Home Uncategorized ಶಾಸಕರಿಗೆ ಮನವಿ ಸಲ್ಲಿಸಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕುಮಟಾದ ಸದಸ್ಯರು.

ಶಾಸಕರಿಗೆ ಮನವಿ ಸಲ್ಲಿಸಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕುಮಟಾದ ಸದಸ್ಯರು.

SHARE

ಕುಮಟಾ :ಕೆಪಿಎಂಇ ಕಾಯ್ದೆಯ ತಿದ್ದುಪಡಿಗಳಿಗಾಗಿ ರಚಿಸಿದ್ದ ಜಸ್ಟಿಸ್ ವಿಕ್ರಂಜಿತ್ ಸೇನ್ ಸಮಿತಿಯ ವರದಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಲು ಕೋರಿಕೆಯನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕುಮಟಾದ ಪ್ರಮುಖರು ಶಾಸಕರಿಗೆ ವಿನಂತಿಸಿದರು. ಕುಮಟಾ ಮತ್ತು ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಶ್ರೀಮತಿ ಶಾರದಾ ಶೆಟ್ಟಿ ಅವರಿಗೆ ಅವರ ಸ್ವ ಗ್ರಹದಲ್ಲಿ ಮನವಿಯನ್ನು ಸಲ್ಲಿಸಿದರು .

ಈಗಾಗಲೇ ಭಾರತೀಯ ವೈದ್ಯಕೀಯ ಸಂಘ ಹತ್ತು ಹಲವು ಬಾರಿ ಸರ್ಕಾರ ಜಾರಿಗೆ ತರಲು ಹೊರಟಿರುವ ಕೆಪಿಎಂಇ ಕಾಯ್ದೆಯ ತಿದ್ದುಪಡಿಗಳಿಂದ ಆಗುವ ಗಂಭೀರ ಪರಿಣಾಮಗಳನ್ನು ತಮಗೆ ಹಾಗೂ ಆರೋಗ್ಯ ಸಚಿವರಿಗೆ ಹಾಗೂ ಜಂಟಿ ಸದನ ಸಮಿತಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತು ಆದ್ರೂ ಕೂಡ ದುರಾದೃಷ್ಟ ವಶಾತ್ ಆಗುವ ಅನಾಹುತಗಳ ಬಗ್ಗೆ ಜಸ್ಟಿಸ್ ವಿಕ್ರಂಜಿತ್ ಸೇನ್ ಅವರ ಸಮಿತಿ ಮುಂದೆ ಭಾರತೀಯ ವೈದ್ಯಕೀಯ ಸಂಘ ಮಂಡನೆ ಮಾಡಿದಾಗ ಮಾನ್ಯ ನ್ಯಾಯಾಧೀಶರು ಸರಿ ಎಂದು ಪರಿಗಣಿಸಿ ಕೈಬಿಟ್ಟಿದ್ದರು. ಆದರೂ ಮಾನ್ಯ ಆರೋಗ್ಯ ಸಚಿವರು ಸದನ ಸಮಿತಿಯ ವರದಿಯನ್ನು ಕಡೆಗಣಿಸಿ ತಮಗೆ ಬೇಕಾದ ಅಂಶಗಳನ್ನು ಜಾರಿಗೆ ತರಲು ತೀರ್ಮಾನಿಸಿದ್ದಾರೆ. ಇದು ಪೂರ್ವಗ್ರಹ ಪೀಡಿತವಾಗಿದ್ದು ಆಸ್ಪತ್ರೆಗಳ ಮೇಲೆ ವೈದ್ಯರ ಮೇಲೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಮತ್ತು ಬಹುಮುಖ್ಯವಾಗಿ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಆದ್ದರಿಂದ ಈ ಅಂಶಗಳನ್ನು ಕಾಯ್ದೆಯ ತಿದ್ದುಪಡಿಗಳಿಂದ ಕೈಬಿಡಲು ಕೋರುತ್ತೇವೆ ಎಂದು ವಿನಂತಿಸಲಾಗಿದೆ .

ಈ ಸಂಬಂಧ ಮಾನ್ಯ ಶಾಸಕರಿಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಸದಸ್ಯರು ಮನವಿ ಸಲ್ಲಿಸಿದರು . ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕುಮಟಾ ಸಮಿತಿಯ ಸದಸ್ಯರುಗಳು ಹಾಜರಿದ್ದರು .ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ ವೆಂಕಟೇಶ ಶಾನಭಾಗ ಉಪಾಧ್ಯಕ್ಷರಾದ ಡಾ. ಚೈತ್ರಾ ಡಿ.ಎಸ್ ,ಕಾರ್ಯದರ್ಶಿಗಳಾದ ಡಾ. ನಮೃತಾ ನಾಯಕ್,ಡಾ. ಗಣೇಶ್ ನಾಯ್ಕ್ ಡಾ. ವಿಕ್ರಮ್ ಹೆಗಡೆ,ಡಾ. ಅಶೋಕ ಭಟ್ಟ ಇನ್ನಿತರರು ಹಾಜರಿದ್ದರು