Home Article “ಗುರುವಿಗೆ ವಂದನೆ ಮೊದಲು ನಂತರ ಗಣಪತಿಗೆ”

“ಗುರುವಿಗೆ ವಂದನೆ ಮೊದಲು ನಂತರ ಗಣಪತಿಗೆ”

SHARE

“ಗುರುವಿಗೆ ವಂದನೆ ಮೊದಲು ನಂತರ ಗಣಪತಿಗೆ”…… ಹೀಗೆಂಬ ಕಬೀರ ವಾಣಿ ಸಹಜವಾಗಿಯೇ ನೆನಪಿಗೆ ಬರುತ್ತಿದೆ.ಕಬೀರರು ಇದೇಕೆ ಹೀಗೆ ಉದ್ಗರಿಸಿರಬಹುದು ಎಂಬುದರ ಆ ಕಲ್ಪನೆ ಎಲ್ಲರಿಗೂ ಇದೆ.ದೇವರನ್ನು ತೋರಿಸುವ ಗುರು ದೇವರಿಗಿಂತ ಮೊದಲು ಎಂಬುದು ಕಬೀರೊಕ್ತಿಯ ಆಂತರ್ಯ. ಆದರೆ ನಮ್ಮ ಪಾಲಿನ ಭಾಗ್ಯ ನೋಡಿ ನಮಗೆ ದೇವರನ್ನು ತೋರಿಸುವ ಗುರುವೂ ನಿಜವಾಗಿಯೂ ದೇವರೇ ಆಗಿದ್ದಾರೆ. ಇದೇನು ಅತಿಷಯವಾಗಿ ಬರೆಯುತ್ತಿದ್ದಾನೆ ಎಂದು ತಿಳಿಯದಿರಿ ಒಮ್ಮೆ ನಾನು ಹೇಳುವ ವಿಷಯವನ್ನು ಮನಸ್ಸಿನಲ್ಲಿ ಯೋಚಿಸಿ.ನೀವು ಕಂಡಂತೆ ನಮ್ಮ ಸಂಸ್ಥಾನವನ್ನು ಸ್ಮರಿಸಿ ಮತ್ತು ಈ ಕುರಿತಾಗಿ ನಿಮ್ಮ ಮನಸ್ಸು ಏನೆನ್ನುತ್ತೆ ಎಂಬುದನ್ನು ತಿಳಿಯಿರಿ.ಮನದ ಮಾತೇ ಸತ್ಯ ಅದನ್ನು ಒಪ್ಪಿ ಅಂದರೆ ಗೂರು ಪೀಠವನ್ನು ಗುರುವನ್ನು ಸಹಜವಾಗಿ ಒಪ್ಪುತ್ತೀರಿ.ಒಪ್ಪಿದ್ದೀರಿ ಕೂಡಾ..

ದೇವರ ಪೂರ್ವ ಪರಿಕಲ್ಪನೆ ನಿಮಗಿದೆ ಎಂದಾದರೆ ಶ್ರೀ ರಾಮ ಹುಟ್ಟಿದ್ದು ಮೂಲದಲ್ಲಿ ಶ್ರೀಮನ್ನಾರಾಯಣನ ಕಲ್ಪನೆಯಲ್ಲಿ ಏಕೆಂದರೆ ಅದು ದಶಾವತಾರದ ರೂಪ. ಶ್ರೀ ಸಂಸ್ಥಾನವನ್ನವಲೋಕಿಸಿದರೆ ಅದು ಶಂಕರರ ಪ್ರತಿರೂಪ.ನಾನು ತಿಳಿದ ಮಟ್ಟಿಗೆ ಶ್ರೀರಾಮ ಇಕ್ಷ್ವಾಕು ಪರಂಪರೆಯ ಮೂವತ್ತಾರನೇಯ ಅಧಿಪತಿ.ಶ್ರೀ ಸಂಸ್ಥಾನ ನಮ್ಮ ಗುರು ಪರಂಪರೆಯ ಮೂವತ್ತಾರನೇ ಪೀಠಾಧಿಪತಿ. ರಾಮ ಪಟ್ಟವೇರುವ ಕ್ಷಣ ಮೊದಲು ಅವನಿಗೂ ಅನೇಕಾನೇಕ ಪರೀಕ್ಷೆಗಳು ಎದುರಾಗಿದ್ದವು.ಶ್ರೀಗಳೂ ಎಲ್ಲ ರೀತಿಯ ಪರೀಕ್ಷೆಗಳನ್ನು ಎದುರಿಸಿಯೇ ಪೀಠಕ್ಕೆ ಬಂದಿದ್ದು ಎಂಬುದನ್ನು ನಾವು ಕೇಳಿದ್ದೇವೆ.ವನವಾಸ ಮುಗಿಸಿ ಬಂದು ಎಲ್ಲ ಪ್ರಜೆಗಳನ್ನೂ ಸೇರಿಸಿ ರಾಮ ರಾಜ್ಯಭಾರ ಮಾಡಿದ . ಪೀಠಕ್ಕೆ ಬಂದು ಹವ್ಯಕಸಮಾಜ ಹಾಗೂ ಇನ್ನುಳಿದ ಸಮಾಜವನ್ನೂ ಸಂಘಟಿಸಿದ ಶ್ರೀ ರಾಘವ.ರಾಮನ ಬರುವಿಕೆಗಾಗಿ ಆತನ ಇರುವಿಕೆಗಾಗಿ ಕೋಟ್ಯಾನು ಕೋಟಿ ಜನ ಹಂಬಲಿಸಿದ್ದರು .ರಾಮನ ಸುತ್ತ ಪ್ರಜೆಗಳಿದ್ದರು. ಶ್ರೀ ಸಂಸ್ಥಾನದ ಬರುವಿಕೆಗೆ ಕಾಯುವ ಹಾಗೂ ಅವರ ಜೊತೆಗಿರುವ ಶೀಷ್ಯ ಸಮೂಹ ಅವರಲ್ಲಿಯೇ ರಾಮನನ್ನು ಕಾಣುತ್ತಿದೆ.ರಾಮನ ಮಾತು ಕೃತಿಯಿಂದ ರಾಜ್ಯ ರಾಮ ರಾಜ್ಯವಾಯಿತು.ಶ್ರೀ ಸಂಸ್ಥಾನದ ಕಾರ್ಯ,ಪ್ರವಚನಗಳಿಂದ ಈ ಜಗ ಮತ್ತೆ ಪುನ: ರಾಮನ್ನೇ ಕಂಡಿತು.ರಾಮ ಸಕಲ ಶಾಸ್ತ್ರ ಪ್ರವೀಣ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ.ನಮ್ಮ ಗುರುಗಳೂ ವೇದ,ಉಪನಿಷತ್, ತರ್ಕ,ವೇದಾಂತ, ಜೋತಿಷ್ಯ,ಪುರಾಣೇತಿಹಾಸ,ಧರ್ಮಶಾಸ್ತ್ರ ಮುಂತಾದ ವಿಷಯಗಳ ಪಾಂಡಿತ್ಯ ಉಳ್ಳವರು.ದೈವತ್ವ ಇರುವುದು ಸಾತ್ವಿಕ ಶಕ್ತಿಯಲ್ಲಿ .ನಮ್ಮ ಗುರುವರೇಣ್ಯರು ಸಾತ್ವಿಕತೆಯ ಮೂಲಕವೇ ಜಗತ್ತಿಗೆ ಮಠವನ್ನು ಪರಿಚಯಿಸಿದ್ದು.

