Home Special ಸೌರ ಮಂಡಲದಲ್ಲಿದೆ ಒಂಬತ್ತನೇ ಗ್ರಹ!

ಸೌರ ಮಂಡಲದಲ್ಲಿದೆ ಒಂಬತ್ತನೇ ಗ್ರಹ!

SHARE

ವಾಷಿಂಗ್ ಟನ್: ಸೌರ ಮಂಡಲದಲ್ಲಿ 9 ನೇ ಗ್ರಹದ ಅಸ್ತಿತ್ವ ಇದೆ ಎಂದು ನಾಸಾ ಹೇಳಿದೆ.

ಭೂಮಿಯ ಗಾತ್ರಕ್ಕಿಂತ 10 ಪಟ್ಟು ಹೆಚ್ಚಿದ್ದು, ನೆಪ್ಚೂನ್ ಗಿಂತ 20 ಪಟ್ಟು ಸೂರ್ಯನಿಂದ ದೂರ ಇರುವ ಗ್ರಹ ಇದೆ ಎಂದು ನಾಸಾ ಹೇಳಿದೆ. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳವಿಜ್ಞಾನಿಯಾಗಿರುವ ಕಾನ್ಸ್ಟಾಂಟಿನ್ ಬ್ಯಾಟಿಗಿನ್ 9 ನೇ ಗ್ರಹದ ಅಸ್ತಿತ್ವವನ್ನು ಹುಡುಕುವಾಗ ನಿಗೂಢ ಜಗತ್ತು ಅಸ್ತಿತ್ವದಲ್ಲಿದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದ್ದಾರೆ.

ಸೌರ ಮಂಡಲದಲ್ಲಿ 9 ನೇ ಗ್ರಹ ಅಸ್ತಿತ್ವದಲ್ಲಿದೆ, ಇದನ್ನು ಪುಷ್ಟೀಕರಿಸುವ ಹಲವು ಸಾಕ್ಷ್ಯಗಳು ಸಿಕ್ಕಿವೆ, ಒಂದು ವೇಳೆ 9 ನೇ ಗ್ರಹ ಇಲ್ಲ ಎಂದು ವಾದಿಸುವುದಾದರೆ ನೀವು ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತಲೂ ಹೆಚ್ಚು ಸೃಷ್ಟಿಸಿದಂತಾಗುತ್ತದೆ ಎಂದು ನಾಸಾ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.