Home Special ಬೆಕ್ಕಿನ ಮಲದಿಂದ ತಯಾರಾಗುತ್ತೆ ವಿಶ್ವದ ದುಬಾರಿ ಕಾಫಿ!

ಬೆಕ್ಕಿನ ಮಲದಿಂದ ತಯಾರಾಗುತ್ತೆ ವಿಶ್ವದ ದುಬಾರಿ ಕಾಫಿ!

SHARE

ನವದೆಹಲಿ: ಏಷ್ಯಾದಲ್ಲಿ ಮೂರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿರುವ ಭಾರತ ಈಗ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಬೆಕ್ಕಿನ ಮಲದಿಂದ ವಿಶ್ವದ ಅತ್ಯಂತ ದುಬಾರಿ ಕಾಫಿಪುಡಿ ಉತ್ಪಾದನೆಗೆ ಚಾಲನೆ ನೀಡಿದೆ.

ಸಿವೆಟ್ ಕಾಫಿ ವಿಶ್ವದ ದುಬಾರಿ ಕಾಫಿ ಎಂದೇ ಪ್ರಸಿದ್ಧಿ ಪಡೆದಿದ್ದು, ಇದಕ್ಕೆ ಕನ್ನಡದಲ್ಲಿ ಪುನುಗು ಬೆಕ್ಕಿನ ಕಾಫಿ ಪುಡಿ ಎಂದು ಕರೆಯಲಾಗುತ್ತದೆ. ಕುಡಿಯಲು ರುಚಿ ಎನಿಸುವ ಈ ಕಾಫಿ ಬೆಲೆ ಜೇಬು ಸುಡುವುದರಲ್ಲಿ ಎರಡು ಮಾತಿಲ್ಲ. ಇದರ ಬೆಲೆ ಒಂದು ಕೆಜಿಗೆ 20 ಸಾವಿರದಿಂದ 25 ಸಾವಿರ ರುಪಾಯಿ.

ಇನ್ನು ಈ ಕಾಫಿಯನ್ನು ತಯಾರಿಸುವ ವಿಧಾನ ಕೇಳಿದ್ರೆ ಆಶ್ಚರ್ಯವಾಗುತ್ತೆ. ಹಾಗೆ ವಾಕರಿಕೆ ಬರುತ್ತೆ. ಈ ಕಾಫಿಪುಡಿ ತಯಾರಾಗುವುದು ಬೆಕ್ಕಿನ ಮಲದಿಂದ. ಆದರೆ ಪುನುಗು ಬೆಕ್ಕಿನ ದೇಹದಿಂದ ಹೊರಬೀಳುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಅತ್ಯಂತ ತ್ರಾಸದಾಯಕವಾಗಿರುವ ಕಾರಣ ಈಗ ಸಣ್ಣ ಮಟ್ಟದಲ್ಲಿ ಸಿವೆಟ್ ಕಾಫಿ ತಯಾರಿಸುವ ಉಪ ಕ್ರಮವನ್ನು ಕೊಡಗಿನಲ್ಲಿರುವ ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್(ಸಿಸಿಸಿ) ಆರಂಭಿಸಿದೆ.

ಆರಂಭಿಕ ಹಂತದಲ್ಲಿ 20 ಕೆಜಿ ಸಿವೆಟ್ ಕಾಫಿ ಉತ್ಪಾದಿಸಲಾಗಿದೆ. 2015-16ರಲ್ಲಿ 60 ಕೆಜಿ ಹಾಗೂ ಕಳೆದ ವರ್ಷ 200 ಕೆಜಿ ಕಾಫಿಪುಡಿ ಉತ್ಪಾದಿಸಲಾಗಿದೆ. ಅಕ್ಟೋಬರ್ ನಲ್ಲಿ ಪ್ರಥಮ ಬೆಳೆ ಕಟಾವಿಗೆ ಬರುವಾಗ ಸುಮಾರು 50 ಕೆಜಿ ಸಿವೆಟ್ ಕಾಫಿ ಉತ್ಪಾದಿಸುವ ನಿರೀಕ್ಷೆ ಇದೆ ಎಂದು ಸಿಸಿಸಿಯ ಸಂಸ್ಥಾಪಕರಲ್ಲಿ ಒಬ್ಬರಾದ ನರೇಂದ್ರ ಹೆಬ್ಬಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.