Home Local ಇಂದಿನಿಂದ ಜಿಲ್ಲೆಯಲ್ಲಿ ದೇಶಪಾಂಡೆ ಪ್ರವಾಸ, ವಿವಿದೆಡೆ ಕಾರ್ಯಕ್ರಮ

ಇಂದಿನಿಂದ ಜಿಲ್ಲೆಯಲ್ಲಿ ದೇಶಪಾಂಡೆ ಪ್ರವಾಸ, ವಿವಿದೆಡೆ ಕಾರ್ಯಕ್ರಮ

SHARE

ಕಾರವಾರ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಇಂದಿನಿಂದ ನವ್ಹಂಬರ ೧ ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.

ಅಕ್ಟೋಬರ್ ೩೦ ರಂದು ಮದ್ಯಾಹ್ನ ೧.೩೦ಕ್ಕೆ ಹಳಿಯಾಳದ ದುರುದುಂಡೇಶ್ವರ ಮಠ ನಿವೇಶನದಲ್ಲಿ ಯಾತ್ರಿ ನಿವಾಸ ನಿರ್ಮಾಣ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ ೨.೧೫ಕ್ಕೆ ಹಳಿಯಾಳದ ಬಸವಣ ಗಲ್ಲಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ ೩ ಗಂಟೆಗೆ ಹಳಿಯಾಳದ ಗಾಂಧಿಕೇರಿ ಗಲ್ಲಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ ೪ ಗಂಟೆಗೆ ದಾಂಡೇಲಿ ಜಿ.ಟಿ.ಟಿ.ಸಿ ಆಡಳಿತ ಕಟ್ಟಡ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ ೫ ಗಂಟೆಗೆ ಕಾರ್ಮಿಕ ಭವನದ ಮತ್ತು ಕಚೇರಿ ಸಂಕೀರ್ಣ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ ೭.೩೦ಕ್ಕೆ ಹಳಿಯಾಳದಲ್ಲಿ ಸ್ನೇಹ ಮಧುರನಾದ ಹವ್ಯಾಸ ಸಂಗೀತ ಮತ್ತು ನಾಟಕ ಕಲಾವಿದರ ಸಂಘದ ವತಿಯಿಂದ ಆಯೋಜಿಸಲಾಗಿರುವ ಸಂಗೀತ ರಸ ಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಅಕ್ಟೋಬರ್ ೩೧ ರಂದು ಬೆಳಗ್ಗೆ ೯ಕ್ಕೆ ದಾಂಡೇಲಿಯ ವಿ.ಟಿ.ಯು ರಾಷ್ಟ್ರೀಯ ಕೌಶಾಲ್ಯಾಭಿವೃದ್ಧಿ ಕೇಂದ್ರಕ್ಕೆ ಭೇಟಿ ಮಾಡಿ ಪ್ರಗತಿ ಪರಿಶೀಲನೆ ಮಾಡುವರು. ಬೆಳಗ್ಗೆ ೧೦ ಗಂಟೆಗೆ ಟೋಯೋಟ ಕಂಪನಿಯ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ೧೧.೩೦ ಕ್ಕೆ ಜೋಯಿಡಾದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಯಾತ್ರಿ ನಿವಾಸದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು.ಮದ್ಯಾಹ್ನ ೨:೩೦ಕ್ಕೆ ಕಾರವಾರದಲ್ಲಿ ಸಾರ್ವಜನಿಕರ ಭೇಟಿ ಮಾಡುವರು. ಮದ್ಯಾಹ್ನ ೩ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಳಿಯಾಳ ಮತ್ತು ಜೋಯಿಡಾ ತಾಲೂಕುಗಳ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನೆ ಸಭೆ ನಡೆಸುವರು. ಸಂಜೆ ೪ಕ್ಕೆ ಕಾರವಾರ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸುವರು. ಸಂಜೆ ೫ಕ್ಕೆ ಕರಾವಳಿ ಉತ್ಸವ, ಸ್ಕೂಬಾ ಡೈವಿಂಗ ಫೆಸ್ತಿವಲ್ ಮತ್ತು ಹಾರ್ನಬಿಲ್ ಉತ್ಸವದ ಬಗ್ಗೆ ಪೂರ್ವಭಾವಿ ಸಭೆ ನಡೆಸುವರು. ಸಂಜೆ ೬ಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ಸಭೆಯಲ್ಲಿ ಭಾಗವಹಿಸುವರು.

ನವೆಂಬರ್ ೧ ರಂದು ಬೆಳಗ್ಗೆ ೮ ಗಂಟೆಗೆ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿರುವ ಕನ್ನಡ ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡುವರು. ೮.೩೦ಕ್ಕೆ ಶಿರವಾಡದಲ್ಲಿನ ಸಿ‌ಆರ್‌ಎಫ್ ಅನುದಾನದಡಿ ಕಾರವಾರ ಕೈಗಾ-ಇಳಕಲ್ ರಸ್ತೆ ಸುಧಾರಣೆ ಕಾಮಗಾರಿ ಗುದ್ದಲಿ ಪೂಜಾ ಸಮಾರಂಭದಲ್ಲಿ ಭಾಗಿಯಾಗುವಹಿಸುವರು. ಬೆಳಗ್ಗೆ ೯ ಗಂಟೆಗೆ ಕಾರವಾರ ಪೊಲೀಸ ಪರೆಡ ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಸಿಸುವರು. ೧೦:೩೦ ಕ್ಕೆ. ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅಂಗವಿಕಲರಿಗೆ ಇಂಧನ ಚಾಲಿತ ವಾಹನಗಳ ವಿತರಣೆ ಮತ್ತು ಅಂಗನವಾಡಿಗಳಿಗೆ ಆಟಿಕೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಗ್ಗೆ ೧೧ ಗಂಟೆಗೆ ಕೋಡಿಭಾಗದಲ್ಲಿ ಕಾರವಾರ ಒನ್ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.