Home Important ಸಿಎಂ ಸಿದ್ದರಾಮಯ್ಯರಿಗೆ ಕರಾಟೆ ಪಟ್ಟು ತೋರಿಸಿದ್ದ ಮೇಯರ್ ಗೆ ಕರಾಟೆಯಲ್ಲಿ ಚಿನ್ನದ ಪದಕ

ಸಿಎಂ ಸಿದ್ದರಾಮಯ್ಯರಿಗೆ ಕರಾಟೆ ಪಟ್ಟು ತೋರಿಸಿದ್ದ ಮೇಯರ್ ಗೆ ಕರಾಟೆಯಲ್ಲಿ ಚಿನ್ನದ ಪದಕ

SHARE

ಮಂಗಳೂರು: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯರಿಗೆ ಕರಾಟೆ ಪಟ್ಟು ತೋರಿಸಿದ್ದ ಮೇಯರ್ ಈಗ ಕರಾಟೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ ಮಂಗಳೂರು ಡೋಜೋ ವತಿಯಿಂದ ನಡೆದ ಇಂಡಿಯನ್‌ ಕರಾಟೆ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌ ಪಂದ್ಯಾಟದಲ್ಲಿ ಮೇಯರ್‌ ಕವಿತಾ ಸನಿಲ್‌ ಸ್ಪರ್ಧಿಸಿದ್ದರು. 65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲ್ಯಾಕ್‌ ಬೆಲ್ಟ್ ವಿಭಾಗದಲ್ಲಿ ಚಿನ್ನದ ಪದಕವನ್ನು ಕವಿತಾ ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್‌ ವಿರುದ್ಧ 7-3 ಅಂಕಗಳಿಂದ ಕವಿತಾ ಜಯಗಳಿಸಿದರು. ನಿಶಾ ನಾಯಕ್‌ ಅವರು ಬೆಳ್ಳಿ ಹಾಗೂ ಪೃಥ್ವಿ ಮತ್ತು ಕಾವ್ಯಾ ಕಂಚಿನ ಪದಕ ಪಡೆದುಕೊಂಡರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಕವಿತಾ ಸನಿಲ್‌ ತಮ್ಮ ಎದುರಾಳಿ ಕಾವ್ಯಾ ಅವರನ್ನು 8-0 ಅಂಕಗಳಿಂದ ಸೋಲಿಸಿದರು. 9 ವರ್ಷದ ಬಳಿಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಮೂಲಕ ಕರಾಟೆಗೆ ಮರಳಿದ್ದು ಪ್ರಥಮ ಸ್ಪರ್ಧೆಯಲ್ಲೇ ಚಿನ್ನ ಗೆದ್ದಿರುವುದು ಸಂತಸ ತಂದಿದೆ ಎಂದು ಕವಿತಾ ಸನಿಲ್‌ ಹೇಳಿದ್ದಾರೆ.