Home Article ಬಯಸಿದೆತ್ತರ ನೆಮ್ಮದಿ ಕೊಟ್ಟೀತೆ?

ಬಯಸಿದೆತ್ತರ ನೆಮ್ಮದಿ ಕೊಟ್ಟೀತೆ?

SHARE

ಮನುಷ್ಯ ಅಲ್ಲಲ್ಲಿ ಮೋಡವಿರುವ ಆಕಾಶವನ್ನು ನೋಡುತ್ತಾನೆ ವೈವಿದ್ಯಮಯದಿಂದ ಕೂಡಿದ ಭೂಮಿಯನ್ನು ನೋಡಲಾರ. ಮನುಷ್ಯನಲ್ಲಿ ತಾನು ಮೇಲೆರಬೇಕೆಂಬ ಹಂಬಲವಿದೆಯೇ ಹೊರತು ಎಷ್ಟು ಮೇಲೆರಿದರೆ ತನ್ನ ಜೀವನಕ್ಕೆ ಸಾಕಾಗಬಹುದು ಎನ್ನುವ ಕಲ್ಪನೆಯಂತು ಇಲ್ಲ. ಬಾನೆತ್ತರ ಬೆಳೆದು ನಿಂತುಬಿಡಬೇಕು. ಬಡತನ ಎನ್ನುವುದು ಇರಬಾರದು. ಬಡತನ ಇರಬಾರದು ಎಂದರೆ ಆರ್ಥಿಕವಾದ ಬೆಳವಣಿಗೆಯಿಂದ ಮಾತ್ರ ಸಾಧ್ಯ. ಅದಕ್ಕಾಗಿ ಏನೂ ಮಾಡಲು ಸಿದ್ಧ ಎನ್ನುವಂತಹ ಮನಸ್ಥಿತಿ ಬಂದಿರುವಾಗ ದೈಹಿಕ ಶ್ರಮ ಯಾರಿಗೂ ಬೇಕಿಲ್ಲ. ಗರಿಮುರಿ ಬಟ್ಟೆ ಹಾಕಿ ಸಮಾಜದ ನಾಲ್ಕು ಜನರ ಬಾಯಲ್ಲಿ ದೊಡ್ಡವನು ಎನ್ನಿಸಿಕೊಳ್ಳುವುದಕ್ಕೆ ಆರ್ಥಿಕ ವ್ಯವಸ್ಥೆ ಸುಧಾರಿಸಲೇ ಬೇಕು.

ಹಾಗಾಗಿ ತನ್ನ ಬಳಿ ಫಲವತ್ತಾಗಿದ್ದ ನೆಮ್ಮದಿಯನ್ನು ಪಣಕ್ಕಿಟ್ಟು ಮತ್ತೆಲ್ಲೋಶಾಂತಿ ಸಿಗುತ್ತದೆ ಎಂದು ಬಯಸಿ ಓಡುವುದು. ತಾನು ಅವರಂತೆ ಆಗಬೇಕು ಎನ್ನುವ ಮನಸ್ಸುಳ್ಳವರೇ ಹೊರತು ಎಲ್ಲರಂತಲ್ಲ ನಾನು ಎನ್ನುವ ಮನೋಭಾವನೆಯನ್ನು ಕೂಡ ಬೆಳೆಸಿಕೊಳ್ಳುವುದಿಲ್ಲ. ಕೇಳಿದರೆ ರೋಲ್ ಮಾಡೆಲ್ ವ್ಯಕ್ತಿ ನಂಗೆ ಅವರು ಅನ್ನುತ್ತಾರೆ. ಗುರು ಗುರಿ ಎರಡರ ಜೊತೆ ಈಗಿನ ಪ್ಯಾಶನ್ ಎನ್ನುವಂತೆ ಇನ್ನೊಬ್ಬ ವ್ಯಕ್ತಿಯನ್ನು ನೋಡಿ ತಾನು ಅವರಂತೆ ಆಗಬೇಕು ಎನ್ನುವುದು ಎಲ್ಲರಲ್ಲೂ ಇದೆ. ಇದು ತಪ್ಪೆಂದು ನಾನು ಹೇಳುತ್ತಿಲ್ಲ. ಒಂದು ಒಳ್ಳೆಯ ಕಾರ್ಯ ಯಾರೆ ಮಾಡಿದರೂ ಅದಕ್ಕೆ ಮನ್ನಣೆ ಸಲ್ಲಲೇ ಬೇಕು. ಅದು ಆದರ್ಶವಾಗಿ ನಾವು ರೂಡಿಸಿಕೊಳ್ಳಲೂ ಬೇಕು. ಆದರೆ ಆದರ್ಶ ಎನ್ನುವುದು ನಾವು ಬಯಸಿದೆತ್ತರಕ್ಕೆ ಒಯ್ಯಲು ಒಂದು ದೀಪವಿದ್ದಂತೆ. ಆದರೆ ಆ ಎತ್ತರ ಸಾಧಿಸಲು ಅವರುಗಳು ಏನೆಲ್ಲ ಪಾಡು ಪಟ್ಟಿರುತ್ತಾರೆ ಎನ್ನುವ ಅರಿವನ್ನು ಹೊಂದಬೇಕು. ಅದು ಬಿಟ್ಟು ನಾನು ಮೇಲೆರುತ್ತೇನೆ ಎಂದು ತಪ್ಪು ದಾರಿ ಎಂದು ಹೇಳಲಾಗದಿದ್ದರೂ ಮನಸ್ಸು ಒಪ್ಪದ ಕೆಲಸ ಮಾಡುವುದು ಸೂಕ್ತವಲ್ಲ. ಹಾಗೆ ಆ ಕೆಲಸ ಯಾವುದೋ ಒಂದು ದಾರಿಯಲ್ಲಿ ಮನಸ್ಸು ಒಪದಿದ್ದರೂ ಸರಿ ಇದೆ ಎಂದು ನಡೆದು ಸಾಧಿಸಿದರೆ ಆ ಸುಖ ನೆಮ್ಮದಿ ಎನ್ನುವುದು ಆತನ ಬಾಳಿಗೆ ಸಿಕ್ಕಿತೇ! ಎನ್ನುವುದು ಅನುಮಾನವೇ ಸರಿ.

