Home Local ಕುಮಟಾದಲ್ಲಿ ಹಾಲಕ್ಕಿ ಸಮಾಜದ ಸಭಾಭವನ ನಿರ್ಮಿಸುವ ಕುರಿತು ನಾಳೆ ಸಭೆ!

ಕುಮಟಾದಲ್ಲಿ ಹಾಲಕ್ಕಿ ಸಮಾಜದ ಸಭಾಭವನ ನಿರ್ಮಿಸುವ ಕುರಿತು ನಾಳೆ ಸಭೆ!

SHARE

ಕುಮಟಾ : ಹಾಲಕ್ಕಿ ಸಮಾಜದ ಸಭಾಭವನ ನಿರ್ಮಿಸುವ ಕುರಿತಂತೆ ದಿನಾಂಕ 29-10-2017 ರ ರವಿವಾರ ಸಂಜೆ 3 ಗಂಟೆಗೆ ಮಿರ್ಜಾನ ನ ಆದಿಚುಂಚನಗಿರಿ ಮಠದ ಶಾಲೆಯ ಸಭಾಂಗಣದಲ್ಲಿ ಹಾಲಕ್ಕಿ ಸಮಸ್ತ ರ ಸಭೆ ಕರೆಯಲಾಗಿದೆ. ವಿಶೇಷವಾಗಿ ಈ ಸಭೆ ಯಲ್ಲಿ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ಊರಗೌಡ ಹಾಗೂ ಇತರ ಮುಖಂಡರುಗಳು ಹಾಜರಿರುವಂತೆ ವಿನಂತಿಸಲಾಗಿದೆ. ಹೆಚ್ಚಿನ ಸಂಖ್ಯೆ ಯಲ್ಲಿ ಹಾಲಕ್ಕಿ ಸಮಾಜದ ಬಂಧುಗಳು ಸರಿಯಾದ ಸಮಯಕ್ಕೆ ಹಾಜರಿರಲು ವಿನಂತಿಸಿದ್ದಾರೆ.

ಸಮಾಜದ ಯಾರಿಗೆ ಈ ವಿಷಯ ತಿಳಿದಿಲ್ಲವೋ ಅವರಿಗೆ ತಾವು ತಿಳಿಸಿ ಅವರನ್ನೂ ಸಭೆ ಗೆ ಬರುವಂತೆ ಮಾಡಿ. ಹಾಲಕ್ಕಿ ಸಮಸ್ತ ರು ಸೇರಿದ ಸಭೆ ಯಲ್ಲಿ 1 ಗಟ್ಟಿ ನಿರ್ಧಾರ ತೆಗೆದುಕೋಳ್ಳೋಣ. ಇದಕ್ಕೆ ತಮ್ಮೆಲ್ಲರ ಉಪಸ್ಥಿತ ಬಹು ಮುಖ್ಯ. ಹಾಗಾಗಿ ಸರಿಯಾದ ಸಮಯಕ್ಕೆ ಮುದ್ದಾಂ ಬನ್ನಿ ಎಂಬುದಾಗಿ ಡಾ. ಶ್ರೀಧರ ಗೌಡ. ಕಾರ್ಯದರ್ಶಿ. ತಾಲೂಕು ಹಾಲಕ್ಕಿ ಸಂಘ( ರಿ) ಮತ್ತು ಅಧ್ಯಕ್ಷ. ಉ.ಕ.ಜಿಲ್ಲಾ ಹಾಲಕ್ಕಿ ನೌಕರರ ಸಂಘ( ರಿ ) ಇವರು ವಿನಂತಿಸಿದ್ದಾರೆ.