Home Local ಪಾದಚಾರಿಗೆ ಲಾರಿ ಡಿಕ್ಕಿ :ಓರ್ವ ಸಾವು

ಪಾದಚಾರಿಗೆ ಲಾರಿ ಡಿಕ್ಕಿ :ಓರ್ವ ಸಾವು

SHARE

ಪಾದಚಾರಿಗೆ ಲಾರಿ ಡಿಕ್ಕಿ ಹೊಡಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಮಟಾದ ಕರ್ಕಿ ಬಳಿ ನಡೆದಿದೆ.

ಅಣ್ಣಪ್ಪ ವಿನಾಯಕ್ ಶೇಟ್ ಮೃತ ದುರ್ದೈವಿಯಾಗಿದ್ದು ಈತ ಹೋಸಾಡ ನಿವಾಸಿ ಎಂದು ತಿಳಿದುಬಂದಿದೆ. ಕುಂದಾಪುರದಿಂದ ಕಾರವಾರದ ಕಡೆಗೆ ಹೋಗುತ್ತಿದ್ದ Ka 20 d 2707 ನಂಬರಿನ ಲಾರಿಯಿಂದ ಈ ಅಪಘಾತ ನಡೆದಿದೆ.

ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದೆ ಈ ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಅಪಘಾತ ‌ನಡೆದ ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರು ದುರಾದೃಷ್ಟ ವಷಾತ್ ಯಾವುದೇ ಪ್ರಯೋಜನ ವಾಗಲಿಲ್ಲ. ಈಗ ಸ್ಥಳಕ್ಕೆ ಪೋಲಿಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.