ಬುದ್ಧಿ ಮತ್ತೆಯಿಂದಲೇ ತನ್ನ ಅವಶ್ಯಕಥೆಯನ್ನು ಪೂರೈಸಿಕೊಳ್ಳಲು ಬೇಕಾದ ಆರ್ಥಿಕವಾದ ಗಳಿಕೆ ಮಾಡುತ್ತಾನೆ. ಈಗೀಗ ಮನುಷ್ಯ.ನಲ್ಲಿ ದೈಹಿಕ ಶ್ರಮ ಕಡಿಮೆಯಾಗಿದೆ. ಮಾನಸಿಕ ಶ್ರಮ ಹೆಚ್ಚಿದೆ. ಅಂದಾಗ ಅವನಲ್ಲಿ ಅಘಾದವಾದ ಬದಲಾವಣೆ ಕೇವಲ ಜೀವನ ಶೈಲಿಯಲ್ಲಿ ಮಾತ್ರವಲ್ಲ ದೇಹದ ಆರೋಗ್ಯದಲ್ಲಿ ಕೂಡ ಬದಲಾಗಿದೆ. ಕುಳಿತು ಉಣ್ಣುವವನಿಗೆ ರೋಗ ಹೆಚ್ಚು ಎನ್ನುವುದು ಒಂದು ಮಾತಿದೆ. ಈ ಜಾಯಮಾನದಲ್ಲಿ ಶ್ರಮವಿದೆ. ಆದರೆ ಆರೋಗ್ಯ ಎನ್ನುವ ಸಂಪತ್ತು ದಿನೆದಿನೆ ಕಳೆದುಕೊಳ್ಳುತ್ತಿದ್ದೇವೆ.
ಬಯಸಿದ ಎತ್ತರ ಏರುವ ಹಂಬಲದಲ್ಲಿ ನಮ್ಮ ದೇಹದ ಮೇಲೆ ಆಗುತ್ತಿರುವ ದುಷ್ಪರಿಣಾಮವನ್ನು ಮರೆತಿದ್ದೇವೆ. ಹಗಲು ರಾತ್ರಿ ಎನ್ನದೇ ದುಡಿತ. ನಿದ್ದೆ ಊಟ ಇಲ್ಲದೆ ನಿತ್ಯ ಗಳಿಕೆಗಾಗಿ ಮೇಲೆರಬೇಕೆಂಬ ಕನಸು ಹೊತ್ತು ಮಾನಸಿಕ ಒತ್ತಡಗಳಿಗೆ ಸಿಲುಕಿ ಒತ್ತಾಟ ನಡೆಸುವುದು ಎಲ್ಲೆಲ್ಲೂ ಕಾಣುತ್ತಿದೆ. ಈ ಒದ್ದಾಟದಿಂದ ಮಹಾನ್ ಬುದ್ಧ ಸಾವಿಲ್ಲದ ಮನೆ ಸಾಸಿವೆ ಇದ್ದರೆ ಕೊಡು ಎಂದು ಆ ದಿನ ಮಗನ ಕಳೆದುಕೊಂಡು ಅಲವತ್ತ ತಾಯಿಗೆ ಹೇಳಿದ್ದ. ಇಂದು ಗುಳಿಗೆ ಇಲ್ಲದ ಮನೆಯಲ್ಲ ಮನುಷ್ಯನನ್ನು ಹುಡುಕಿಕೊಡು ಎಂದು ಹೇಳಬೇಕು ಅಷ್ಟೆ.

