Home Local ಸಂಪನ್ನಗೊಂಡ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ.

ಸಂಪನ್ನಗೊಂಡ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ.

SHARE

ಅಂಕೋಲಾ : ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕವನ ಸ್ಪರ್ಧೆಯಲ್ಲಿ ದೀಪಾ ಜಟ್ಟಿ ನಾಯ್ಕ ಪ್ರಥಮ, ಕೀರ್ತಿ ಬಾಂದೇಕರ ದ್ವಿತೀಯ, ಅಕ್ಷತಾ ಗೌಡ ತೃತೀಯ ಸ್ಥಾನ ಪಡೆದ ಕ್ರಮವಾಗಿ ರೂ. 1000, ರೂ. 700, ರೂ. 500 ನಗದು ಹಾಗೂ ಪ್ರಮಾಣ ಪತ್ರ ಪಡೆದರು.

ಕಥಾ ಸ್ಪರ್ಧೆಯಲ್ಲಿ ಸಚಿನ ಜಾನು ನಾಯ್ಕ ಪ್ರಥಮ, ಗಣೇಶ ಜೆ. ನಾಯ್ಕ ದ್ವಿತೀಯ, ಸ್ಮಿತಾ ನಾಯ್ಕ ತೃತೀಯ ಸ್ಥಾನ ಪಡೆದ ಕ್ರಮವಾಗಿ ರೂ. 1000, ರೂ. 700, ರೂ. 500 ನಗದು ಹಾಗೂ ಪ್ರಮಾಣ ಪತ್ರ ಪಡೆದರು. ಖ್ಯಾತ ಸಾಹಿತಿ ಡಾ. ರಾಮಕೃಷ್ಣ ಗುಂದಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ನಡೆದ ದಶಮಾನೋತ್ಸವದಲ್ಲಿ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಈ ಬಹುಮಾನ ವಿತರಿಸಿದರು.