Home Local ನನ್ನ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ : ಶಿವರಾಮ ಹೆಬ್ಬಾರ

ನನ್ನ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ : ಶಿವರಾಮ ಹೆಬ್ಬಾರ

SHARE

ಮುಂಡಗೋಡ : ನನ್ನ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಕಾಂಗ್ರೆಸ್ ಕಾರ್ಯಕರ್ತರು ಎದೆ ಉಬ್ಬಿಸಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪ್ರಚಾರ ಕೈಗೊಳ್ಳಿ. ಸಿದ್ದರಾಮಯ್ಯ ಮಾಡಿದಂತ ಕಾರ್ಯಗಳು ಹಾಗೂ ಶಾಸಕರು ಕ್ಷೇತ್ರದಲ್ಲಿ ಮಾಡಿದಂತಹ ಕಾರ್ಯಗಳ ಕೈಪಿಡಿ ಜನರಿಗೆ ನೀಡಿ ತಿಳಿಸಿದರೆ ಚುನಾವಣೆಯ ಅರ್ಧಕ್ಕ ಅರ್ಧಾ ಕೆಲಸ ಮುಗಿದಂತೆ ಎಂದು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಹುಬ್ಬಳ್ಳಿ ಶಿರಸಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಂಜೆ ಬೂತಮಟ್ಟದ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್ ಮನೆ ಮನೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನವರಿ ಅಂತ್ಯದೊಳಗೆ ತಾಲೂಕಿನ 15 ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತಿಶತ 75 ಕಾಂಕ್ರೇಟ್ ರಸ್ತೆ ನಿರ್ಮಾಣ ಆಗುತ್ತವೆ. ಮುಂಡಗೋಡ ಪಟ್ಟಣದಲ್ಲಿ ಮನೆಗಳ ನಿರ್ಮಿಸಲು ಕೃಷಿ ಇಲಾಖೆಗೆ ಸಂಬಂದ ಪಟ್ಟ 15 ಎಕರೆ ಪ್ರದೇಶವನ್ನು ಪಟ್ಟಣಪಂಚಾಯತ್ ಸುಪರ್ದಿಗೆ ಬರಲಿದೆ. ಪಟ್ಟಣದಲ್ಲಿ 650-700 ಜನರಿಗೆ ಮನೆ ಹಾಗೂ ನಿವೇಶನ ವಿಲ್ಲ ಶೀಘ್ರದಲ್ಲಿ ಈ ಕುರಿತು ಕ್ರಮಕೈಗೊಳ್ಳಲಾಗುವುದು. ಎಂದರು ಮುಂಡಗೋಡ ಪಟ್ಟಣದಲ್ಲಿ ಡಿಸೆಂಬರ 1ಕ್ಕೆ ಇಂದಿರಾ ಕ್ಯಾಂಟಿನ್ ಪ್ರಾರಭವಾಗಲಿದೆ ಎಂದರು. ಕಾಂಗ್ರೆಸ್ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡುವುದರಿಂದ ಬಿಜೆಪಿ ಮನೆಗೆ ಹೋಗುತ್ತದೆ ಎಂಬ ಮಾತು ಕೇಳಿಬರುತ್ತಿದೆ ಎಂದರು. ನಾನು ಕಾಂಗ್ರೆಸ್ ನಲ್ಲೇ ಇರುವುದು ಕಾಂಗ್ರೆಸ್ ದಿಂದ ಸ್ಪರ್ಧಿಸಿ ಜಯಗಳಿಸುತ್ತೇನೆ. ಯಾವುದೇ ಮಾಧ್ಯಮದಲ್ಲಿ ಕಾಂಗ್ರೆಸ್ ಬಿಡುತ್ತಿದ್ದಾರೆ ಎಂಬ ಸುದ್ದಿಗೆ ಕಿವಿಗೊಡಬೇಡಿ ಎಂದರು.

ಪಕ್ಷ ಬಿಟ್ಟು ಹೋದವರು ಇನ್ನೂ ಅಧಿಕಾರದಲ್ಲಿದ್ದಾರೆ ಅವರ ಕುರಿತು ಕ್ರಮಕೈಗೊಳ್ಳಿ ಎಂದು ಪಕ್ಷದ ಕೆಲ ಕಾರ್ಯಕರ್ತರು ಒತ್ತಾಯಿಸಿದಾಗ ಶಾಸಕರು ಮಾತನಾಡಿ ಪಕ್ಷ ಬಿಟ್ಟುಹೋಗಿ ಬಿಜೆಪಿಗೆ ಸೇರಿಕೊಂಡವರಿಗೆ ಹಿರಿಯ ನಾಯಕರು ಕ್ರಮಕೈಗೊಳ್ಳುತ್ತಾರೆ ಮರ್ಯಾದೆಯಿಂದ ತಾವೆ ರಾಜಿನಾಮೆಕೊಟ್ಟು ಹೋಗುತ್ತಿದ್ದರೆ ಒಳ್ಳೆಯದಾಗುತ್ತಿತ್ತು ಅಂತ ಕಾಂಗ್ರೆಸ್ ಇಷ್ಟುದಿನ ತಡೆಯಿತು ಮುಂದೆ ಈ ಕುರಿತು ಪಕ್ಷ ಕ್ರಮಕೈಗೊಳ್ಳಲಿದೆ ಎಂದರು

