Home Important ರಿಯಲ್ ಹೀರೋ ಆಗಿ ಕಂಗೊಳಿಸಿದ ಸಿ.ಅರ್.ನಾಯ್ಕ! ಸಾಧಕರು ಎಂದರೆ ಹೀಗಿರಬೇಕು.

ರಿಯಲ್ ಹೀರೋ ಆಗಿ ಕಂಗೊಳಿಸಿದ ಸಿ.ಅರ್.ನಾಯ್ಕ! ಸಾಧಕರು ಎಂದರೆ ಹೀಗಿರಬೇಕು.

SHARE

ಸಿ.ಅರ್.ನಾಯ್ಕ ಅವರಿಗೆ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್‌ ನೀಡುವ ಅರ್ಥ್ ಹೀರೋಸ್ ೨೦೧೭ “ಗ್ರೀನ್ ವಾರಿಯರ್ಸ”ಪ್ರಶಸ್ತಿಯ ಗರಿ ದೊರೆತಿದೆ. ಈ ಮೂಲಕ ರಿಯಲ್ ಹೀರೋ ಆಗಿದ್ದಾರೆ.

ಇಲ್ಲಿಯವರೆಗೆ ಕೇವಲ ಐ.ಎಫ್.ಎಸ್ ಮುಗಿಸಿದವರಿಗೆ, ದೊಡ್ಡ ದೊಡ್ಡ ಎನ್.ಜಿ.ಯೋ ಗಳಿಗೆ ಸಿಕ್ಕಿದ್ದಂತ ಪ್ರತಿಷ್ಠಿತ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಅರ್ಥ್ ಹೀರೋಸ್ ೨೦೧೭ ಅಡಿಯಲ್ಲಿ “ಗ್ರೀನ್ ವಾರಿಯರ್ಸ” ಪ್ರಶಸ್ತಿಯನ್ನು ಪ್ರಪ್ರಥಮವಾಗಿ ಖಾಕಿಧಾರಿಗೆ ನೀಡಿ ತನ್ನ ಪ್ರತಿಷ್ಠಿತೆಗೆ ಇನ್ನಷ್ಟು ಮೆರಗು ನೀಡಿದೆ..

ಪ್ರಸ್ತುತ ಅಣಶಿ ರೇಂಜ್ ನಲ್ಲಿ ಸುಳಗಿರಿ ಸೆಕ್ಷನ್ ನಲ್ಲಿ ಡ್ಯೆಪುಟಿ ಅರ್.ಎಫ್. ಒ ಆಗಿ ಕಾರ್ಯನಿರ್ವಹಿಸುತ್ತಿರುವಂತ ಮೂಲತಃ ತಲಗೇರಿ ಊರಿನವರು, ಹಗೂ ಡಾ!ಎ.ವಿ.ಬಾಳಿಗಾ ಕಾಲೇಜ್ ಹಳೆಯ ವಿದ್ಯಾರ್ಥಿಯಾದ ಶ್ರೀ ಸಿ.ಅರ್.ನಾಯ್ಕ..(ಸ್ನೇಹಿತರಿಂದ ಪ್ರೀತಿಯಿಂದ “ಬೊಡ್ಡಿ ರಾಜು” ಎಂದು ಕರೆಯಲ್ಪಡುವ) ಇವರು ತಮ್ಮ ಕಟ್ಟು ನಿಟ್ಟಿನ ಡ್ಯೂಟಿ, ವನ್ಯಜೀವಿಗಳ ವಲಯದಲ್ಲಿ ನಡೆದ ಕಳ್ಳ ಬೇಟೆ, ಮರಗಳ್ಳರ ಹಾವಳಿಗೆ ಕಡಿವಾಣ, ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿ, ಚಿಮ್ಮುವ ಕಪ್ಪೆಯ ಹೊಸ ಪ್ರಭೇದ ಕಂಡುಹಿಡಿಯುವಿಕೆ, ಮುಂತಾದ ಅನೇಕ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದಾೆ.

ಅವರೇ ತನ್ನನ್ನು ತಮಾಷೆಯಾಗಿ ಹೇಳಿಕೊಳ್ಳುವುದು ಐ ಆ್ಯಮ್ ಎ… “ಯು.ಸಿ.ಬಿ.ಎ ಪರ್ಸನ್” ಅಂತ, ಅಂದ್ರೆ ನಾನು ಅನ್ ಕಂಪ್ಲೀಟೆಡ್ ಬಿ.ಎ ಮನುಷ್ಯ ಎಂದು.
“ಎರಡನೇ ಪಿ.ಯು.ಸಿ ಕಲಿತು, ಡಿಗ್ರಿ ಕಂಪ್ಲೀಟ್ ಮಾಡದಿದ್ದರೂ
ಇವತ್ತು ಈ ಎತ್ತರಕ್ಕೆ ಬೆಳೆಯಲು ಅವರ ಕರ್ತವ್ಯನಿಷ್ಠೆ ,ವ್ರತ್ತಿ ಮೇಲೆ ಇರುವ ಪ್ರೀತಿ, ಹಾಗೂ ಕಾಡು ಎನ್ನುವುದು ಒಂದು ಪಾಠ ಶಾಲೆ ಎನ್ನುವ ಕಲಿಕೆಯ ಉತ್ಸಾಹವೇ ಕಾರಣ ಎನ್ನಬಹುದು.

ಸದಾ ಮೊಬೈಲ್, ಸೆಲ್ಫಿ, ವಾಟ್ಸಪ್, ಫೇಸ್ ಬುಕ್ ನಲ್ಲಿ ಮುಳುಗಿ ಸಸೂಬು ಹೇಳುವವರಿಗೆ, ಬಿಡುವಿಲ್ಲದ ಡ್ಯೂಟಿಯ ನಡುವೆ, ಮನಸ್ಸಿದ್ದರೆ ಇತರೆ ಚಟುವಟಿಕೆಗಳನ್ನು ನಡೆಸಲು ಸಾಧ್ಯ ಎಂದು ಸಾಧಿಸಿ ತೋರಿಸಿದ್ದಾರೆ, ಶ್ರೀಯುತರು ಪ್ರಸ್ತುತ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಯಲ್ಲಿ ಇದ್ದು ತನಗೆ ಪ್ರಶಸ್ತಿ ಬರಲು ಇಲಾಖೆಯ ಮೇಲಾಧಿಕಾರಿಗಳು, ಸಹೋದ್ಯೋಗಿಗಳು, ಮತ್ತು ತಾನು ಕೆಲಸ ಮಾಡುತ್ತಿರುವ ವಲಯದ ನಾಗರೀಕರ ಸಹಕಾರ ಪ್ರೋತ್ಸಾಹವೇ ಕಾರಣ ಎಂದಿದ್ದಾರೆ.

ಡಿಗ್ರಿ ಮುಗಿಸದೇ ಇಷ್ಟೆಲ್ಲಾ ಎತ್ತರಕ್ಕೆ ಬೆಳೆಯುವ ಮೂಲಕ ಇವರು.
ಈಗ ಇಲಾಖೆಗೆ ಬರುತ್ತಿರುವ ಹೈ ಎಜ್ಯುಕೇಶನ್ ಪಡೆದ ಗಾರ್ಡ,ವಾಚರ್, ಫಾರೆಸ್ಟರ್ ಇವರಿಗೆಲ್ಲರಿಗೂ
ಮನಸ್ಸಿದ್ದರೆ, ಆತ್ಮವಿಶ್ವಾಸವಿದ್ದರೆ, ವ್ರತ್ತಿ ನಿಷ್ಠೆ, ಸದಾ ಹೊಸತನದ ಉತ್ಸಹವಿದ್ದರೆ, ಎನನ್ನಾದರೂ ಸಾಧಿಸಬೆಕೆನ್ನುವ ಛಲ,ತುಡಿತವಿದ್ದರೆ ಆಕಾಶವನ್ನೂ ಮುಟ್ಟಬಹುದೆಂಬ ಸಂದೇಶವನ್ನು ರವಾನಿಸಿದ್ದಾರೆ.

ಇದರ ಜೊತೆಗೆ ಅವರು ಗೌರವ ಪಡೆಯುವ ಮೊದಲು ಕನ್ನಡದಲ್ಲಿ ಮಾತಾಡಿ ಎಲ್ಲರ ಮೆಚ್ಚುಗೆ ಪಡೆದರು. ದಿಲ್ಲಿಯಲ್ಲಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್‌ ನೀಡುವ ಅರ್ಥ್ ಹೀರೋಸ್ ೨೦೧೭ “ಗ್ರೀನ್ ವಾರಿಯರ್ಸ”ಪ್ರಶಸ್ತಿಯ ಸಮಾರಂಭದಲ್ಲಿ ಕನ್ನಡದ ಕಲರವ ಹರಡಿದ ಸಿ.ಅರ್.ನಾಯ್ಕ,ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಸಿ.ಅರ್‌.ನಾಯ್ಕರವರಿಂದ ಬಂದ ಮೊದಲ ಮಾತು ಸ್ವಚ್ಛ ಕನ್ನಡದಲ್ಲಿ ಎಲ್ಲರಿಗೂ ನನ್ನ ನಮಸ್ಕಾರ
ಜೊತೆಗೆ ಹೆತ್ತ ತಂದೆ, ತಾಯಿಯವರಿಗೆ ನಮನ,
ಅದಲ್ಲದೇ…ಕೆಲಸ ಮಾಡುತ್ತಿರುವ ” ಕರ್ನಾಟಕ ಫಾರೆಸ್ಟ್ ಇಲಾಖೆಗೆ”ಸಲ್ಲಿಸಿದ ಧನ್ಯವಾದ, ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿರುವ ವಾಚರ್ ಗಳಿಂದ ಹಿಡಿದು, ಗಾರ್ಡ್, ಫ್ಯೂನ್, ಹಿರಿಯ ಅಧಿಕಾರಿಗಳು, ಸೇವೆಸಲ್ಲಿಸಿತ್ತುರುವ ಜಾಗದ ನಾಗರೀಕರಿಂದ ಹಿಡಿದು, ಡಿಪಾರ್ಟ್ಮೆಂಟ್ನಗೆ ಅಕ್ರಮ ಸಾಕಾಣಿಕೆ ತಡೆಯುವ ಮಾಹಿತಿಯನ್ನು ಕೊಡುವವರಿಂದ ಹಿಡಿದು ಬೆಳೆಯಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ, ಸಲಹೆ ನೀಡಿದವರ ಸ್ಮರಣೆ ಮಾಡಿದ್ದು ವಿಶೇಷವಾಗಿತ್ತು.