Home Local ಮತ್ತೆ ಉತ್ತರ ಕನ್ನಡಕ್ಕೆ ಬರ್ತಾರಾ ರಾಹುಲ್ ಗಾಂಧಿ?

ಮತ್ತೆ ಉತ್ತರ ಕನ್ನಡಕ್ಕೆ ಬರ್ತಾರಾ ರಾಹುಲ್ ಗಾಂಧಿ?

SHARE

ಕಾರವಾರ: ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಉತ್ತರಕನ್ನಡ ಜಿಲ್ಲೆಗೆ ನವೆಂಬರ್ 22ರಿಂದ 30ರ ಒಳಗೆ ಬರಲಿದ್ದಾರೆ ಎಂದು ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಮಾ ಮೊಗೇರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಟಾ ಅಥವಾ ಮುರ್ಡೇಶ್ವರಕ್ಕೆ ರಾಹುಲ್ ಗಾಂಧಿಯವರು ಬರಲಿದ್ದಾರೆ. ಆದರೆ ಸ್ಥಳ ಹಾಗೂ ದಿನಾಂಕ ಈವರೆಗೂ ನಿಗದಿಯಾಗಿಲ್ಲ. ಅವರು ಜಿಲ್ಲೆಗೆ ಆಗಮಿಸಿ ಎರಡು ಗಂಟೆಗಳ ಕಾಲ ಮೀನುಗಾರರೊಂದಿಗೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಇಂಗಿತ ವ್ಯಕ್ತಪಡಿಸಿದ್ದಾರೆ.

ಆದರೆ ರಕ್ಷಣಾ ಪಡೆಗಳು ಸುರಕ್ಷತೆಯನ್ನು ಪರಿಶೀಲಿಸಿದ ಬಳಿಕವೇ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.ಈ ವೇಳೆ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ ಸೇರಿದಂತೆ ಅನೇಕ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.