Home Local ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ನಮಿತ್ ಕುಮಾರ ನಾಗರಾಜ

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ನಮಿತ್ ಕುಮಾರ ನಾಗರಾಜ

SHARE

ಕುಮಟಾ : ತಾಲೂಕಿನ ಪಡುವಣಿಯ ಶ್ರೀ ಶಾಂತಿಕಾ ಪರಮೇಶ್ವರಿ ಯುವಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ 14 ನೇ ವರ್ಷದ ಅಂಡರ್ ಆರ್ಮ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಪ್ರಾಯೊಜಿಸಿದ್ದು ನಮಿತ್ ಕುಮಾರ ನಾಗರಾಜ ಅವರು ಚಾಂಪಿಯನ್ ತಂಡಕ್ಕೆ ಟ್ರೋಫಿ ವಿತರಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಬಹುಮಾನ ವಿತರಕರಾಗಿ ಆಗಮಿಸಿದ ದಿನಕರ ಶೆಟ್ಟಿಯವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಹಾರೈಸಿದರು.

ಈ ಸಂದರ್ಭದಲ್ಲಿ ಸೀತಾರಾಮ ಡಿ. ನಾಯಕ, ಗಣಪತಿ ಪಿ ಪಟಗಾರ, ಸಂತೋಷ ಎಚ್. ಹರಿಕಂತ್ರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.