Home Important ವಿಭಿನ್ನ ಪಾತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ ಮಾಲಾಶ್ರೀ!

ವಿಭಿನ್ನ ಪಾತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ ಮಾಲಾಶ್ರೀ!

SHARE

ಬೆಂಗಳೂರು: ನಂಜುಂಡಿ ಕಲ್ಯಾಣ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ದಶಕಗಳ ಕಾಲ ಕನ್ನಡ ಪ್ರೇಕ್ಷಕರ ಕನಸಿನ ರಾಣಿಯಾಗಿ ಮೆರೆದ ಮಾಲಾಶ್ರಿ ತಮ್ಮ ಹೊಸ ಲುಕ್ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚಿನ ಆಕೆಯ ಫೋಟೋ ಎಲ್ಲರ ಗಮನ ಸೆಳೆದಿದೆ. ಮುಂದಿನ ಚಿತ್ರಕ್ಕಾಗಿ ತೂಕ ಇಳಿಸಿಕೊಂಡು, ಉದ್ದ ಕೂದಲು ಬೆಳೆಸಿಕೊಂಡಿರುವ ಮಾಲಾಶ್ರಿ ಸಿಟಿ ಎಕ್ಸ್ ಪ್ರೆಸ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಹಲವು ವರ್ಷಗಳಿಂದ ಆ್ಯಕ್ಷನ್ ಹೀರೋಯಿನ್ ಆಗಿಯೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಮಾಲಾಶ್ರೀ ಅದಕ್ಕೆ ಬ್ರೇಕ್ ಹಾಕಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ತಮ್ಮ ಬಾಯ್ ಕಟ್ ಬಿಟ್ಟು ಉದ್ದ ಕೂದಲಿನ ಜೊತೆಗೆ ಸಾಮಾನ್ಯ ಗೃಹಿಣಿಯಂತೆ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಹಾರರ್ ಥ್ರಿಲ್ಲರಮ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಈ ಹಿಂದೆ ಇಂಥಹ ಪಾತ್ರ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಸಿನಿಮಾ ಸಂಬಂಧ ಮಾತುಕತೆಗಳು ಮುಂದುವರಿದಿದ್ದು ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ.
ಉಪ್ಪು ಹುಳಿ ಖಾರ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಹಲವು ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸಿರುವ ಮಾಲಾಶ್ರಿ ಆ ಪಾತ್ರಗಳಿಗಾಗಿ ತಮ್ಮ ದೇಹವನ್ನು ಹೊಂದಿಸಿಕೊಂಡಿದ್ದರು. 10 ಜನ ನನ್ನ ಮೇಲೆ ಆಕ್ರಮಣ ಮಾಡಿದಾಗ ಹಾಗೂ ಕಾರಿನ ಮೇಲೆ ಜಂಪ್ ಮಾಡುವಾಗಲೂ ನಾನು ಶಕ್ತಿಯುತವಾಗಿ ಕಾಣಬೇಕಿತ್ತು. ನಾನು ಅಭಿನಯಿಸುತ್ತಿದ್ದ ಪಾತ್ರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗುತ್ತಿದ್ದೆ. ಹಲವು ಸಾಹಸ ಪ್ರಧಾನ ಸಿನಿಮಾಗಳ ನಂತರ ನಾನು, ನನ್ನ ಲುಕ್ ಬದಲಾಯಿಸಿಕೊಳ್ಳಬೇಕು ಎನಿಸಿತು.

ನನ್ನ ಪಾತ್ರಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಆದರೆ ಇನ್ನೂ ಮುಂದಿನ ಸಿನಿಮಾಗಳಲ್ಲಿ ಹೆಚ್ಚು ಬುದ್ಧಿವಂತಿಕೆ ತೋರುವ ಹಾಗೂ ಸಾಮಾನ್ಯ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿದೆ. ಚೂಡಿದಾರ್ ತೊಟ್ಟ ಕಾಲೇಜು ಹುಡುಗಿ ಹಾಗೂ ಸೀರೆ ತೊಟ್ಟ ಮಹಿಳೆ ಕೂಡ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬಹುದು. ನಿಮ್ಮ ಬುದ್ಧಿ ಶಕ್ತಿ ಉಪಯೋಗಿಸಿ, ನೀವು ಫೈಟ್ ಮಾಡಬಹುದು.ನನ್ನ ಮುಂದಿನ ಸಿನಿಮಾಗಳಲ್ಲಿ ಈ ರೀತಿಯ ಪಾತ್ರವಿರುತ್ತದೆ.
ತೂಕ ಕಳೆದುತೊಳ್ಳುವುದು ಮಾತ್ರ ಮುಖ್ಯವಲ್ಲ, ಫಿಟ್ ಆಗಿ ಕೂಡ ಇರಬೇಕು, ನಾನು ಕಠಿಣವಾಗಿ ವರ್ಕೌಟ್ ಮಾಡಿದ್ದೇನೆ, ತೂಕದ ಬಗ್ಗೆ ನಾನು ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ನನ್ನ ಮುಂದಿನ ಚಿತ್ರಕ್ಕೆ ದೇಹದ ತೂಕ ಇಳಿಸಿಕೊಳ್ಳುವ ಅವಶ್ಯಕತೆಯಿತ್ತು. ಜೊತೆಗೆ ಅದನ್ನು ನಿರ್ವಹಿಸಿಕೊಂಡು ಹೋಗ ಬೇಕಾದ್ದರಿಂದ, ಯಾವುದೇ ಡಯಟ್ ಮಾಡದೇ ನಾನು ವರ್ಕೌಟ್ ಮಾಡಿದ್ದೇನೆ. ಸದಾ ವಾಕಿಂಗ್ ಮಾಡುತ್ತಿರುತ್ತೇನೆ.

ಕಳೆದ ಮೂರು ತಿಂಗಳಿಂದ ಇದು ದೈನಂದಿನ ಅಭ್ಯಾಸವಾಗಿ ಹೋಗಿದ್ದು, ತಮ್ನಲ್ಲಿ ಭಾರೀ ಬದಲಾವಣೆಯಾಗಿರುವುದು ಕಂಡು ಬಂದಿದೆ. ನನ್ನ ಮುಂದಿನ ಸಿನಿಮಾ ಮೂಲಕ ನಾನು ಬ್ರೇಕ್ ತೆಗೆದುಕೊಳ್ಳಬೇಕಿದ್ದು, ಮತ್ತು ಕನ್ನಡ ಪ್ರೇಕ್ಷಕರಿಗೆ ನನ್ನ ಕಡೆಯಿಂದ ಏನಾದರೊಂದು ಹೊಸತನ್ನು ನೀಡಬೇಕು ಎನಿಸುತ್ತಿದೆ. ಕನ್ನಡ ಪ್ರೇಕ್ಷಕರು ನನ್ನ ಹೊಸ ಅವತಾರವನ್ನು ಪ್ರೀತಿಯಿಂದ ಇಷ್ಟ ಪಡುತ್ತಾರೆ ಎಂಬ ನಂಬಿಕೆಯಿದೆ ಎಂದು ಮಾಲಾಶ್ರೀ ತಿಳಿಸಿದ್ದಾರೆ.