಿ ಉಮಾ ನಾಯ್ಕ, ರಾಜೂ ನಾಯ್ಕ, ಚಂದ್ರಕಾಂತ ನಾಯ್ಕ, ಈಶ್ವರ ನಾಯ್ಕ ಇವರಿಗೆ ಸನ್ಮಾನಿಸಲಾಯಿತು..

ಈ ವೇಳೆ ನಿಗಮ ಮಂಡಳಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಮಾಧವ ನಾಯ್ಕ, ಸುಭಾಷ್ ನಾರ್ವೇಕರ್, ಉಮೇಶ ನಾಯ್ಕ ವಕೀಲರು, ವಿಜಯಕುಮಾರ್ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹಾಗೂ ಇನ್ನಿತರರು ಇದ್ದರು..