Home Important ಗಿನ್ನಿಸ್ ದಾಖಲೆ ಸೇರಿದ ಬೃಹತ್ ಖಿಚಡಿ!

ಗಿನ್ನಿಸ್ ದಾಖಲೆ ಸೇರಿದ ಬೃಹತ್ ಖಿಚಡಿ!

SHARE

ನವದೆಹಲಿ: ‘ವಿಶ್ವ ಆಹಾರ ಭಾರತ’ ಕಾರ್ಯಕ್ರಮದ ಅಂಗವಾಗಿ ಶನಿವಾರ ದೆಹಲಿಯಲ್ಲಿ ತಯಾರಿಸಿದ 918 ಕೆಜಿ ಬೃಹತ್ ಖಿಚಡಿ ಗಿನ್ನಿಸ್ ದಾಖಲೆ ಸೇರಿದೆ.
ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅವರ ನೇತೃತ್ವದಲ್ಲಿ 50 ಬಾಣಸಿಗರು ಸೇರಿ ಈ ಖಿಚಡಿ ಮಾಡಿದ್ದಾರೆ. ಶುಕ್ರವಾರವೇ ಈ ಖಿಚಡಿಗೆ ಸಿದ್ಧತೆ ಮಾಡಲಾಗಿತ್ತು ಎಂದು ಸಂಜೀವ್ ಕಪೂರ್ ಹೇಳಿದ್ದಾರೆ.

ಸುಮಾರು 1,000 ಲೀಟರ್ ಸಾಮರ್ಥ್ಯದ ಬಾಣಲೆಯಲ್ಲಿ 800 ಕೆಜಿ ಖಿಚಡಿ ಮಾಡಲಾಗಿದೆ.

ಅಕ್ಕಿ, ಸಜ್ಜೆ, ಬೇಳೆ, ತರಕಾರಿ ಮತ್ತು ಮಸಾಲೆ ಸೇರಿಸಿ ಖಿಚಡಿ ತಯಾರಾಗಿದೆ ಯೋಗ ಗುರು ಬಾಬಾ ರಾಮ ದೇವ್, ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಮೊದಲಾದವರು ಖಿಚಡಿ ತಯಾರಿಯಲ್ಲಿ ಭಾಗಿಯಾಗಿದ್ದರು.

ಭಾರತೀಯ ಉದ್ಯಮದ ಒಕ್ಕೂಟದ ಸಹಯೋಗದಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ ನವದೆಹಲಿಯಲ್ಲಿ ‘ವಿಶ್ವ ಆಹಾರ ಭಾರತ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನವೆಂಬರ್ 3ರಿಂದ 3 ದಿನಗಳ ಕಾಲ ನಡೆಯಲಿದೆ.