Home Local ಕುಮಟಾ ಕೋರ್ಟ ಆವರಣದಲ್ಲಿ ಸಾವು : ಹುಟ್ಟಿದೆ ನೂರಾರು ಅನುಮಾನ!

ಕುಮಟಾ ಕೋರ್ಟ ಆವರಣದಲ್ಲಿ ಸಾವು : ಹುಟ್ಟಿದೆ ನೂರಾರು ಅನುಮಾನ!

SHARE

ಕುಮಟಾ:ತಾಲೂಕಿನ ಕೋರ್ಟನ ಆವಾರದಲ್ಲಿ ವ್ಯಕ್ತಿ ನೋಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕುಮಟಾ ನ್ಯಾಯಾಲಯದಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದಂತ ಮೂಲತ ಹೆಗಡೆ ನಿವಾಸಿ ನಾರಾಯಣ ಹನುಮಂತ ನಾಯ್ಕ ಎನ್ನುವವರ ಶವ ಕೈ ಕಟ್ಟಿ, ನೇಣು ಹಾಕಿದ ಸ್ಥಿತಿಯಲ್ಲಿ ಕುಮಟಾ ಕೋರ್ಟನಲ್ಲಿ ಪತ್ತೆಯಾಗಿದೆ.

ಕುತ್ತಿಗೆಗೆ ನೇಣು ಬಿಗಿದಿದ್ದು ಕೈಗಳನ್ನು ಹಿಂದಕ್ಕೆ ಕಟ್ಟಲಾಗಿದೆ. ಯಾವ ರೀತಿಯಲ್ಲಿ ಇದು ಸಂಭವಿಸಿದೆ. ಇದು ಆತ್ಮಹತ್ಯೆಯೋ ಅಥವಾ ಯಾರಾದರೂ ಈ ಕೃತ್ಯ ಎಸಗಿದ್ದಾರೋ ಎಂಬ ಅನುಮಾನ ಕಾಡುತ್ತಿದೆ.

ವ್ಯಕ್ತಿಯ ಶವ ಅಲ್ಲಿರುವ ಸ್ಕೂಟಿಗೆ ತಾಗುವಂತಿದ್ದು, ಕೈಗಳನ್ನು ಹಿಂದೆ ಕಟ್ಟಲಾಗಿದೆ. ಪೋಲೀಸ್ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಾಗಿದೆ.