Home Local ಚಿರತೆ ದಾಳಿ ಯುವಕನಿಗೆ ಗಾಯ : ಅಂಕೋಲಾದಲ್ಲಿ ಘಟನೆ

ಚಿರತೆ ದಾಳಿ ಯುವಕನಿಗೆ ಗಾಯ : ಅಂಕೋಲಾದಲ್ಲಿ ಘಟನೆ

SHARE

ಅಂಕೋಲಾ : ಯುವಕನೋರ್ವನಿಗೆ ರಾತ್ರಿ ಮಲಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿ ತಲೆಯ ಭಾಗವನ್ನು ಗಾಯಗೊಳಿಸಿದ ಘಟನೆ ಅಗಸೂರ ಗ್ರಾ.ಪಂ ವ್ಯಾಪ್ತಿಯ ಮಕ್ಕಿಗದ್ದೆಯಲ್ಲಿ ನಡೆದಿದೆ.

ಮಕ್ಕಿಗದ್ದೆ ನಿವಾಸಿ ಕುಮಾರ ಶಿವು ಗೌಡ (18) ಎಂಬಾತನೆ ಚಿರತೆ ದಾಳಿಗೆ ಸಿಲುಕಿದ್ದವನು. ಈತ ಮನೆಯಲ್ಲಿ ಮಲಗಿದ್ದ ವೇಳೆ ಈತನ ತಲೆಯ ಬಳಿಯೆ ಸಾಕು ನಾಯಿ ಮಲಗಿತ್ತು. ನಸುಕಿನ ವೇಳೆ ಚಿರೆತೆ ಇವರ ಮನೆಯ ಬಳಿ ಬಂದು ನಾಯಿಯನ್ನು ಹೊತ್ತೊಯ್ಯುವಾಗ ಅಲ್ಲೆ ಮಲಗಿದ್ದ ಕುಮಾರನ ತಲೆ ಬಾಗಕ್ಕೆ ಬಲವಾಗಿ ತನ್ನ ಕಾಲಿನಿಂದ ಬರಚಿ ಹೊಗಿದ್ದು ಬರ್ಚಿದಾಗ ಮೂರು ಭಾಗದಲ್ಲಿ ಗಾಯವಾಗಿರುವುದು ಕಂಡುಬಂದಿದೆ. ಬೆಳಿಗ್ಗೆ ಅಂಕೋಲಾ ತಾಲೂಕಾ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿರುವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿ.ಟಿ.ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಸಂಜೀವ ನಾಯ್ಕ, ಅರಣ್ಯ ರಕ್ಷಕ ರಾಹುಲ, ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಈ ಸಂದರ್ಬದಲ್ಲಿ ಅಗಸೂರ ಗ್ರಾ.ಪಂ ಉಪಾಧ್ಯಕ್ಷ ಯಶ್ವಂತ ತಿಮ್ಮಾ ಗೌಡ ಉಪಸ್ಥಿತರಿದ್ದರು.