Home Local ಶಿರಸಿಯಲ್ಲಿ ಪ್ರದರ್ಶನ ಕಂಡಿತು ಅಂಗದಾನಗಳು ಪುರಾಣ ಸಮ್ಮತವೇ? ಕುರಿತಾದ ಪರಿಕಲ್ಪನೆಯ ರೂಪಕ

ಶಿರಸಿಯಲ್ಲಿ ಪ್ರದರ್ಶನ ಕಂಡಿತು ಅಂಗದಾನಗಳು ಪುರಾಣ ಸಮ್ಮತವೇ? ಕುರಿತಾದ ಪರಿಕಲ್ಪನೆಯ ರೂಪಕ

SHARE

ಅಂಗದಾನಗಳು ಪುರಾಣ ಸಮ್ಮತವೇ? ಪುರಾಣಗಳಲ್ಲೂ ಅಂಗಗಳ ಕಸಿ ನಡೆದಿತ್ತೇ? ಅಂಥದೊಂದ್ದರ ಕುರಿತಾದ ಪರಿಕಲ್ಪನೆಯ ರೂಪಕ ಶಿರಸಿಯಲ್ಲಿ ಪ್ರದರ್ಶನ ಕಂಡಿತು. ನಾಟ್ಯದೀಪ ಕಲ್ಚರಲ್‌ ಅಸೋಸಿಯೇಶನ್‌ ನಡೆಸಿದ ಈ ಪ್ರಯೋಗ ಹೊಸ ಹೊಳಹಿಗೂ ಕಾರಣವಾಯಿತು’

ಅಂಗದಾನಗಳನ್ನು ವೈದ್ಯಕೀಯ ಲೋಕ ಇದನ್ನು ಸ್ವಾಗತಿಸಿದರೂ ಹಲವಡೆ ವೈದಿಕೀಯ ಲೋಕ ಇದನ್ನು ಅಷ್ಟಾಗಿ ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ನಮ್ಮ ಪುರಾಣ ಕಥೆಗಳು ಏನೆನ್ನುತ್ತವೆ? ಅಲ್ಲಿ ಸಮ್ಮತವಾಗಿತ್ತೇ? ಪುರಾಣಗಳಲ್ಲೂ ಅಂಗಗಳ ಕಸಿ ನಡೆದಿತ್ತೇ? ಈ ಚರ್ಚೆಗಳು ಇಂದಿಗೂ ಇದೆ. ಅಂಥ ಪುರಾಣ ಕಥಾನಗಳಲ್ಲಿನ ಕಸಿ, ನೇತ್ರದಾನ, ದೇಹದಾನ, ಅಂಗದಾನಗಳ ಕುರಿತು ಇರುವ ಕಥೆಗಳನ್ನೇ ಸೇರಿಸಿ ಒಂದು ಭರತನಾಟ್ಯ ರೂಪಕ ಇಲ್ಲಿ ಗಮನ ಸೆಳೆದಿದೆ. ಪುರಾಣಗಳಲ್ಲಿ ಅಂಗದಾನ ಕುರಿತು ಇರುವ ಕಥಾನಕ ಅನಾವರಣಗೊಳಿಸುವ ಅಪರೂಪದ ಭರತನಾಟ್ಯ ನೃತ್ಯ ರೂಪಕ “ಅಂಗದಾನಂ ಪರಂಸ್ಮತಂ’ ಒಂದೂವರೆ ಗಂಟೆಗಳ ಕಾಲ ಮನ ಮುಟ್ಟುವಂತೆ ನಗರದ ಲಯನ್ಸ ನಯನ ನೇತ್ರ ಭಂಡಾರ ಪ್ರದರ್ಶನದ ವೇಳೆ ಪ್ರದರ್ಶನ ಕಂಡಿತು.