ಅಷ್ಟೆಲ್ಲ ಹಗಲು ರಾತ್ರೆ ಎಂದು ನೋಡದೆ ದುಡಿದ ಶ್ರಮಕ್ಕೆ ನೆಮ್ಮದಿ ಎನ್ನುವುದು ಆರೋಗ್ಯ ಹದಗೆಟ್ಟು ನಿಂತಾಗ ಸಿಕ್ಕೀತೆ. ಅದೂ ಮರಿಚೀಕೆಯಾಗಿ ಉಳಿಯುವುದು. ಹಾಗಾದರೆ ಮೊದಲು ನಾವು ನಮಗಿಂತ ಕೆಲಗಿನ ಸ್ತರದಲ್ಲಿ ಜೀವನ ಮಾಡುವವರನ್ನು ಒಮ್ಮೆ ನೋಡಬೇಕು. ಆನಂತರ ಆಕಾಶಕ್ಕೆ ಹಾರುವುದರ ಬಗ್ಗೆ ಯೋಚಿಸಬೇಕು. ಮೇಲೇರಬೇಕು ಎಂದು ಅನ್ಯ ಮಾರ್ಗವನ್ನು ಹಿಡಿದೋ ಅಥವಾ ಸರಿಯಾದ ಮಾರ್ಗವೇ ಆಗಿದ್ದರೂ ಸಮಯವನ್ನು ಮೀರಿ ಲಾಭಕ್ಕಾಗಿ ಮಾನಸಿಕ ಒತ್ತಡ ಹೊಂದಿ ದೈಹಿಕ ವಿಶ್ರಾಂತಿ ತೆಗೆದುಕೊಳ್ಳದೆ ಬಯಸಿದ ಎತ್ತರ ಸಿಕ್ಕರೂ ಪ್ರಯೋಜನ ಏನಿದೆ. ನಮ್ಮ ಮುಂದೆ ಗುರಿ ಇರಬೇಕು. ಆ ಗುರಿಗೆ ತಕ್ಕುನಾದ ಮಾರ್ಗವೂ ಸರಿಯಾಗಿರಬೇಕು. ಆಗ ಮಾತ್ರ ಸಾಧನೆಗೆ ಬೆಲೆ ಬರುತ್ತದೆ. ಹಗಲು ರಾತ್ರೆ ಶ್ರಮಿಸಿದ್ದು ನಿಜ, ಆ ಶ್ರಮ ನಮ್ಮ ಜೀವನದ ಸಾರ್ಥಕತೆಯಾದರೆ ಮಾತ್ರ ಅದಕ್ಕೊಂದು ಬೆಲೆ ಹಾಗೂ ನೆಮ್ಮದಿ. ಅದು ಹೊರತಾಗಿ ಆಕಾಶ ಏರುವ ಭರಾಟೆಯಲ್ಲಿ ಹತ್ತುವ ಏಣಿ ಗಟ್ಟಿ ಇದೆಯೇ, ಮುರಿದು ಬೀಳುವುದೆ, ಕಾಲು ನೋಯ್ಯುವುದೇ ಎಂದೆಲ್ಲ ಯೋಚಿಸಿ, ಅದಕ್ಕೆಲ್ಲ ಬೇಕಾಗುವ ಪೂರ್ವ ತಯಾರಿ ಈ ಭೂಮಿಯ ನೆಲದಲ್ಲೆ ಮಾಡಿಕೊಳ್ಳಬೇಕು.

ನಾವು ಎತ್ತರ ಬೆಳೆಯಬೇಕು ಎನ್ನುವ ಕನಸು ಶ್ರಮದಿಂದಲೇ ಆಗುವುದು. ಆಶ್ರಮವನ್ನು ಎಲ್ಲಿ ಹೇಗೆ ಹಾಕಬೇಕು ಎನ್ನುವ ಅರಿವನ್ನು ಗುರುವಿನಿಂದ ಪಡೆಯಬೇಕು. ಆ ಶ್ರಮಕ್ಕೂ ಕನಸಿನ ಗುರಿಗೂ ಆದರ್ಶವಾದ ವ್ಯಕ್ತಿತ್ವ ನಾವು ಹೊಂದಿದರೆ ಸಮ್ಮ ಸಾಧನೆ ಬಾನೆತ್ತರಕ್ಕೆ ಹಾರುವುದು. ಅಲ್ಲದೇ ನೆಮ್ಮದಿಯ ಬಾಳು ನಮ್ಮದಾಗುವುದು