Home Important ಅನಂತಕುಮಾರ್ ಮಾತಿನ ಏಟಿಗೆ ಬೆದರಿತೇ ಸರಕಾರ? ಬದಲಾಯ್ತು ಆಮಂತ್ರಣ ಪತ್ರಿಕೆ!

ಅನಂತಕುಮಾರ್ ಮಾತಿನ ಏಟಿಗೆ ಬೆದರಿತೇ ಸರಕಾರ? ಬದಲಾಯ್ತು ಆಮಂತ್ರಣ ಪತ್ರಿಕೆ!

SHARE

ಕಾರವಾರ: ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆ ವಿಚಾರವಾಗಿ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿದ್ದು, ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸದಂತೆ ಆದೇಶ ನೀಡಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ನಮೂದಿಸುವ ಕುರಿತು ಸರ್ಕಾರದ ನಿದರ್ಶನ ಬಯಸಿದ್ದ ಜಿಲ್ಲಾಡಳಿತಕ್ಕೆ ನ.7 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಆದೇಶ ಪತ್ರ ಬಂದಿದ್ದು, ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ನಮೂದಿಸುವುದು ಬೇಡ ಎಂದು ಸೂಚಿಸಲಾಗಿದೆ. ಅಲ್ಲದೇ ಜನಪ್ರತಿನಿಧಿಗಳೇ ತನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸದಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಿದಲ್ಲಿ, ಅಂತಹ ಜನಪ್ರತಿನಿಧಿಗಳ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸದಂತೆ ನಿರ್ದೇಶನ‌ ನೀಡಲಾಗಿದೆ.

ತಾವು ಹೆಸರು ಹಾಕಿಯೇ ‘ಸಿದ್ಧ ‘ ಎಂದು ಮೊದಲು ಸಂಸದರು ಬರೆದ ಪತ್ರವನ್ನು ನಿರ್ಲಕ್ಷ್ಯಿಸಿದ ಸರ್ಕಾರಕ್ಕೆ ಸರಿಯಾಗಿ ಮಾತಿನ ಛಾಟಿ ಬೀಸಿದ ಅನಂತಕುಮಾರ್ ಹೆಗಡೆಯವರ ಹೇಳಿಕೆಗೆ ಬೆದರಿದ ಸರ್ಕಾರ ಇವರು ತಮ್ಮ ಸರ್ಕಾರ ವನ್ನು ಮೂರಾ ಬಟ್ಟೆಗೆ ಹರಾಜು ಹಾಕುವುದು ಖಂಡಿತ ಎಂದು ಮನಗಂಡ ಸರ್ಕಾರ ಕೊನೆಗೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಜಿಲ್ಲಾಧಿಕಾರಿ ಯವರಿಗೆ ನಿರ್ದೇಶಿಸಿದೆ.

ಅದೇರೀತಿ ನವೆಂಬರ್ 10 ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಬಿಜೆಪಿ ನಾಯಕರ ಹೆಸರನ್ನು ಕೈಬಿಟ್ಟು ಹೊಸ ಆಹ್ವಾನ ಪತ್ರಿಕೆ ಮುದ್ರಿಸಿದೆ.

ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದ ಸುರೇಶ್ ಅಂಗಡಿ ಅವರು ಈ ಹಿಂದೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸುವುದು ಬೇಡ ಎಂದು ತಿಳಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು.


ಹಳೆಯ ಆಮಂತ್ರಣ ಪತ್ರಿಕೆ

ಪತ್ರ ಬರೆದಿದ್ದರೂ ಬೆಳಗಾವಿ ಜಿಲ್ಲಾಡಳಿತ ಶಿಷ್ಟಾಚಾರದ ಪ್ರಕಾರ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಇಬ್ಬರು ನಾಯಕರ ಹೆಸರನ್ನು ಪ್ರಕಟಿಸಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿತ್ತು. ಆದರೆ ಈಗ ಸರ್ಕಾರ ನಿರ್ದಿಷ್ಟ ಪ್ರಕರಣಗಳಲ್ಲಿ ತಮ್ಮ ಹೆಸರನ್ನು ನಮೂದಿಸದಂತೆ ಜನಪ್ರತಿನಿಧಿಗಳು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಲ್ಲಿ ಆ ಜನಪ್ರತಿನಿಧಿಗಳ ಹೆಸರನ್ನು ನಮೂದಿಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಹೆಸರನ್ನು ಕೈಬಿಟ್ಟು ಹೊಸದಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದೆ.
ಈ ಹಿಂದೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಶಿಷ್ಟಾಚಾರದ ಪ್ರಕಾರ ನಾವು ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಹಾಕುತ್ತೇವೆ. ಈ ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಬಿಜೆಪಿ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದರು.

ಅನಂತ್ ಕುಮಾರ ಹೆಗಡೆ ಪ್ರತಿಕ್ರಿಯಿಸಿ, ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿ ಮುದ್ರಿಸಬೇಡಿ ಎಂದು ಹೇಳಿದ್ದೇನೆ. ಒಂದು ವೇಳೆ ಹೆಸರನ್ನು ಮುದ್ರಿಸಿದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಟಿಪ್ಪು ನಿಜ ಬಣ್ಣವನ್ನು ಬಯಲು ಮಾಡುತ್ತೇನೆ ಎಂದು ತಿಳಿಸಿದ್ದರು.

ಮೈಸೂರಿನಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ಪ್ರತಾಪ್ ಸಿಂಹ, ಇದೀಗ ಟಿಪ್ಪು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ತೆಗೆಯುವ ಮೂಲಕ ಸಿಎಂ ನಮ್ಮ ಹೋರಾಟಕ್ಕೆ ಹೆದರಿದ್ದಾರೆ. ನಾವು ಕಾರ್ಯಕ್ರಮಕ್ಕೆ ಬಂದರೆ ಟಿಪ್ಪುವಿನ ನಿಜಬಣ್ಣ ಬಯಲಾಗುತ್ತದೆ ಎಂಬ ಭಯ ಅವರಿಗಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದರು.