Home Local ಅಂಬೇಡ್ಕರ ನ್ಯಾಶನಲ್ ಫಿಲಾಸಫಿ ಅವಾರ್ಡಗೆ ಆಯ್ಕೆಯಾದ ಉದಯ ಬಶೆಟ್ಟಿ!

ಅಂಬೇಡ್ಕರ ನ್ಯಾಶನಲ್ ಫಿಲಾಸಫಿ ಅವಾರ್ಡಗೆ ಆಯ್ಕೆಯಾದ ಉದಯ ಬಶೆಟ್ಟಿ!

SHARE

ಕಾರವಾರ:ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ‘ಬಾಬಾಸಾಹೇಬ ಡಾ.ಅಂಬೇಡ್ಕರ ನ್ಯಾಶನಲ್ ಫಿಲಾಸಫಿ ಅವಾರ್ಡ್‌’ಗೆ ತಾಲ್ಲೂಕಿನ ಶಿರವಾಡ ಗ್ರಾಮ ಪಂಚಾಯ್ತಿ ಸದಸ್ಯ ಉದಯ ಬಶೆಟ್ಟಿ ಆಯ್ಕೆಯಾಗಿದ್ದಾರೆ.

1984ರಲ್ಲಿ ಉಪಪ್ರಧಾನಿಯಾಗಿದ್ದ ಡಾ.ಬಾಬು ಜಗಜೀವನ್‌ ರಾಂ ಅವರು ಸ್ಥಾಪಿಸಿದ್ದ ಅಕಾಡೆಮಿಯು ೩೩ ವರ್ಷದ ಸಂಭ್ರಮಾಚರಣೆಯಲ್ಲಿದೆ. ಆ ನಿಮಿತ್ತ ನವದೆಹಲಿಯಲ್ಲಿ ಡಿಸೆಂಬರ್ ೯ ಮತ್ತು ೧೦ರಂದು ರಾಷ್ಟ್ರೀಯ ಸಮಾವೇಶ ನಡೆಯುತ್ತಿದ್ದು, ಈ ವೇಳೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಸ್ಯೆಗೆ ಸ್ಪಂದಿಸಿ, ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ, ಸಮಾಜದ ಏಳ್ಗೆಗಾಗಿ ದುಡಿಯುವವರಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಅಕಾಡೆಮಿಯ ಮುಖ್ಯ ಪೋಷಕರಾಗಿ ಡಾ.ಮಾತಾ ಪ್ರಸಾದ್, ಮೆಝೋರಾಂನ ಮಾಜಿ ರಾಜ್ಯಪಾಲ ಡಾ.ಎ.ಪದ್ಮನಾಭನ್, ಮಾಜಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಸಿಂಧೆ, ಮಾಜಿ ಸಾಮಾಜಿಕ ನ್ಯಾಯ ಸಚಿವ ಡಾ.ಸತ್ಯನಾರಾಯಣ ಜಾಟಿಯಾ ಉದಯ ಬಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ.