Home Local ಸಹಾಯಹಸ್ತ ಚಾಚಿದ ನಾಗರಾಜ ನಾಯಕ ತೊರ್ಕೆ.

ಸಹಾಯಹಸ್ತ ಚಾಚಿದ ನಾಗರಾಜ ನಾಯಕ ತೊರ್ಕೆ.

SHARE

ಹೊನ್ನಾವರ :ಹೊಸಾಕುಳಿಯ ಮಕ್ಕಿಗದ್ದೆಯ ಸುಬ್ರಾಯ ಗೌಡ ಅವರ ಮನೆಗೆ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಸುಟ್ಟುಹೋಗಿದ್ದು ಅನೇಕ ಗೃಹ ಸಾಮಗ್ರಿಗಳೂ ಕೂಡಾ ಸುಟ್ಟು ಭಸ್ಮವಾಗಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಸಂಕಷ್ಟದಲ್ಲಿದ್ದ ಸುಬ್ರಾಯ ಗೌಡ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದರೊಂದಿಗೆ ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಸುಬ್ರಾಯ ಗೌಡ ಅವರು ನೆರವಿನ ಹಸ್ತ ಚಾಚಿದ ನಾಗರಾಜ ನಾಯಕ ತೊರ್ಕೆ ಅವರಿಗೆ ತಮ್ಮ ಕಣ್ಣಿನಲ್ಲೇ ಭಾವನಾತ್ಮಕವಾಗಿ ಧನ್ಯವಾದ ತಿಳಿಸಿ ಕೃತಜ್ಞತೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಎನ್. ಎಸ್. ಹೆಗಡೆ, ಸಂದೇಶ ಶೆಟ್ಟಿ ಸೇರಿದಂತೆ ಅನೇಕ ಹಿರಿಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.