ಇದೆಲ್ಲವೂ ನಿಮಗೆ ಹೆಚ್ಚೆನಿಸಿದರೆ ಈಗ ಕೇಳಿ. ಚಿಕ್ಕ ಮಗುವಿಗೆ ದೇವರನ್ನು ಪರಿಚಯಿಸುವಾಗ ಶಲಾರೂಪದಲ್ಲಿ ಇರುವ ಅಂತ:ಶ್ರೋತವಾದ ದೇವರನ್ನು ತೋರಿಸಿ. ನೋಡು ಇದು ದೇವರು ಎಂದು ಪರಿಚಯಿಸುವುದುಂಟು.ಮಳೆ ಗಾಳಿ ಬಿಸಿಲು ಏನೇ ಬಂದರೂ ಅಚಲವಾಗಿರುವ ಆ ಮೂರ್ತಿಯೇ ನಿಜವಾಗಿ ದೇವರು. ನಮ್ಮ ಸಂಸ್ಥಾನವೂ ಹಾಗೆಯೇ. ಕಾರುಣ್ಯ ಮೂರ್ತಿಯಾದ ನಮ್ಮ ಗುರುಗಳ ವಿರುದ್ದ ಅದೆಷ್ಟೋ ವರ್ಷಗಳ ಹಗೆಯ ಅಗ್ನಿಕಾರುತ್ತಿದ್ದ ವಿರೋಧಿಗಳು ಆರೋಪದ ರೂಪದಲ್ಲಿ ಹೊರಬಂದರೂ,ಸುಳ್ಳು ವದಂತಿಗಳನ್ನು ಹಬ್ಬಿಸಿದರೂ, ಅಪನಾನದ ಪ್ರಯತ್ನ ಮಾಡಿದರೂ ಒಂದು ದಿನವೂ ಕಳವಳಿಸದೇ ಸತ್ಯದ ದಾರಿಯಲ್ಲಿ ನಾವಿದ್ದೇವೆ ಎನ್ನುತ್ತ ಅಚಲವಾಗಿ ನಿಂತ ಈ ಮೂರ್ತಿಯೂ ತ್ರಿಮೂರ್ತಿ ಸ್ವರೂಪವೇ ಅಲ್ಲವೇ….???

ಕಲ್ಲು ನಾಗರಿಗೆ ಹಾಲನೆರೆವರಯ್ಯ ದಿಟದಿ ನಾಗರ ಕಂಡರೆ ಕಲ್ಲನೆಸೆಯುವರಯ್ಯ ಎಂಬ ಮಾತು ಸತ್ಯವಾಗಿದ್ದು ಈಗಲೇ ಎಂದೆನಿಸುತ್ತೆ.ದೇವರ ಹೆಸರು ಹೇಳಿ ಪೂಜಿಸುವ ನಾವು ನಡೆದಾಡುವ ಶ್ರೀ ಸಂಸ್ಥಾನದ ದೈವತ್ವವನ್ನು ಪ್ರಾಮಾಣಿಕವಾಗಿ ಅರಿಯುವುದು ಯಾವಾಗ?? ಗುರುವೆ ತಂದೆ,ಗುರುವೆ ತಾಯಿ,ಗುರುವೆ ದೈವದಾತಾರ……ನಮ್ಮ ಗುರುವೇ ದೇವಸ್ವರೂಪ ಎಂದು ಅರಿಯೋಣ.
ಹರೇ ರಾಮ

ನಿಮ್ಮೆಲ್ಲರ ಮನದ ಉತ್ತರದ ನಿರೀಕ್ಷೆಯಲ್ಲಿ.. ಗುರುವಿನ ಚರಣ ಸೇವಕ
ಗಣೇಶ ಜೋಶಿ.ಸಂಕೊಳ್ಳಿ