Home Local ಭಟ್ಕಳ ತಾಲೂಕಾ ಪ್ರಿಂಟರ್ಸ ಅಸೋಸಿಯೇಶನ್ ಅಸ್ತಿತ್ವಕ್ಕೆ

ಭಟ್ಕಳ ತಾಲೂಕಾ ಪ್ರಿಂಟರ್ಸ ಅಸೋಸಿಯೇಶನ್ ಅಸ್ತಿತ್ವಕ್ಕೆ

SHARE

ಭಟ್ಕಳ: ಭಟ್ಕಳ ತಾಲೂಕಾ ಪ್ರಿಂಟರ‍್ಸ್ ಅಸೋಸಿಯೇಶನ್ ಅಸ್ತಿತ್ವಕ್ಕೆ ಬಂದಿದ್ದು ಪ್ರಥಮ ಅಧ್ಯಕ್ಷರಾಗಿ ಕಾಮಾಕ್ಷಿ ಪ್ರಿಂಟರ‍್ಸ್‌ನ ವಿನೋದ ಭಟ್, ಉಪಾಧ್ಯಕ್ಷರಾಗಿ ಮುರ್ಡೇಶ್ವರ ಪ್ರಿಂಟರ‍್ಸ್‌ನ ಭಾಸ್ಕರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುರ್ಡೇಶ್ವರದ ಖಾಸಾಗಿ ಹೊಟೇಲಿನಲ್ಲಿ ನಡೆದ ಸಭೆಯಲ್ಲಿ ಭಟ್ಕಳ ತಾಲೂಕಿನ ನೂತನ ಪ್ರಿಂಟರ‍್ಸ್ ನೂತನ ಅಧ್ಯಕ್ಷ ವಿನೋದ ಭಟ್ ಮಾತನಾಡಿ, ನಮ್ಮ ಸಂಘದ ಸದಸ್ಯರ ಹಿತಕಾಯುವಲ್ಲಿ ಸದಾ ಬದ್ದನಾಗಿರುವದಾಗಿ ತಿಳಿಸಿದರು. ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಮಾತನಾಡಿದರು. ಈ ಸಂದರ್ಬದಲ್ಲಿ ಮುದ್ರಣದ ವಿವಿದ ಆಯಾಮಗಳಿಗೆ ದರನಿಗದಿ ಪಡಿಸಲಾಯಿತು. ಕಾರ್ಯದರ್ಶಿಯಾಗಿ ಶಿರಾಲಿಯ ಗುರುದತ್ತ ಶಿರಾಲ ಆಯ್ಕೆ ಮಾಡಲಾಯಿತು.

ಪ್ರಸನ್ನ ಆಚಾರ್ಯ, ರಾಮಚಂದ್ರ ಕಿಣಿ, ಕುಪ್ಪಯ್ಯ ನಾಯ್ಕ, ರಾಧಾಕೃಷ್ಣ ನಾಯ್ಕ, ಉಮೇಶ ಆಚಾರ್ಯ, ಸಚಿನ್ ಮಹಾಲೆ, ದೇವಾನಂದ ಮೊಗೇರ, ವೆಂಕಟ್ರಮಣ ಬಾಗಲ್ ದಿನೇಶ ನಾಯ್ಕ ಉಪಸ್ಥಿತರಿದ್ದರು