Home Local ಬಾಡದ ಕಡಲ‌ ಕಿನಾರೆಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮನವಿ

ಬಾಡದ ಕಡಲ‌ ಕಿನಾರೆಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮನವಿ

SHARE

ಕುಮಟಾ : ಬಾಡದ ಸುಂದರ ಸಮುದ್ರ ಕಿನಾರೆಯಲ್ಲಿ ಮಕ್ಕಳಿಗೆ ಆಡಲು ಆಟಿಕೆಗಳನ್ನೊಳಗೊಂಡ ಚಿಕ್ಕ ಉದ್ಯಾನವನ ಮಾಡಿ ಕೊಡುವಂತೆ ಯುವ ಮುಖಂಡ ರವಿಕುಮಾರ್ ಶೆಟ್ಟಿಯವರಿಗೆ ಸಾರ್ವಜನಿಕರು ಮನವಿ ನೀಡಿದರು.

ಸುಂದರ ಪ್ರಕೃತಿಯ ಸಿರಿ ಇರುವ ಈ ಪ್ರದೇಶದಲ್ಲಿ ಚಿಕ್ಕ ಉದ್ಯಾನವನ ಮಾಡಿದರೆ ಜನರಿಗೆ ಉಪಯುಕ್ತವಾಗುವುದು. ಮಕ್ಕಳಿಗೆ ಆಟವಾಡಲು ಅಗತ್ಯ ಪರಿಕರ ಒದಗಿಸಿ ಸುಂದರ ಉದ್ಯಾನ ನಿರ್ಮಿಸಿ ಇದನ್ನು ಪ್ರವಾಸಿ ತಾಣವಾಗಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿಗೆ ಸ್ಪಂದಿಸುವುದಾಗಿ ಕಾಂಗ್ರೇಸ್ ಮುಖಂಡರಾದ ಸೂರಜ ನಾಯ್ಕ ಸೋನಿ ಹೇಳಿದರು. ಯಾವ ರೀತಿಯಲ್ಲಿ ಸಾಧ್ಯವೋ ಆ ರೀತಿಯಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಈ ಸಮಯದಲ್ಲಿ ಉರಿನವರಾದ ವಸಂತ ನಾಯ್ಕ್ ಬಾಡ,ವಾಸುದೇವ ನಾಯ್ಕ್, ಚಂದ್ರಕಾಂತ ಪಟಗಾರ,ಮಂಜುನಾಥ ಪಟಗಾರ ಮತ್ತು ಗೋವಿಂದ ಹರಿಕಂತ್ರ ಉಪಸ್ಥಿತರಿದ್ದರು.