ಕೆಪಿಸಿಸಿ ಕಾರ್ಯದರ್ಶಿ ವಿ.ಎಸ್. ಆರಾಧ್ಯ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಸಿಕೊಂಡ ಕ್ಷಣದಲ್ಲಿ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದರು ಇದರಿಂದ ಕಳೆದ ನಾಲ್ಕುವರ್ಷಗಳಿಂದ ರಾಜ್ಯದ ಯಾವುದೇ ಭಾಗದಿಂದ ಗೂಳೆ ಹೋಗಿದ್ದು ಉದಾಹರಣೆ ಇಲ್ಲ. ಸಿದ್ದರಾಮಯ್ಯ ಜಾರಿಗೆ ತಂದಂತಹ ವಿವಿಧಯೋಜನೆಗಳು ಎಲ್ಲಾ ಧರ್ಮ ಜಾತಿ, ಸಹಕಾರಿಯಾಗಿವೆ ಇಂದಿರಾ ಕ್ಯಾಂಟಿನ್ ದಿಂದ ಪ್ರವಾಸಿಗರು ಬಡವರು ಕೂಲಿಕಾರ್ಮಿಕರು ಹೆಚ್ಚಿನ ಬೆಲೆತೆತ್ತು ಉಪಹಾರ ಊಟ ಮಾಡುವರಿಗೆ ತುಂಬಾ ಅನುಕೂಲವಾಗಿ ಹಣ ಉಳಿತಾಯವಾಗಿದೆ. ರಾಜ್ಯಸರಕಾರ ಚುನಾವಣೆಯಲ್ಲಿ ಪ್ರನಾಳಿಕೆಯಲ್ಲಿ ನೀಡಿದಂತ 165 ಯೋಜನೆಗಲ್ಲಿ 159 ಪೂರ್ಣಗೊಳಿಸಲಾಗಿದೆ. ಬಿಜೆಪಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೆವೆ ಎಂದು ಹೇಳಿ ಜನರಿಗೆ ಮೋಸಮಾಡಿದೆ ಉದ್ಯೋಗದಲ್ಲಿರುವ 40 ಲಕ್ಷ ಜನರ ಉದ್ಯೋಗ ಕಸಿದುಕೊಂಡಿದ್ದೆ ಅವರ ಸಾಧನೆ ಸ್ಥಳಿಯ ಶಾಸಕ ಶಿವರಾಮ ಹೆಬ್ಬಾರ ಕೆಲಸ ಮಾಡುವ 100 ಜನ ಶಾಸಕರಲ್ಲಿ 5ನೇದವರಾಗಿದ್ದಾರೆ ಎಂದರೆ ಅವರು ಜನಪರ ಎಷ್ಟು ಕಾಳಜಿ ವಹಿಸಿದ್ದಾರೆ ಎಂದರೆ ಗೊತ್ತಾಗುತ್ತದೆ ಜಿಲ್ಲಾ ವಿಕ್ಷಕ ಎ.ಎಮ್. ಪಠಾಣ ಮಾತನಾಡಿ ಸಮಬಾಳು ಸಮಪಾಲು ಸಮಹಕ್ಕು ಸೀಗುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ದೇಶಕ್ಕೆ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ತನ್ನ ತತ್ವ ಸಿದ್ದಾಂತ ಮೇಲೆ ನಡೆಯುತ್ತಿದೆ. ಬರಗಾಲದ ಪರಿಸ್ಥಿತಿಯಲ್ಲಿ ಜನರು ಜರ್ಝಿತರಾಗಿ ಸಾಲದ ಶೂಲದಿಂದ ನರಳುತ್ತಿರುವ ಸಂದರ್ಭದಲ್ಲಿ ಎಷ್ಟು ಪರಿಪರಿಯಾಗಿ ಬೇಡಿದರೂ ಕೇಂದ್ರಸರಕಾರ ಸಾಲಮನ್ನಾ ಮಾಡಲಿಲ್ಲ ಆದರೆ ಸಿದ್ದರಾಮಯ್ಯ ಸರಕಾರ ಸೋಸೈಟಿಯಲ್ಲಿರುವ ರೈತರ 50 ಸಾವಿರ ರೂ ಸಾಲವನ್ನು ಮನ್ನಾ ಮಾಡಿದರು. ಇದರಿಂದ ರೈತರ ಪರವಾಗಿ ಯಾವ ಸರಕಾರವಿದೆ ಎಂದು ಗೊತ್ತಾಗುತ್ತದೆ ಎಂದರು.