ದೇಹದಾನ, ನೇತ್ರದಾನ, ರಕ್ತ ದಾನ ಇತ್ಯಾದಿಗಳನ್ನು ನಮ್ಮ ಉಪಯೋಗದ ನಂತರ ಅವಶ್ಯವಿದ್ದವರಿಗೆ ದಾನ ಮಾಡುವ ಲೋಕಹಿತದ ಜಾಗೃತಿಗಾಗಿ ಪುರಾಣಗಳಲ್ಲಿ ನಡೆದ ಗಣೇಶನಿಗೆ ಆನೆ ಮುಖದ ಅಂಗಕಸಿ, ಶಬಿ ಚಕ್ರವರ್ತಿಯಿಂದ ಮಾಂಸ ಹಾಗೂ ಹೃದಯ ದಾನ ಕಥಾನಕ, ದದೀಚಿ ದೇಹ ದಾನ, ಬೇಡರ ಕಣ್ಣಪ್ಪನಿಂದ ನೇತ್ರದಾನ ಸೇರಿದಂತೆ ಪುರಾಣಗಳಲ್ಲಿನ ಕಥಾನಕವನ್ನು ಮನಮುಟ್ಟುವಂತೆ ನಿರೂಪಿಸಲಾಯಿತು. ಇಲ್ಲಿನ ನಾಟ್ಯದೀಪ ಕಲ್ಚರಲ್‌ ಟೀಂ ಕಲಾವಿದರು ನಡೆಸಿಕೊಟ್ಟರು. ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ನೃತ್ಯ ವಿದುಷಿ, ಗುರು ಸೀಮಾ ಭಾಗವತ್‌ ನಿರ್ದೇಶನದಲ್ಲಿ ಶಿಷ್ಟ ಪ್ರಯತ್ನ ನಡೆಸಿಕೊಟ್ಟರು.

ಮೇಲುಕೋಟೆಯ ವಿದ್ವಾಂಸ ಉಮಾಕಾಂತ ಭಟ್ಟ ಕೇರೇಕೈ ಹಾಗೂ ನೇತ್ರ ತಜ್ಞ ಡಾ.ಶಿವರಾಮ ಕೆ.ವಿ. ಪರಿಕಲ್ಪನೆಯ ರೂಪಕಕ್ಕೆ ಪೋ›. ಎಂ.ಎ.ಹೆಗಡೆ ದಂಟ್ಕಲ್‌ ಗೀತ ಸಾತ್ಯ ರಚನೆ ಮಾಡಿದ್ದಾರೆ. ನತ್ಯ ಸಂಯೋಜನೆ ಜೊತೆ ನಟುವಾಂಗವನ್ನು ವಿದುಷಿ ಸೀಮಾ ಭಾಗವತ್‌ ನೀಡಿದ್ದಾರೆ. . ಬಾಲಸುಬ್ರಹ್ಮಣ್ಯಂ, ಮೃದಂಗ ಜನಾರ್ಧನ ರಾವ್‌, ಕೊಳಲು ಜಯರಾಂ ಬೆಂಗಳೂರು, ರಿಸಂಪ್ಯಾಡ್‌ ಕಾರ್ತಿಕ್‌ ಮೂರ್ತಿ, ಅವರ ತಂಡ ಹಿನ್ನಲೆ ಗಾಯನ ಒದಗಿಸಿದೆ. ಈಶ್ವರ, ಶಬಿ ಚಕ್ರವರ್ತಿ, ದದೀಚಿ, ಬೇಡರ ಕಣ್ಣಪ್ಪನ ಪಾತ್ರಗಳು, ಋಷಿ ಪಾತ್ರಧಾರಿಗಳು ಮನ ಮುಟ್ಟುವಂತೆ ನಿರ್ವಹಿಸಿದರು. ಇಂದ್ರನಾಗಿ ನಧಿ ಸ್ವಾದಿ, ಪಾರ್ವತಿಯಾಗಿ ನವ್ಯ ಭಟ್ಟ, ಶಿವನಾಗಿ ದೀಪಾ ಭಗವತ್‌, ಸೂತಧಾರನಾಗಿ ದೀಕ್ಷಾ ಭಟ್ಟ, ಬೇಡರ ಕಣ್ಣಪ್ಪನಾಗಿ ಸೌಭಾಗ್ಯ ಹಂದ್ರಾಳ, ನರ್ತಕಿಯಾಗಿ ಚೈತ್ರಾ ಹೆಗಡೆ, ದದೀಚಿಯಾಗಿ ಸೌಮ್ಯ ಕಚವೀರಮಠ, ಶಬಿ ಚಕ್ರವರ್ತಿಯಾಗಿ ಅಮೃತಾ ಸುಗಂಧಿ, ದೇವತೆಯಾಗಿ ನಿರೀಕ್ಷಾ ಸ್ವಾದಿ, ಪಾರಿವಾಳವಾಗಿ ಅನಘ ಹೆಗಡೆ, ಗರುಡನಾಗಿ ಪಲ್ಲ ಕೊಡಿಯಾ, ದೇವತೆಯಾಗಿ ನಿಧಿ ಗೌಡ, ಗಣಪತಿಯಾಗಿ ನಿತ್ಯಾ ರಾವ್‌, ಶಿಷ್ಯರಾಗಿ ಸಂಜನಾ ಹೆಗಡೆ, ನಚಿಕೇತ್‌ ಹೆಗಡೆ ಪಾತ್ರ ನಿರ್ವಸಿದರು.