Home Local ಸಂಪನ್ನವಾಯ್ತು ಪ್ರತಿಬಿಂಬ -ಉತ್ತರ ಕಾರ್ಯಕ್ರಮ.

ಸಂಪನ್ನವಾಯ್ತು ಪ್ರತಿಬಿಂಬ -ಉತ್ತರ ಕಾರ್ಯಕ್ರಮ.

SHARE

ಕುಮಟಾ: ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಶ್ರೀರಾಮಚಂದ್ರಾಪುರ ಮಠದ ಸಂಘಟನೆಯ ಕುಮಟಾ ಮತ್ತು ಹೊನ್ನಾವರ ಹವ್ಯಕ ಮಂಡಲದ ಸಹಯೋಗದಲ್ಲಿ ಉತ್ತರ ಕನ್ನಡ ಪ್ರಾಂತದಲ್ಲಿ ಆಯೋಜಿಸಲಾದ ಪ್ರತಿಬಿಂಬ ಉತ್ತರ ಕಾರ್ಯಕ್ರಮ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಸಂಪನ್ನವಾಯಿತು .

ಕಾರ್ಯಕ್ರಮದಲ್ಲಿ ಹಾಜರಿದ್ದ ಅತಿಥಿ ಅಭ್ಯಾಗತರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು ನಂತರ ಅಖಿಲ ಹವ್ಯಕ ಮಹಾಸಭಾ ಬೆಂಗಳೂರಿನ ಅಧ್ಯಕ್ಷರಾದ ಡಾ ಗಿರಿಧರ ಕಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು .

ನಂತರ ಮಾತನಾಡಿದ ಅವರು ಈ ಕಾರ್ಯಕ್ರಮದ ಉದ್ದೇಶ ಹಾಗೂ ಅವುಗಳನ್ನು ಯಾಕೆ ಸಂಘಟಿಸಲಾಗಿದೆ ಎನ್ನುವುದನ್ನು ಸವಿಸ್ತಾರವಾಗಿ ವಿವರಿಸಿದರು. ಇದರ ಜೊತೆಗೆ ಉತ್ತರ ಹಾಗೂ ಪ್ರಗತಿಯ ಕುರಿತಾಗಿ ಅವರು ವಿಶ್ಲೇಷಿಸಿದರು . ಪ್ರತಿಬಿಂಬ ಹಾಗೂ ಪ್ರಗತಿಗೆ ಅನನ್ಯವಾದ ಸಂಬಂಧವಿದೆ ಹಾಗಾಗಿಯೇ ಪ್ರತಿಬಿಂಬ ಕಾರ್ಯಕ್ರಮ ಪ್ರಗತಿ ವಿದ್ಯಾಲಯದಲ್ಲಿ ಸಂಯೋಜನೆಗೊಂಡಿದೆ ಎಂದು ವಿವರಿಸಿದರು .

ನಂತರ ಮಾತನಾಡಿದ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷರು ಹಾಗೂ ನಿರ್ದೇಶಕರಾದ ಶ್ರೀ ಆರ್ ಎಂ ಹೆಗಡೆ ಬಾಳೇಸರ ಇವರು ಹವ್ಯಕರು ಇಂದು ಸಂಘಟಿತರಾಗುವ ಅವಶ್ಯಕತೆ ಇದೆ .ಸಂಘಟನೆ ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳನ್ನು ಸಂಯೋಜಿಸಲು ಅಸಾಧ್ಯ ಹಾಗಾಗಿ ನಾವೆಲ್ಲರೂ ಒಂದಾಗಿ ಇಂತಹ ಕಾರ್ಯಕ್ರಮಗಳನ್ನು ಸಂಘಟನೆ ಗೊಳಿಸಬೇಕು ಎಂದರು .

ಕಾರ್ಯಕ್ರಮದಲ್ಲಿ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀ ಸುಬ್ರಾಯ ಭಟ್ . ಅಖಿಲ ಹವ್ಯಕ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇನ್ನಿತರ ಸದಸ್ಯರು , ಮೂರೂರು ಪ್ರಗತಿ ವಿದ್ಯಾಲಯದ ಉಪಾಧ್ಯಕ್ಷರಾದ ಶ್ರೀ ವಿ.ಎಸ್ ಹೆಗಡೆ, ಪ್ರಾಂಶುಪಾಲರಾದ ಶ್ರೀ ಎಂ.ಜಿ ಭಟ್ಟ ಇದ್ದರು. ಶ್ರೀ ರವೀಂದ್ರ ಭಟ್ಟ ಸೂರಿ ನಿರೂಪಿಸಿದರೆ ಅರುಣ ಹೆಗಡೆ ಪ್ರಸ್ಥಾವಿಕವಾಗಿ ಮಾತನಾಡಿ ನಂತರ ವಂದಿಸಿದರು.

ಮಕ್ಕಳು ಮತ್ತು ಮಾತೆಯರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.