Home Local ಗೋಕರ್ಣದಲ್ಲಿ ಅಭಯಾಕ್ಷರ ಅಭಿಯಾನಕ್ಕೆ ಚಾಲನೆ.

ಗೋಕರ್ಣದಲ್ಲಿ ಅಭಯಾಕ್ಷರ ಅಭಿಯಾನಕ್ಕೆ ಚಾಲನೆ.

SHARE

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪ ಪೂ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ಗೋಹತ್ಯೆ ನಿಷೇಧಕ್ಕಾಗಿ ಆಗ್ರಹಿಸಿ ಗೋಕರ್ಣದ – ಅಭಯಾಕ್ಷರ ಅಭಿಯಾನಕ್ಕೆ ಪ ಪೂ ಜ್ಞಾನಭಾಸ್ಕರ ಮಹಾಸ್ವಾಮಿಗಳು, ಮಹಾಸಂಸ್ಥಾನ ಸದ್ಧರ್ಮ ಪೀಠ, ಚಿತ್ರದುರ್ಗ ಇವರ ಅಮೃತಕರಕಮಲಗಳಿಂದ ಚಾಲನೆ ದೊರಕಿತು .
ವೇ ಶಿತಿಕಂಠ ಹಿರೇಭಟ್, ಹಾಗು ಉಪಾಧಿವಂತ ಮಂಡಳಿ ಸದಸ್ಯರು , ವಕೀಲರಾದ ಶ್ರೀ ಮಂಗಲಮೂರ್ತಿ ಸಭಾಹಿತ, ನಿವೃತ್ತ ಶಿಕ್ಷಕ ಶ್ರೀ ಬೀರಣ್ಣ ನಾಯಕ ಅಡಿಗೋಣ, ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು .


ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯರು , ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಗೋಸಂರಕ್ಷಣೆಯ ಆಂದೋಲನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು . ಗೋಸಂರಕ್ಷಣೆಯಿಂದ ರಾಷ್ಟ್ರಕ್ಕೆ, ವಿಶ್ವಕ್ಕೇ ಒಳಿತಾಗಲಿದೆ ಎಂದು ತಿಳಿಸಿದರು .