Home Local ಭಟ್ಕಳ ಕಸಾಪದಿಂದ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಎನ್.ನಾಯ್ಕ ಅವರಿಗೆ ಸನ್ಮಾನ.

ಭಟ್ಕಳ ಕಸಾಪದಿಂದ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಎನ್.ನಾಯ್ಕ ಅವರಿಗೆ ಸನ್ಮಾನ.

SHARE

ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯರೆಡೆಗೆ ಕಸಾಪ ನಡಿಗೆ ಎಂಬ ಪರಿಕಲ್ಪನೆಯಲ್ಲಿ ವಿಶಿಷ್ಟ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದೆ. ಈ ಹಿನ್ನೆಲೆಯಲ್ಲಿ ತಾಲೂಕಾ ಕಸಾಪ ಮಾಜಿ ಅಧ್ಯಕ್ಷರೂ, ಆಜೀವ ಸದಸ್ಯರೂ, ಸಂಘಟನಾ ಚತುರರೂ, ರಾಜಕೀಯ ಮುಖಂಡರೂ, ನಾಟಕ ಕಲಾವಿದರೂ ಆಗಿರುವ ಶ್ರೀ ಕೆ.ಎನ್.ನಾಯ್ಕ ಅವರ ಮನೆಗೆ ತೆರಳಿ ದೀಪಾವಳಿಯ ಶುಭಾಶಯ ಕೋರಿ ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಿರಾಲಿ ಗ್ರಾಮ ಪಂಚಾಯತ್‍ನ ಉಪಪ್ರಧಾನರಾಗಿ, ಪ್ರಧಾನರಾಗಿ,ಭಟ್ಕಳ ತಾಲೂಕಾ ಪಂಚಾಯತ್ ಅಧ್ಯಕ್ಷರಾಗಿ,ರಿಕ್ಷಾಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಹಾಗೂ ಸಾಹಿತ್ಯ ಪರಿಷತ್ತಿನ ಅಧ್ಞಕ್ಷರಾಗಿಯೂ ಹಲವಾರು ಜನಪರ ಜೀವಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದ್ದಕೆ.ಎನ್.ನಾಯ್ಕ ಅವರ ಕೊಡುಗೆ ಮತ್ತು ಸಾಧನೆಗಳನ್ನು ಸ್ಮರಿಸಿಕೊಳ್ಳಲಾಯಿತು. ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕೆ.ಎನ್.ನಾಯ್ಕ ಅವರ ಸಾಧನೆಗಳ ಹಲವು ಮಜಲುಗಳನ್ನು ಪರಿಚಯಿಸಿ ಅವರು ವ್ಯಕ್ತಿಯಲ್ಲ ಶಕ್ತಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ಆಜೀವ ಸದಸ್ಯ ಸತೀಶಕುಮಾರ ನಾಯ್ಕ ಮಾತನಾಡಿ ಕೆ.ಎನ್.ನಾಯ್ಕರವರ ಸಂಘಟನಾ ಶಕ್ತಿಯ ವಿಸ್ತಾರವನ್ನು ಬಣ್ಣಿಸಿದರು.ಭಟ್ಕಳ ಪುರಸಭೆಯ ಸದಸ್ಯ ರಿಕ್ಷಾ ಚಾಲಕ ಮಾಲಕ ಸಂಗದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ರಿಕ್ಷಾ ಚಾಲಕ ಮಾಲಕರ ಸಂಘಟನೆಗೆ ಅವರು ನೀಡಿದ ಶಕ್ತಿಯ ಕುರಿತು ಮಾತನಾಡಿದರು.

ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ತಮ್ಮ ಸಹೋದರ ಕೆ.ಎನ್.ನಾಯ್ಕ ಅವರ ಸಾದನೆ ನಮ್ಮ ಕುಟುಂಬಕ್ಕೇ ಕಿರೀಟಪ್ರಾಯವಾದುದು, ಅವರ ಹೆಸರಿನ ಬಲವೇ ತಮಗೆ ರಾಜಕೀಯ ರಂಗದಲ್ಲಿ ಬೆಂಬಲವಾಗಿ ನಿಂತಿದೆ ಎಂದರಲ್ಲದೇ ಸಾಹಿತ್ಯ ಪರಿಷತ್ತು ಕೆ.ಎನ್.ನಾಯ್ಕ ಅವರು ಪರಿಷತ್ತಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಮನೆಗೇ ಬಂದು ಸನ್ಮಾನಿಸಿದ್ದು ಅವರಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಅತೀವ ಸಂತೋಷ ತಂದಿದೆ. ಈ ವರ್ಷದ ದೀಪಾವಳಿ ತಮ್ಮ ಕುಟುಂಬ ಎಂದಿಗೂ ಮರೆಯಲಾರದ ದಿನವಾಗಿದೆ ಎಂದು ನುಡಿದರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಕೆ.ಎನ್.ನಾಯ್ಕ ಅವರ ಸರ್ವತೋಮುಖ ಸಾಧನೆಯನ್ನು ಪರಿಚಯಿಸಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ ವಂದಿಸಿದರು.

ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿಗಳಾದ ಎಮ್.ಪಿಬಂಢಾರಿ,ಗಣೇಶ ಯಾಜಿ, ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಶಿಕ್ಷಕ ನಾರಾಯಣ ನಾಯ್ಕ, ಪಾಂಡುರಂಗ ನಾಯ್ಕ, ದೇವಿದಾಸ ನಾಯ್ಕ, ಮಂಜುನಾಥ ನಾಯ್ಕ, ನಿತ್ಯಾನಂದ ಭಟ್, ಎಂ.ಎಸ್.ನಾಯ್ಕ, Pಕೆ.ಎನ್.ನಾಯ್ಕ ಅವರ ಪುತ್ರರಾದ ಕಿಶೋರ ನಾಯ್ಕ, ರಾಜು ನಾಯ್ಕ, ಸಂದೀಪ ನಾಯ್ಕ ಮತ್ತು ಕುಟುಂಬದ ಸದಸ್ಯರು ಉಪಸ್ತಿತರಿದ್ದರು.