Home Health ನಿಶ್ಚಿಂತೆಯಿಂದ ನಿಮ್ಮ ಫಿಟ್‌ನೆಸ್‌ ಕಾಯಕವನ್ನು ಮುಂದುವರಿಸಬಹುದು!

ನಿಶ್ಚಿಂತೆಯಿಂದ ನಿಮ್ಮ ಫಿಟ್‌ನೆಸ್‌ ಕಾಯಕವನ್ನು ಮುಂದುವರಿಸಬಹುದು!

SHARE

ಆರೋಗ್ಯವಂತರಾಗಿರಬೇಕು, ಉತ್ತಮವಾದ ಅಂಗ‌ಸೌಷ್ಟವ ಹೊಂದಿರಬೇಕು ಎಂಬುದು ಎಲ್ಲರ ಬಯಕೆ. ಅದಕ್ಕಾಗಿಯೇ ಕೆಲವರು ಮಾಡಬಾರದ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇರುತ್ತಾರೆ. ಆದರೆ ಕ್ರಮಬದ್ಧವಾದ ಡಯಟ್‌ ಮಾಡದೆ ಕೆಲವು ತಪ್ಪು ಮಾಡುವುದು ಇದೆ. ಅಂಥ ಕೆಲವು ತಪ್ಪುಗಳಾವುವು ಎಂಬುದನ್ನು ತಿಳಿದುಕೊಂಡು ತಿರುಗಿ ಆ ತಪ್ಪುಗಳನ್ನು ಮಾಡದೆ ಹೋದರೆ, ನೀವು ನಿಶ್ಚಿಂತೆಯಿಂದ ನಿಮ್ಮ ಫಿಟ್‌ನೆಸ್‌ ಕಾಯಕವನ್ನು ಮುಂದುವರಿ ಸಬಹುದು.

ಪೋಷಕಾಂಶಗಳ ಬಗ್ಗೆ ಗಮನ ಕೊಡದಿರುವುದು

ತೂಕ ಕಡಿಮೆಯಾಗಬೇಕು, ಆದರೆ ಫಿಟ್‌ನೆಸ್‌ ಬೇಕು ಎಂದು ಬಯಸುವುದಾದರೆ ಪೋಷಕಾಂಶಗಳತ್ತ ಗಮನ ಕೊಡಿ. ವ್ಯಾಯಾಮ ಮಾಡಿ, ಅಧಿಕ ಕ್ಯಾಲೋರಿ ಇರುವ ಆಹಾರಗಳನ್ನು ತಿಂದರೆ ದೇಹದ ತೂಕ ಕಮ್ಮಿ ಮಾಡಲು ಸಾಧ್ಯವಿಲ್ಲ. ವ್ಯಾಯಾಮ ಮಾಡಿ, ಸ್ವಲ್ಪವೂ ಕ್ಯಾಲೋರಿ ತೆಗೆದುಕೊಳ್ಳದಿದ್ದರೆ ದೇಹ ಸೊರಗುವುದು. ಅಲ್ಲದೆ, ಕ್ಯಾಲೋರಿ ಇರುವ ಆಹಾರಗಳನ್ನು ಯಾವ ಹೊತ್ತಿನಲ್ಲಿ ತೆಗೆದುಕೊಳ್ಳಬೇಕು ಅನ್ನುವುದನ್ನು ಕೂಡ ತಿಳಿದುಕೊಳ್ಳುವುದು ಒಳ್ಳೆಯದು.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ಬೇಗನೆ ದೇಹದಲ್ಲಿರುವ ಕ್ಯಾಲೋರಿ ಕರಗುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ತುಂಬಾ ಹೊತ್ತು ವ್ಯಾಯಾಮ ಮಾಡಲು ಶಕ್ತಿ ಇರುವುದಿಲ್ಲ. ಆದ್ದರಿಂದ ವ್ಯಾಯಾಮಕ್ಕೆ ಮೊದಲು ಒಂದು ಗ್ಲಾಸ್‌ ನೀರು ಅಥವಾ ಜ್ಯೂಸ್‌ ಕುಡಿದು ಬಳಿಕ ವ್ಯಾಯಾಮ ಮಾಡುವುದು ಒಳ್ಳೆಯದು.

ವ್ಯಾಯಾಮದ ಬಳಿಕ ದೇಹದಲ್ಲಿ ಶಕ್ತಿ ಇರುವಂತೆ ನೋಡಿಕೊಳ್ಳಬೇಕು ವ್ಯಾಯಾಮ ಮಾಡಿದ ಬಳಿಕ ದೇಹಕ್ಕೆ ಶಕ್ತಿ ತುಂಬುವ ಆಹಾರಗಳನ್ನು ತಿನ್ನಿ. ಒಂದು ಅಥವಾ ಎರಡು ಹೊತ್ತು ಆಹಾರ ತಿನ್ನದಿರುವುದು ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ ದೇಹದ ಆರೋಗ್ಯ ಹಾಳಾಗುವುದು. ಆದ್ದರಿಂದ ಆಹಾರ ತಿನ್ನದೆ ಸಣ್ಣಗಾಗುವ ಸಾಹಸಕ್ಕೆ ಕೈಹಾಕಬೇಡಿ. ದಿನದಲ್ಲಿ 4-5 ಬಾರಿ ತಿನ್ನಿ, ಆದರೆ ಸ್ವಲ್ಪ ಸ್ವಲ್ಪ ತಿನ್ನಿ.

ಭಾರ ಎತ್ತುವಾಗ ಎಚ್ಚರ
ಫಿಟ್‌ನೆಸ್‌ಗಾಗಿ ಭಾರ ಎತ್ತುವ ವ್ಯಾಯಾಮ ಮಾಡುವಾಗ ಮೂಳೆಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಭಾರ ಎತ್ತುವ ವ್ಯಾಯಾಮವನ್ನು ತರಬೇತುದಾರರ ಮಾರ್ಗದರ್ಶನದಲ್ಲಿ ಮಾಡಿ. ಅತಿ ಕಡಿಮೆ ಭಾರ ಎತ್ತುವುದು ಅಂದರೆ ಹೆಚ್ಚು ಭಾರ ಎತ್ತಿದರೆ ಮೂಳೆ ಮುರಿಯಬಹುದೆಂದು ಕೆಲವರು ಅತಿ ಕಡಿಮೆ ಭಾರವಿರುವ ಸಾಧನಗಳಿಂದ ವ್ಯಾಯಾಮ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಅನ್ನುವುದು ನೆನಪಿರಲಿ.

ನಿಮ್ಮ ವ್ಯಾಯಾಮವನ್ನು ಯಾವ ಅಂಶವೂ ಹಾಳು ಮಾಡದಿರಲಿ
ವ್ಯಾಯಾಮ ಮೈ ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಆರೋಗ್ಯವನ್ನು ವೃದ್ಧಿಸುತ್ತದೆ. ಆದ್ದರಿಂದ ನಿಮ್ಮ ವ್ಯಾಯಾಮ ಮಾಡುವುದನ್ನು ಒಂದು ಕಷ್ಟದ ಕೆಲಸವೆಂದು ಭಾವಿಸದೆ ಅದು ನಿಮ್ಮ ಆಸಕ್ತಿಯ ವಿಷಯವನ್ನಾಗಿ ತೆಗೆದುಕೊಂಡರೆ ವ್ಯಾಯಾಮವನ್ನು ತಪ್ಪಿಸದೇ ನಿಯಮಿತವಾಗಿ ಮಾಡುವಿರಿ.