ಬ್ರಿಟಿಷರಕೂಡ ಕೈಜೊಡಿಸಿದಂತ ಪಕ್ಷಕ್ಕೆ ಇವತ್ತು ದೇಶಪ್ರೇಮ ಉಕ್ಕಿ ಹರಿಯುತ್ತಿದೆ. ಕಾಂಗ್ರೆಸ್ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಪಕ್ಷ. ದೇಶ ಅಭಿವೃದ್ದಿಯಾಗಿ ವಿಶ್ವದಲ್ಲಿ ಕೀರ್ತಿ ಪತಾಕೆ ಹಾರಿಸಬೇಕಾದರೆ ದೇಶದಲ್ಲಿ ಜಾತ್ಯಾತಿತ ಪಕ್ಷ ಅಧಿಕಾರದಲ್ಲಿ ಬಂದರೆ ಮಾತ್ರ ಎಂದರು ಬಿಜೆಪಿ ಅಧಿಕಾರಕ್ಕೆ ಬರುವಾಗ 15 ಲಕ್ಷ ರೂ ನಿಮ್ಮ ಅಕೌಂಟ್‍ಗೆ ಹಾಕುತ್ತೆವೆ ಎಂದವರು 15 ರೂಪಾಯಿನು ಹಾಕಿಲ್ಲ. ಯಡ್ಯೂರಪ್ಪ ಟಿಪ್ಪುಸುಲ್ತಾನ ಜಯಂತಿಯನ್ನು ನಾವೇ ಮೋದಲು ಪ್ರಾರಂಭಿಸಿದ್ದು ಎಂದು ಹೇಳಿದ್ದರು ಈಗ ವಿರೋಧಿಸುತ್ತಿದ್ದಾರೆ ಅವರ ಮನೋಸ್ಥಿತಿ ಏನೆಂಬುದನ್ನು ಗೊತ್ತಾಗುತ್ತದೆ.

ಕಾಂಗ್ರೆಸ್ ಹಿರಿಯಧುರಿಣ ಮಾರ್ಕೇಟಿಂಗ್ ಸೊಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ 80% ಸದೃಡವಾಗಿದೆ. ಬಿಜೆಪಿ ಯಲ್ಲಿ ಸ್ಪರ್ಧೆಮಾಡುವುರು ಎಂದು ತಿಳಿದಿಲ್ಲಾ. ಆದರೆ ಕಾಂಗ್ರೆಸ್ ನಲ್ಲಿ ಶಿವರಾಮ ಹೆಬ್ಬಾರ ಸ್ಪರ್ಧಾಳು ಅವರೇ ಗೆಲ್ಲುವುದು ಖಚಿತ ಎಂದರು
ವಿ.ಎಸ್.ನಾಯ್ಕ ಮಾತನಾಡಿ ದೀರ್ಘಅವಧಿಯವರಿಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಸ್ವತಂತ್ರ ಸಿಕ್ಕಾಗ 33 ಕೋಟಿ ಜನರಿಗೆ ಆಹಾರಧಾನ್ಯ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದ್ದಿತು. ಕಾಂಗ್ರೆಸ್ ನ ಮುಂದಾಲೋಚನೆ ಕಾರ್ಯವೈಖರಿಯಿಂದ 125 ಕೋಟಿ ಜನರಿಗೆ ಆಹಾರಧಾನ್ಯ ಉತ್ಪಾದಿಸಿ 2 ವರ್ಷಗಳ ದಾಸ್ತಾನು ಇಟ್ಟುಕೊಳ್ಳುವಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಎಂಬುದು ಕಾಂಗ್ರೆಸ್ ಎಂಬುದು ಬಿಜೆಪಿ ತಿಳಿದುಕೊಳ್ಳಲಿ ಎಂದರು.

ಕೃಷ್ಣಾ ಹಿರಳ್ಳಿ, ರಾಮಕೃಷ್ಣ ಮೂಲಿಮನಿ, ಮಾತನಾಡಿದರು ರಾಜ್ಯ ಮಹಿಳಾ ಕಾರ್ಯದರ್ಶಿ ಮಂಗಳ ನಾಯಕ ಸೇರಿದಂತೆ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.