Home Local ಚಿಟ್ಟಾಣಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡುವಂತೆ ಅರವಿಂದ ಕರ್ಕಿಕೋಡಿ ಆಗ್ರಹ

ಚಿಟ್ಟಾಣಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡುವಂತೆ ಅರವಿಂದ ಕರ್ಕಿಕೋಡಿ ಆಗ್ರಹ

SHARE

ಭಟ್ಕಳ: ತನ್ನ ಪರಿಣಾಮಕಾರಿಯಾದ ಅಭಿನಯದ ಮೂಲಕ ಜನಮಾನಸಲ್ಲಿ ನೆಲೆನಿಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ವಿಶ್ವವಿದ್ವಾಲಯಗಳು ಮರಣೋತ್ತರ ಗೌರವ ಡಾಕ್ಟರೇಟ್ ನೀಡಲು ಚಿಂತನೆ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಆಗ್ರಹಿಸಿದರು.

ಮುರ್ಡೇಶ್ವರದ ಬಲ್ಸೆಯಲ್ಲಿ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳೀಯ ಯಕ್ಷರಕ್ಷೆ, ಲಯನ್ಸ್ ಕ್ಲಬ್, ಮಹಿಷಮರ್ಧಿನಿ ಯಕ್ಷಗಾನ ಮಂಡಳಿ ಗೋಳಿಕುಂಬ್ರಿ ಇವರ ಸಹಯೋಗದಲ್ಲಿ ಹಮಿಕೊಂಡ ಚಿಟ್ಟಾಣಿ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಕರ್ಕಿಕೋಡಿ ಚಿಟ್ಟಾಣಿಯಂಥ ಶಿಖರಕ್ಕೆ ಈ ಗೌರವ ನೀಡಿದರೆ ಔಚಿತ್ಯಪೂರ್ಣ ಮಾತ್ರವಲ್ಲ, ವಿಶ್ವವಿದ್ಯಾಲಯಗಳ ಮಾನವೂ ಹೆಚುತ್ತದೆ ಎಂದರಲ್ಲದೇ ಚಿಟ್ಟಾಣಿಯವರು ಓರ್ವ ಜಾತ್ಯತೀತ ಕಲಾವಿದನಾಗಿರುವುದರಿಂದಲೇ ಅವರನ್ನು ಪ್ರೇಕ್ಷಕವರ್ಗ ಆರಾಧ್ಯ ದೇವರಂತೆ ಕಂಡರು. ಇಂಥ ಭಾಗ್ಯ ಎಲ್ಲ ಕಲಾವಿದರಿಗೆ ಸಿಗುವುದು ಕಷ್ಟ. ನವೆಂಬರ್ ನಲ್ಲಿ ಮೈಸೂರಿನಲ್ಲಿ ನಡೆಯಲಿರುವ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಪರವಾಗಿ ಸನ್ಮಾನಿಸಲು ತಾವು ಚಿಟ್ಟಾಣಿಯವರ ಹೆಸರನ್ನು ಕೇಂದ್ರ ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಸೂಚಿಸಿದ್ದೆ. ಚಿಟ್ಟಾಣಿಯವರೂ ಸನ್ಮಾನಕ್ಕೆ ಒಪ್ಪಿದ್ದರು. ಆದರೆ ಅದಕ್ಕೂ ಮುಂಚೆ ಅವರು ಹೊರಟು ಹೋದದ್ದು ನೋವು ತಂದಿದೆ ಎಂದು ಹೇಳಿದರು.

ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ.ಎಲ್.ಹಗಡೆ ಮನುಷ್ಯತ್ವವನ್ನು ಹೂರಣವಾಗಿಸಿಕೊಂಡ ಕಲಾವಿದ. ಆ ಕಾರಣಕ್ಕಾಗೇ ಅವರು ತಮ್ಮ ಎದುರು ತಮ್ಮೊಂದಿಗೆ ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಎಷ್ಟೇ ಸಣ್ಣ ಕಲಾವವಿದನಿದ್ದರೂ ಅಷ್ಟೇ ಕೊಂಚವೂ ಬೇಸರಿಸಿಕೊಳ್ಳದೇ ಅತ್ಯಂತ ಮುಕ್ತವಾಗಿ ಹೃದ್ಯವಾಗಿ ಅಭಿನಯಿಸುತ್ತಿದ್ದರು. ಅಂಥ ಅಂತಸತ್ವ ಎಲ್ಲ ಕಲಾವಿದನಿಗೂ ಇರುವುದಿಲ್ಲ. ಚಿಟ್ಟಾಣಿ ಹೆಸರಿನಲ್ಲಿ ಒಂದು ಯಕ್ಷರಂಗ ಅಧ್ಯಯನ ಕೇಂದ್ರ ಸ್ಥಾಪನೆ ಆಗಬೇಕು ಎಂದು ಹೇಳಿದರು.
ಯಕ್ಷರಕ್ಷೆ ಮುಡೇಶ್ವರ ಅಧ್ಯಕ್ಷ ಡಾ. ಐ.ಆರ್.ಭಟ್ಟ, ಆರ್.ಎನ್.ಎಸ್.ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ವಿ.ಹೆಗಡೆ, ಶ್ರೀ ಮಹಿಷಮರ್ಧಿನಿ ಯಕ್ಷಗಾನ ಮಂಡಳಿ ಅಧ್ಯಕ್ಷ ನಾಗರಾಜ ಮಧ್ಯಸ್ಥ, ಶ್ರೀಮತಿ ಶಾರದಾ ದುರ್ಗಪ್ಪ ಗುಡಿಗಾರ ಅವರು ಚಿಟ್ಟಾಣಿಯವರು ಇಲ್ಲದ ರಂಗಸ್ಥಳವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕಸಾಪ ಗೌರವÀ ಕೋಶಾಧ್ಯಕ್ಷ ಶ್ರೀಧರ ಶೇಟ್ ಎಲ್ಲರನ್ನು ಸ್ವಾಗತಿಸಿದರು. ಸಾಹಿತಿ ಸುರೇಶ್ ನಾಯ್ಕ, ಶ್ರೀಧರ ಶೇಟ್ ಚಿಟ್ಟಾಣಿಯವರ ಕುರಿತ ತಮ್ಮ ಸ್ವರಚಿತ ಹಾಗೂ ಮಾನಾಸುತರ ಚುಟುಕು ವಾಚಿಸಿ ಕಾವ್ಯನಮನ ಸಲ್ಲಿಸಿದರು.

ದುರ್ಗಪ್ಪ ಗುಡಿಗಾರರ ಪುತ್ರಿ ಉಮಾ ಚಂದ್ರಕಾಂತ್ ಯಕ್ಷಗಾನದ ಪದ್ಯವನ್ನು ಹಾಡಿ ಗಾನ ನಮನ ಸಲ್ಲಿಸಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ನುಡಿ ನಮನ ಸಲ್ಲಿಸಿದರು.. ಕಾರ್ಯದರ್ಶಿ ಗಣೇಶ ಯಾಜಿ ವಂದಿಸಿದರು. ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಅಂಬಿಕಾ ಹೆಗಡೆ ಪ್ರಾರ್ಥಿಸಿದರು. ಪರಿಷತ್ತಿನ ಗೌರವ ಸಲಹೆಗಾರ ವೀರೇಂದ್ರ ಶ್ಯಾನಭಾಗ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶಿರಾಲಿ, ಸಂತೋಷ ಆಚಾರ್ಯ, ಪಾಂಡುರಂಗ ನಾಯ್ಕ, ರವಿ ಆಚಾರ್ಯ, ಚಂದ್ರಕಾಂತ ಕಿಣಿ ಲಯನ್ಸ ಕ್ಲಬ್‍ನ ಗಜಾನನ ಶೆಟ್ಟಿ, ಗಣೇಶ ದೇವಾಡಿಗ, ನಾಮಧಾರಿ ಸಮಾಜದ ಅಧ್ಯಕ್ಷ ಎಮ್.ಆರ್.ನಾಯ್ಕ. ಸಿ.ಆರ್.ನಾಯ್ಕ, ಮತ್ತು ಚಿಟ್ಟಾಣಿ ಅಭಿಮಾನಿಗಳು ಉಪಸ್ಥಿತರಿದ್ದರು.