Home Important ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತು ನವೆಂಬರ್ ನಲ್ಲಿ ವಿಚಾರಣೆ

ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತು ನವೆಂಬರ್ ನಲ್ಲಿ ವಿಚಾರಣೆ

SHARE

ನವದೆಹಲಿ: ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತು ನವೆಂಬರ್ ಕೊನೆಯ ವಾರದಲ್ಲಿ ವಿಚಾರಣೆ ನಡೆಸಲು ಸೋಮವಾರ ತೀರ್ಮಾನಿಸಿದೆ.

ಇದಕ್ಕು ಮುನ್ನ ಮೊಬೈಲ್ ನಂಬರ್ ಆಧಾರ್ ಲಿಂಕ್ ಕಡ್ಡಾಯ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಕೆ ಸಿಕ್ರಿ ಅವರು ಪ್ರಕರಣ ಸಂಬಂಧ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

ಮೊಬೈಲ್ ಗೆ ಆಧಾರ್ ಲಿಂಕ್ ಪ್ರಶ್ಮಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವ ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಜಾರಿಗೆ ತರುವ ಕಾನೂನುಗಳನ್ನು ಒಂದು ರಾಜ್ಯ ಸರ್ಕಾರ ಹೇಗೆ ಪ್ರಶ್ನಿಸಲು ಸಾಧ್ಯ ಎಂದು ಪ್ರಶ್ನಿಸಿದೆ.

ಪಶ್ಚಿಮ ಬಂಗಾಳ ಸರ್ಕಾರಕ್ಕೂ ತನ್ನ ಅರ್ಜಿಯನ್ನು ಬದಾಲಿಯಿಸಲು ಸುಪ್ರೀಂ ಕೋರ್ಟ್ ಕಾಲವಕಾಶ ನೀಡಿದ್ದು, ಆಧಾರ್ ನಿರ್ಧಾರದ ಬಗ್ಗೆ ಅಸಮಾಧಾನವಿದ್ದರೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.