Home Local ಕುಮಟಾ ಪುರಸಭೆಯಲ್ಲಿ ಮೇಜರ್ ಸರ್ಜರಿ: ಸುಳಿವು ನೀಡಿದ ಮಧುಸೂಧನ ಶೇಟ್!

ಕುಮಟಾ ಪುರಸಭೆಯಲ್ಲಿ ಮೇಜರ್ ಸರ್ಜರಿ: ಸುಳಿವು ನೀಡಿದ ಮಧುಸೂಧನ ಶೇಟ್!

SHARE

ಸರಕಾರಿ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ಮುಟ್ಟ ಬೇಕು ಎಂದರೆ ಅದಕ್ಕೆ ಸಂಘ ಸಂಸ್ಥೆಗಳ ಕಾರ್ಯ ಮುಖ್ಯ ಎಂದು ಕುಮಟಾ ಪುರಸಭಾ ಅಧ್ಯಕ್ಷ ಮಧುಸೂಧನ ಶೇಟ್ ಹೇಳಿದ್ರು. ಅವರು ಕುಮಟಾದ ಶ್ರೀ ಶಾಂತೀಕಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನೂತನವಾಗಿ ಆಯ್ಕೆಯಾಗಿರುವ ಮಧುಸೂಧನ ಶೇಟ್ ಅವರಿಗೆ ತಾಲೂಕಾ ಯೋಜನಾಧಿಕಾರಿ ನಾರಾಯಣ ಪಾಲನ್ ಹಾಗೂ ಯೋಜನೆಯ ಮೆಲ್ವಿಚಾರಕರು,ಒಕ್ಕೂಟದ ಸದಸ್ಯರು ಸೇರಿ ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮಧುಸೂಧನ ಶೇಟ್ ನಾನೂ ಕುಮಟಾದಲ್ಲಿ ಅತಿ ಕಡಿಮೆ ಅವಧಿಯ ಅಧ್ಯಕ್ಷ ಸ್ಥಾನವನ್ನು ಅಂಲಕರಿಸಿದ್ದೇನೆ.. ಆದರೆ ಇರುವಷ್ಟು ಅವಧಿಯಲ್ಲಿ ಅನೇಕ ಕೆಲಸ ಮಾಡುವ ಗುರಿ ಹೊಂದಿದ್ದೇನೆ. ಮೊದಲಿಗೆ ಪುರಸಭೆಯಲ್ಲಿ ಮೇಜರ್ ಸರ್ಜರಿ ಮಾಡಬೇಕಾಗಿದೆ. ಕಛೇರಿಯಲ್ಲಿ ಬಡವರಿಗೆ ಕೆಲಸವಾಗಬೇಕಿದೆ. ನಂತರ ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರರ್ಣಗಳು ಮೂಲೆ ಗುಂಪಾಗಿದೆ, ಆದ್ದರಿಂದ ಪಟ್ಟಣದಲ್ಲಿ ಕ್ಯಾಮರಾ ಅಳವಡಿಸುವುದಕ್ಕೆ ಪೋಲಿಸ್ ಇಲಾಖೆಯೊಂದಿಗೆ ಚರ್ಚಿಸಿದ್ದೇನೆ, ಸ್ವಚ್ಚ ಕುಮಟಾ ಮಾಡುವ ಜೊತೆಗೆ ಒಳಚಂರಡಿ ಕಾಮಗಾರಿಯಿಂದ ಆಗಿರುವ ಕಳಪೆ ಕಾಮಗಾರಿಯನ್ನು ಸರಿ ಪಡಿಸುವ ಹಂಬಲ ಕೂಡ ಇದೆ ಎಂದರು..

ಈ ಸಭೆಯಲ್ಲಿ ಯೋಜನಾಧಿಕಾರಿ ನಾರಾಯಣ ಪಾಲನ್,ಮೇಲ್ವಿಚಾರಕಿ ರೇಖಾ, ಹಾಗೂ ಸಂಘದ ಪದಾಧಿಕಾರಿಗಳು ಇನ್ನಿತರರು ಹಾಜರಿದ್ದರು.