Home Local ಸಾಮೂಹಿಕ ಲಸಿಕೆ ನೀಡುವ ಕಾರ್ಯಕ್ರಮ ನವೆಂಬರ್ 1ರಿಂದ….

ಸಾಮೂಹಿಕ ಲಸಿಕೆ ನೀಡುವ ಕಾರ್ಯಕ್ರಮ ನವೆಂಬರ್ 1ರಿಂದ….

SHARE

ಕಾರವಾರ: ಜಾನುವಾರಗಳ ಕಾಲು ಬಾಯಿರೋಗ ನಿರ್ಮೂಲನೆಗಾಗಿ 13ನೇ ಸುತ್ತಿನ ಸಾಮೂಹಿಕ ಲಸಿಕೆ ನೀಡುವ ಕಾರ್ಯಕ್ರಮವನ್ನು ನವೆಂಬರ್ 1ರಿಂದ 25ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಕಾಲುಬಾಯಿರೋಗವು ದನಕರು, ಎಮ್ಮೆ ಹಾಗೂ ಹಂದಿಗಳಲ್ಲಿ ಕಾಣಿಸಿಕೊಳ್ಳುವ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯಾಗಿದ್ದು ರೋಗದ ನಿರ್ಮೂಲಣೆಗಾಗಿ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಮಾದರಿಯಲ್ಲಿ ಎಲ್ಲಾ ಜಾನುವಾರಗಳಿಗೆ ಏಕಕಾಲದಲ್ಲಿ ಲಸಿಕೆ ನೀಡಲಾಗುವುದು ಎಂದು ಜಾನುವಾರುಗಳ ಕಾಲುಬಾಯಿರೋಗ ನಿರ್ವಹಣಾ ಸಮಿತಿಯ ಅಧ್ಯಕ್ಷರು, ಹಾಗೂ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದ್ದಾರೆ.