Home Photo news ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಅನಂತ್ ಕುಮಾರ ಹೆಗಡೆ

ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಅನಂತ್ ಕುಮಾರ ಹೆಗಡೆ

SHARE

ಇಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಅಸ್ಸಾಂ ರಾಜ್ಯದ ಗೌಹಾಟಿಯಲ್ಲಿರುವ PMKK ಕೇಂದ್ರಕ್ಕೆ (ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ) ಅನೀರೀಕ್ಷಿತ ಪರಿಶೀಲನಾ ಭೇಟಿ ನೀಡಿದರು. ಸಚಿವರು ಕೇಂದ್ರದಲ್ಲಿ ದಾಖಲಾಗಿರುವ ಅಭ್ಯರ್ಥಿಗಳನ್ನು ಮಾತನಾಡಿಸಿ ಅವರ ವೃತ್ತಿಜೀವನದ ಆಕಾಂಕ್ಷೆ ಮತ್ತು ಕೇಂದ್ರದಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ವಿಚಾರಣೆ ಮಾಡಿದರು. ಈ ಕೇಂದ್ರದಲ್ಲಿ ನಡೆಸುತ್ತಿರುವ ವಿವಿಧ courseಗಳ ಬಗ್ಗೆ ಮತ್ತು ಅದರ ಆಂತರಿಕ ರಚನಾ ಸೌಲಭ್ಯಗಳನ್ನು ಸಹ ಈ ಸಂದರ್ಭದಲ್ಲಿ ಪರಿಶೀಲಿಸಿದರು.