Home Local ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆಮಾಡಿದ ನಾಗರಾಜ ನಾಯಕ ತೊರ್ಕೆ

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆಮಾಡಿದ ನಾಗರಾಜ ನಾಯಕ ತೊರ್ಕೆ

SHARE

ಹೊನ್ನಾವರ : 2017-18 ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕಡತೋಕದ ಜನತಾ ವಿದ್ಯಾಲಯ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಸುವರ್ಣಾ ಕೆ. ಗೌಡ–ತ್ರಿವಿಧ ಜಿಗಿತ, ಬೇಬಿ ಜಿ. ಗೌಡ-ಅಡೆ ತಡೆ ಓಟ, ನಾಗಶ್ರೀ ವಿ. ಗೌಡ-ಅಡೆತಡೆ ಓಟ, ಮಂಜುನಾಥ ಎಸ್. ಗೌಡ- 4*400 ರಿಲೇ, ಶ್ರೀಕಾಂತ ಎಂ. ಗೌಡ-4*400 ರಿಲೇ, ಅನಿಲ ಆಯ್. ಅಡಿಗುಂಡಿ– 4*400 ರಿಲೇ, ಮಣಿಕಂಠ ಎನ್. ಪಟಗಾರ- 4*400 ರಿಲೇ ಮತ್ತು ಅಡೆ ತಡೆ ಓಟದಲ್ಲಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪ್ರೇಮಿಯಾಗಿರುವ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ನೈತಿಕ ಬೆಂಬಲ ಸೂಚಿಸುವುದರೊಂದಿಗೆ ಅವರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾಪಟುಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಸಮವಸ್ತ್ರಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

ಇವರ ಈ ಸಾಮಾಜಿಕ ಕಳಕಳಿಯನ್ನು ಶಾಲಾ ಉಪನ್ಯಾಸಕರು ಹಾಗೂ ಊರ ನಾಗರಿಕರು ಶ್ಲಾಘಿಸಿ ನಾಗರಾಜ ನಾಯಕ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.