Home Important ಯುವಕನ ಪ್ಯಾಂಟ್’ನಲ್ಲಿದ್ದ ರೆಡ್ ಮಿ ಎಂ ಐ ಫೋನ್ ಬ್ಲಾಸ್ಟ್!

ಯುವಕನ ಪ್ಯಾಂಟ್’ನಲ್ಲಿದ್ದ ರೆಡ್ ಮಿ ಎಂ ಐ ಫೋನ್ ಬ್ಲಾಸ್ಟ್!

SHARE

ಗಂಗಾವತಿ: ಯುವಕನ ಪ್ಯಾಂಟ್’ನಲ್ಲಿದ್ದ ರೆಡ್ ಮಿ ಎಂ ಐ ಫೋನ್ ಬ್ಲಾಸ್ಟ್ ಆಗಿ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ಹನುಮೇಶ ಎಂಬ ಯುವಕನ ಫೋನ್ ಬ್ಲಾಸ್ಟ್ ಆಗಿದೆ, ಏಕಾಏಕಿ ಮೊಬೈಲ್ ಬ್ಲಾಸ್ಟ್ ಆಗಿ ಪ್ಯಾಂಟ್’ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಯುವಕನ ತೊಡೆಗೆ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮೂಡಿದೆ.

ರಾಜ್ಯದಲ್ಲಿ ರೆಡ್ ಮಿ ಮೊಬೈಲ್ ಪೋನ್ ಬ್ಲಾಸ್ಟ್ ಆದ ನಾಲ್ಕನೇ ಪ್ರಕರಣ ಇದಾಗಿದ್ದು, ಈ ಹಿಂದೆ ತುಮಕೂರು, ಮಂಡ್ಯದಲ್ಲಿ ಮೊಬೈಲ್ ಶಾಪ್’ಗಳಲ್ಲಿ ರೆಡ್ ಮಿ ಮೊಬೈಲ್ ಬ್ಲಾಸ್ಟ್ ಆಗಿತ್ತು. ದೋಷ ಪೂರಿತ ಬ್ಯಾಟರಿಯಿಂದಾಗಿ ರೆಡ್ ಮಿ ಮೊಬೈಲ್ ಸ್ಪೋಟಗೊಳ್ಳುತ್ತಿರುವ ಪ್ರಕರಣ ಹೆಚ್ಚಿದೆ.