Home Local ಮುಂಡಗೋಡಿನಲ್ಲಿ ಆರೋಪಿ ಸಹಿತ ಪೋಲೀಸರ ವಶವಾಯ್ತು ಗಂಧದ ಕಟ್ಟಿಗೆ!

ಮುಂಡಗೋಡಿನಲ್ಲಿ ಆರೋಪಿ ಸಹಿತ ಪೋಲೀಸರ ವಶವಾಯ್ತು ಗಂಧದ ಕಟ್ಟಿಗೆ!

SHARE

ಮುಂಡಗೋಡ : ಆರೋಪಿ ಸಮೇತ ಸುಮಾರು 70 ಸಾವಿರ ರೂ ಮೌಲ್ಯದ ಗಂಧದ ಕಟ್ಟಿಗೆಯನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಅತ್ತಿವೇರಿ ಗ್ರಾಮದಲ್ಲಿ ನಡೆದಿದೆ.
ಬಂದಿತ ಆರೋಪಿಯನ್ನು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಅಸ್ತಿಕಟ್ಟಿ ಗ್ರಾಮದ ಸೋಮ್ಲಪ್ಪ ಲಮಾಣಿ ಎಂದು ತಿಳಿದು ಬಂದಿದೆ.

ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಒಬ್ಬ ಆರೋಪಿ ಸಮೇತ 30 ಕೆಜಿ ತೂಕದ 70 ಸಾವಿರ ರೂ ಮೌಲ್ಯದ ಗಂಧದ ಕಟ್ಟಿಗೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ಕು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೊಳ್ಳಿ ಮಾರ್ಗದರ್ಶನದಲ್ಲಿ ವನಪಾಲಕರಾದ ಬಸವರಾಜ ಪೂಜಾರ (ಇಂದೂರ), ಶಂಕರ ಬಾಗೇವಾಡಿ(ಮುಂಡಗೋಡ ಸಿಟಿ) ಆನಂದ ಪೂಜಾರ(ಗುಂಜಾವತಿ), ಫಕ್ಕಿರೇಶ ಸುಣಗಾರ(ಕ್ಯಾತ್ನಳ್ಳಿ), ಶಿವಾನಂದ ಕಡಹಟ್ಟಿ(ಕಾಮಗಾರಿ), ವನರಕ್ಷಕರಾದ ರಮೇಶ ಸಜ್ಜನ, ನಿಂಗಪ್ಪ ಕಲಾದಗಿ, ಶ್ರೀಧರ ಭಜಂತ್ರಿ, ಭೋಜು ಚೌಹಾಣ ಬಸವರಾಜ ನಾಯಕ ಸೇರಿದಂತೆ ವಾಚಮನ್ ರು ದಾಳಿಯಲ್ಲಿ ಭಾಗವಹಿಸಿದ್ದರು